ಅಂಡರ್-19 ಮಹಿಳಾ ಟಿ20 ವಿಶ್ವಕಪ್‌: ಭಾರತ ಭರ್ಜರಿ ಜಯಭೇರಿ

Published : Jan 15, 2023, 08:43 AM IST
ಅಂಡರ್-19 ಮಹಿಳಾ ಟಿ20 ವಿಶ್ವಕಪ್‌: ಭಾರತ ಭರ್ಜರಿ ಜಯಭೇರಿ

ಸಾರಾಂಶ

* ಚೊಚ್ಚಲ ಆವೃತ್ತಿಯ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಶುಭಾರಂಭ * ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ದ ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ * ಶ್ವೇತಾ ಶೆರಾವತ್ ಬ್ಯಾಟಿಂಗ್‌ಗೆ ತಬ್ಬಿಬ್ಬಾದ ಹರಿಣಗಳ ಪಡೆ

ಬೆನೊನಿ(ಜ.15): ಚೊಚ್ಚಲ ಆವೃತ್ತಿಯ ಅಂಡರ್‌-19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಭರ್ಜರಿ ಆರಂಭ ಪಡೆದಿದೆ. ದ.ಆಫ್ರಿಕಾ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ 7 ವಿಕೆಟ್‌ ಗೆಲುವು ಸಾಧಿಸಿತು. 167 ರನ್‌ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕ ಆಟಗಾರ್ತಿ ಶ್ವೇತಾ ಸೆಹ್ರಾವತ್‌ (57 ಎಸೆತದಲ್ಲಿ ಔಟಾಗದೆ 92 ರನ್‌) ಹಾಗೂ ನಾಯಕಿ ಶಫಾಲಿ ವರ್ಮಾ(16 ಎಸೆತದಲ್ಲಿ 45 ರನ್‌)ರ ಸ್ಫೋಟಕ ಆಟ ನೆರವಾಯಿತು. ಭಾರತ ಇನ್ನೂ 21 ಎಸೆತ ಬಾಕಿ ಇರುವಂತೆಯೇ ಜಯಿಸಿತು. ಶ್ವೇತಾ ಅವರ ಇನ್ನಿಂಗ್‌್ಸನಲ್ಲಿ ಬರೋಬ್ಬರಿ 20 ಬೌಂಡರಿಗಳಿದ್ದವು. 

ಇದಕ್ಕೂ ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ 20 ಓವರಲ್ಲಿ 5 ವಿಕೆಟ್‌ಗೆ 166 ರನ್‌ ಗಳಿಸಿತ್ತು. ಇನ್ನು ಭಾರತ ತಂಡದ ಪರ ನಾಯಕಿ ಶಫಾಲಿ ವರ್ಮಾ ಕೇವಲ 31 ರನ್ ನೀಡಿ 2 ವಿಕೆಟ್ ಪಡೆದರೆ, ಸೋನಂ ಯಾದವ್ ಹಾಗೂ ಪರ್ಸಾವಿ ಚೋಪ್ರಾ ತಲಾ ಒಂದೊಂದು ವಿಕೆಟ್ ಪಡೆದರು.  ಭಾರತ ತನ್ನ ಮುಂದಿನ ಪಂದ್ಯವನ್ನು ಸೋಮವಾರ ಯುಎಇ ವಿರುದ್ಧ ಆಡಲಿದೆ.

ಮಹಿಳಾ ಐಪಿಎಲ್‌ ತಂಡ ಖರೀದಿಗೆ 8 ಐಪಿಎಲ್‌ ಫ್ರಾಂಚೈಸಿಗಳ ಆಸಕ್ತಿ!

ನವದೆಹಲಿ: ಪುರುಷರ ಐಪಿಎಲ್‌ನ 10 ಫ್ರಾಂಚೈಸಿಗಳ ಪೈಕಿ ಕನಿಷ್ಠ 8 ಫ್ರಾಂಚೈಸಿಗಳಿಂದ ಮಹಿಳಾ ಐಪಿಎಲ್‌ ತಂಡಕ್ಕಾಗಿ ಬಿಡ್‌ ಸಲ್ಲಿಕೆಯಾಗಲಿದೆ ಎಂದು ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ವೊಂದು ಸುದ್ದಿ ಪ್ರಕಟಿಸಿದೆ. ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತಾ ನೈಟ್‌ ರೈಡರ್ಸ್‌, ರಾಜಸ್ಥಾನ ರಾಯಲ್ಸ್‌, ಸನ್‌ರೈಸ​ರ್ಸ್ ಹೈದರಾಬಾದ್, ಪಂಜಾಬ್‌ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್‌, ಗುಜರಾತ್‌ ಟೈಟಾನ್ಸ್‌ ತಂಡಗಳಿಂದ ಬಿಡ್‌ ಸಲ್ಲಿಕೆಯಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದ್ದು, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಲಖನೌ ಸೂಪರ್‌ಜೈಂಟ್ಸ್‌ ತಂಡಗಳು ತಂಡ ಖರೀದಿಗೆ ಆಸಕ್ತಿ ತೋರಿಸಿವೆಯೇ ಎಂದು ತಿಳಿದುಬಂದಿಲ್ಲ. ಜನವರಿ 25ಕ್ಕೆ ತಂಡಗಳು ಅಂತಿಮಗೊಳ್ಳಲಿವೆ.

ಪಾಕಿಸ್ತಾನದಲ್ಲಿ 46 ವರ್ಷ ಬಳಿಕ ಕಿವೀಸ್‌ಗೆ ಸರಣಿ

ಕರಾಚಿ: ಪಾಕಿಸ್ತಾನ ನೆಲದಲ್ಲಿ 46 ವರ್ಷ ಬಳಿಕ ನ್ಯೂಜಿಲೆಂಡ್‌ ಏಕದಿನ ಸರಣಿ ಗೆದ್ದಿದೆ. ಶುಕ್ರವಾರ ನಡೆದ 3ನೇ ಹಾಗೂ ಕೊನೆಯ ಪಂದ್ಯದಲ್ಲಿ ಕಿವೀಸ್‌ 2 ವಿಕೆಟ್‌ ಗೆಲುವು ಸಾಧಿಸಿತು. ಫಖರ್‌ ಜಮಾನ್‌(101)ರ ಶತಕದ ನೆರವಿನಿಂದ ಪಾಕಿಸ್ತಾನ 50 ಓವರಲ್ಲಿ 9 ವಿಕೆಟ್‌ಗೆ 280 ರನ್‌ ಗಳಿಸಿತ್ತು. ಕಿವೀಸ್‌ 48.1 ಓವರಲ್ಲಿ 8 ವಿಕೆಟ್‌ಗೆ 281 ರನ್‌ ಗಳಿಸಿ ಜಯಿಸಿತು. ಫಿಲಿಫ್ಸ್‌ ಔಟಾಗದೆ 63 ರನ್‌ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದಕ್ಕೂ ಮೊದಲು 1976-77ರಲ್ಲಿ ಕಿವೀಸ್‌ ಸರಣಿ ಗೆದ್ದಿತ್ತು.

2016ರಲ್ಲೇ ಧೋನಿಯಿಂದ ನಾಯಕತ್ವ ಕಿತ್ತುಕೊಳ್ಳಲು ಬಯಸಿದ್ರು ವಿರಾಟ್ ಕೊಹ್ಲಿ..!

ಕಿವೀಸ್‌ ವಿರುದ್ಧ ಪಂದ್ಯದ ಬಳಿಕ ಬಾಂಗ್ಲಾದೇಶಕ್ಕೆ ದೌಡಾಯಿಸಿದ ರಿಜ್ವಾನ್‌!

ಚಿತ್ತಗಾಂಗ್‌: ಶುಕ್ರವಾರ ಕಿವೀಸ್‌ ವಿರುದ್ಧ 3ನೇ ಏಕದಿನ ಪಂದ್ಯವಾಡಿದ್ದ ಪಾಕಿಸ್ತಾನದ ಮೊಹಮದ್‌ ರಿಜ್ವಾನ್‌ ಶನಿವಾರ ಬಾಂಗ್ಲಾ ಪ್ರೀಮಿಯರ್‌ ಲೀಗ್‌ನಲ್ಲಿ ಕಣಕ್ಕಿಳಿದರು. ಕಿವೀಸ್‌ ವಿರುದ್ಧದ ಪಂದ್ಯ ರಾತ್ರಿ 10.30ರ ಸುಮಾರಿಗೆ ಮುಕ್ತಾಯಗೊಂಡಿತು. ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಿದ ರಿಜ್ವಾನ್‌ ಶನಿವಾರ ಬೆಳಗ್ಗೆ ಢಾಕಾಗೆ ಬಂದಿಳಿದರು. 

ರಿಜ್ವಾನ್‌ರನ್ನು ಕೊಮಿಲಾ ವಿಕ್ಟೋರಿಯನ್ಸ್‌ ತಂಡ ಢಾಕಾದಿಂದ ಚಿತ್ತಗಾಂಗ್‌ಗೆ ಹೆಲಿಕಾಪ್ಟರ್‌ನಲ್ಲಿ ಕರೆಸಿಕೊಂಡಿತು. ರಿಜ್ವಾನ್‌ ಆಗಮನದಿಂದ ಈ ಋುತುವಿನ ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದ ಕೊಮಿಲಾ ತಂಡಕ್ಕೆ ನಿರಾಸೆಯಾಯಿತು. 11 ಎಸೆತದಲ್ಲಿ 18 ರನ್‌ ಗಳಿಸಿ ರಿಜ್ವಾನ್‌ ಔಟಾದರು. ಫಾರ್ಚೂನ್‌ ಬರಿಶಾಲ್‌ ತಂಡ 12 ರನ್‌ಗಳಿಂದ ಜಯಿಸಿತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?