12ನೇ ತರಗತಿ ಪರೀಕ್ಷೇಲಿ 80 ಬಾರಿಸಿದ ಶಫಾಲಿ ವರ್ಮಾ..!

By Naveen KodaseFirst Published May 15, 2023, 10:31 AM IST
Highlights

ಪರೀಕ್ಷೆಯಲ್ಲಿ 80+ ಸ್ಕೋರ್ ದಾಖಲಿಸಿದ ಶಫಾಲಿ ವರ್ಮಾ
ತಮ್ಮ ಅಂಕಪಟ್ಟಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಶಫಾಲಿ
2019ರಲ್ಲಿ ಭಾರತ ಪರ ಪಾದಾರ್ಪಣೆ ಮಾಡಿದ ಶಫಾಲಿ

ನವದೆಹಲಿ(ಮೇ.09): ಭಾರತ ಮಹಿಳಾ ಕ್ರಿಕೆಟ್‌ ತಂಡದ ತಾರಾ ಆಟಗಾರ್ತಿ ಶಫಾಲಿ ವರ್ಮಾ 12ನೇ ತರಗತಿ ಸಿಬಿಎಸ್‌ಇ ಬೋರ್ಡ್‌ ಪರೀಕ್ಷೆಯಲ್ಲಿ ಶೇ.80 ಅಂಕ ಪಡೆದಿದ್ದಾರೆ. ತಮ್ಮ ಅಂಕಪಟ್ಟಿಯನ್ನು ಹಿಡಿದು ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಸಾಮಾಜಿಕ ತಾಣಗಳ ಖಾತೆಗಳಲ್ಲಿ ಶಫಾಲಿ ವರ್ಮಾ ಹಂಚಿಕೊಂಡು ಫೋಟೋ ವೈರಲ್‌ ಆಗಿದೆ. 

‘ಬೋರ್ಡ್‌ ಪರೀಕ್ಷೆಯಲ್ಲೂ 80+ ಸ್ಕೋರ್‌ ಮಾಡಿದ್ದೇನೆ. ಈಗ ನನ್ನ ನೆಚ್ಚಿನ ವಿಷಯ ಕ್ರಿಕೆಟ್‌ಗೆ ಮರಳಲು ಕಾತರಿಸುತ್ತಿದ್ದೇನೆ’ ಎಂದು 19 ವರ್ಷದ ಶಫಾಲಿ ವರ್ಮಾ ಟ್ವೀಟ್‌ ಮಾಡಿದ್ದಾರೆ. 2023ರಲ್ಲಿ ಮತ್ತೊಂದು 80+ ಬಾರಿಸಿದ್ದೇನೆ. ಆದರೆ ಈ ಬಾರಿ 12th ಬೋರ್ಡ್‌ನಲ್ಲಿ. ನನ್ನ ಫಲಿತಾಂಶದ ಬಗ್ಗೆ ನನಗೆ ಹೆಮ್ಮೆಯಿದೆ. ಇದೀಗ ನನ್ನ ನೆಚ್ಚಿನ ವಿಷಯವಾದ ಕ್ರಿಕೆಟ್‌ಗೆ ಮರಳಲು ಎದುರು ನೋಡುತ್ತಿದ್ದೇನೆ ಎಂದು ಶಫಾಲಿ ವರ್ಮಾ ಬರೆದುಕೊಂಡಿದ್ದಾರೆ.  

ಶಫಾಲಿ ವರ್ಮಾ 2019ರಲ್ಲಿ ಭಾರತ ಪರ ಕಣಕ್ಕಿಳಿಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನಾಡಿದ ಅತ್ಯಂತ ಕಿರಿಯ ಮಹಿಳಾ ಕ್ರಿಕೆಟರ್ ಎನ್ನುವ ಹಿರಿಮೆಗೆ ಶಫಾಲಿ ವರ್ಮಾ ಪಾತ್ರರಾಗಿದ್ದರು. ಆಗ ಶಫಾಲಿಗೆ ಕೇವಲ 15 ವರ್ಷ ವಯಸ್ಸಾಗಿತ್ತು.  ಇದಾದ ಎರಡು ವರ್ಷಗಳ ಬಳಿಕ ಅಂದರೆ 2021ರ ಜೂನ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರು ಮಾದರಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಕ್ರಿಕೆಟರ್ ಎನ್ನುವ ವಿಶ್ವದಾಖಲೆಯನ್ನು ಶಫಾಲಿ ನಿರ್ಮಿಸಿದ್ದರು.

ಇನ್ನು ಇದಷ್ಟೇ ಅಲ್ಲದೇ 2023ರಲ್ಲಿ ನಡೆದ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾಯಕಿಯಾಗಿ ಭಾರತ ತಂಡವನ್ನು ಮುನ್ನಡೆಸಿ, ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. ಇನ್ನು ಕಳೆದ ಅಕ್ಟೋಬರ್‍‌ನಲ್ಲಿ ಶಫಾಲಿ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಂದು ಸಾವಿರ ರನ್ ಪೂರೈಸಿದ ಅತ್ಯಂತ ಕಿರಿಯ ಮಹಿಳಾ ಕ್ರಿಕೆಟರ್ ಎನ್ನುವ ದಾಖಲೆಯನ್ನು ನಿರ್ಮಿಸಿದ್ದರು.

IPL 2023 ರಿಂಕು, ರಾಣಾ ಆಟ, ಸಿಎಸ್‌ಕೆಗೆ ಸೋಲಿನ ಪಾಠ, ಪ್ಲೇ ಆಫ್ ರೇಸ್‌ನಲ್ಲಿ ಇದೀಗ ಕೆಕೆಆರ್!

ಭಾರತ ಮಹಿಳಾ ತಂಡಕ್ಕೆ ಮಜುಂದಾರ್‌ ಕೋಚ್‌?

ನವ​ದೆ​ಹ​ಲಿ: ಮುಂಬೈನ ಮಾಜಿ ಕ್ರಿಕೆಟಿಗ ಅಮೋಲ್‌ ಮಜುಂದಾರ್‌ ಭಾರತ ಮಹಿಳಾ ಕ್ರಿಕೆಟ್‌ ತಂಡದ ನೂತನ ಕೋಚ್‌ ಆಗಿ ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ಮಾಧ್ಯ​ಮ​ಗ​ಳಲ್ಲಿ ವರ​ದಿ​ಯಾ​ಗಿದೆ. ಕಳೆದ ಡಿಸೆಂಬ​ರ್‌​ನಲ್ಲಿ ರಮೇಶ್‌ ಪೊವಾರ್‌ರಿಂದ ತೆರ​ವಾ​ಗಿದ್ದ ಕೋಚ್‌ ಸ್ಥಾನವನ್ನು ಈವ​ರೆಗೆ ಹೃಷಿ​ಕೇಶ್‌ ಕಾನಿ​ಟ್ಕರ್‌ ನಿಭಾ​ಯಿ​ಸು​ತ್ತಿ​ದ್ದರು.

ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಹೀಥ್‌ ಸ್ಟ್ರೀಕ್‌ಗೆ ಕ್ಯಾನ್ಸರ್‌!

ನವದೆಹಲಿ: ಜಿಂಬಾಬ್ವೆಯ ದಿಗ್ಗಜ ಕ್ರಿಕೆಟಿಗ ಹೀಥ್‌ ಸ್ಟ್ರೀಕ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ದಕ್ಷಿಣ ಆಫ್ರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 49 ವರ್ಷದ ಸ್ಟ್ರೀಕ್‌ರ ಸ್ಥಿತಿ ಗಂಭೀರವಾಗಿದ್ದು, ಅವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎನ್ನಲಾಗಿದೆ. ಸ್ಟ್ರೀಕ್‌ ತಮ್ಮ ಕೊನೆ ದಿನಗಳನ್ನು ಕಳೆಯುತ್ತಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. 

1993ರಿಂದ 2005ರ ವರೆಗೂ ಜಿಂಬಾಬ್ವೆ ಪರ 65 ಟೆಸ್ಟ್‌ ಹಾಗೂ 189 ಏಕದಿನ ಪಂದ್ಯಗಳನ್ನಾಡಿದ್ದ ಅವರು ಎರಡೂ ಮಾದರಿ ಸೇರಿ 4933 ರನ್‌ ಗಳಿಸಿದ್ದರು. ಜೊತೆಗೆ 455 ವಿಕೆಟ್‌ ಸಹ ಕಬಳಿಸಿದ್ದರು. ನಿವೃತ್ತಿ ಬಳಿಕ ಕೋಚ್‌ ಆಗಿ ಕಾರ‍್ಯನಿರ್ವಹಿಸುತ್ತಿದ್ದ ಸ್ಟ್ರೀಕ್‌ರನ್ನು 2021ರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಐಸಿಸಿ 8 ವರ್ಷ ನಿಷೇಧಕ್ಕೊಳಪಡಿಸಿತ್ತು.

click me!