WI vs IND ಎರಡನೇ ಏಕದಿನದಲ್ಲಿ ಟಾಸ್ ಗೆದ್ದ ವಿಂಡೀಸ್, ಭಾರತದಲ್ಲಿ ಮಹತ್ವದ ಬದಲಾವಣೆ!

Published : Jul 24, 2022, 06:36 PM ISTUpdated : Jul 24, 2022, 06:46 PM IST
WI vs IND ಎರಡನೇ ಏಕದಿನದಲ್ಲಿ ಟಾಸ್ ಗೆದ್ದ ವಿಂಡೀಸ್, ಭಾರತದಲ್ಲಿ ಮಹತ್ವದ ಬದಲಾವಣೆ!

ಸಾರಾಂಶ

ಮೊದಲ ಏಕದಿನ ಪಂದ್ಯದಲ್ಲಿನ ರೋಚಕ ಗೆಲುವಿನ ಬಳಿಕ ಟೀಂ ಇಂಡಿಯಾ ಇದೀಗ 2ನೇ ಪಂದ್ಯಕ್ಕೆ ಸಜ್ಜಾಗಿದೆ. ಈ ಮಹತ್ವದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇಂದಿನ ಪಂದ್ಯಕ್ಕೆ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ. ತಂಡದ ವಿವರ ಇಲ್ಲಿವೆ.

ಟ್ರಿನಿಡ್ಯಾಡ್(ಜು.24):  ಭಾರತ ವಿರುದ್ಧದ ಏರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಎರಡೂ ತಂಡದಲ್ಲಿ ಬದಲಾವಣೆಗಳಾಗಿವೆ. ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಕಳೆದ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿದ ಕನ್ನಡಿಗ ವೇಗಿ ಪ್ರಸಿದ್ಧ್ ಕೃಷ್ಣ ತಂಡದಿಂದ ಹೊರಗುಳಿದಿದ್ದಾರೆ. ಪ್ರಸಿದ್ಧ್ ಬದಲು ವೇಗಿ ಅವೇಶ್ ಖಾನ್ ಏಕದಿನ ತಂಡಕ್ಕೆ ಪದಾರ್ಪಣೆ  ಮಾಡಿದ್ದಾರೆ.  ಇತ್ತ ವೆಸ್ಟ್ ಇಂಡೀಸ್ ತಂಡದಲ್ಲಿ ಇಂಜುರಿ ಕಾರಣದಿಂದ ಅನಿವಾರ್ಯ ಬದಲಾವಣೆ ಮಾಡಲಾಗಿದೆ. ಹೈಡೆನ್ ವಾಲ್ಶ್ ತಂಡ ಸೇರಿಕೊಂಡಿದ್ದಾರೆ. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ಮತ್ತಷ್ಟು ಕುತೂಹಲ ಪಂದ್ಯವಾಗುವ ಎಲ್ಲಾ ಲಕ್ಷಣಗಳಿವೆ. ಕಾರಣ ಮೊದಲ ಪಂದ್ಯದಲ್ಲಿ  3 ರನ್ ರೋಚಕ ಗೆಲುವು ಸಾಧಿಸಿದ ಭಾರತ ಇದೀಗ ಎರಡನೇ ಪಂದ್ಯ ಗೆದ್ದು ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ. ಇತ್ತ ವಿಂಡೀಸ್ ತಂಡಕ್ಕೆ ಸರಣಿಯಲ್ಲಿ ಜೀವಂತವಾಗಿರಲು ಪಂದ್ಯ ಗೆಲ್ಲಲೇಬೇಕಿದೆ. ಹೀಗಾಗಿ ಮೊದಲ ಪಂದ್ಯಕ್ಕೆ ರೋಚಕ ಹೋರಾಟ ಏರ್ಪಡುವ ಸಾಧ್ಯತೆ ಇದೆ. 

ಟೀಂ ಇಂಡಿಯಾ ಪ್ಲೇಯಿಂಗ್ 11
ಶಿಖರ್ ಧವನ್(ನಾಯಕ), ಶುಬಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ದೀಪಕ್ ಹೂಡ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಹಾಲ್, ಅವೇಶ್ ಖಾನ್

ಜಡೇಜಾ ಇಂಜುರಿ; ಶ್ರೇಯಸ್ ಅಯ್ಯರ್‌ಗೆ ಒಲಿದ ಟೀಂ ಇಂಡಿಯಾ ಉಪನಾಯಕ ಪಟ್ಟ..!

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11
ಶೈ ಹೋಪ್, ಬ್ರ್ಯಾಂಡನ್ ಕಿಂಗ್, ಶಮ್ರಾ ಬ್ರೂಕ್ಸ್, ಕೈಲ್ ಮೈಯರ್ಸ್, ನಿಕೋಲಸ್ ಪೂರನ್(ನಾಯಕ), ರೋವ್ಮನ್ ಪೊವೆಲ್, ಆಕೀಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಅಲ್ಜಾರಿ ಜೊಸೆಫ್, ಜೈಡೆನ್ ಸೀಲ್ಸ್, ಹೈಡನ್ ವಾಲ್ಶ್

ಕಳೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಉತ್ತಮ ರನ್ ದಾಖಲಿಸಿದ್ದೆವು. ಹೀಗಾಗಿ ಇಂದೂ ಕೂಡ ಬ್ಯಾಟಿಂಗ್ ಮಾಡಲು ನಿರ್ದರಿಸಿದ್ದೆವು. ಆದರೆ ವಿಂಡೀಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ವೆಸ್ಟ್ ಇಂಡೀಸ್ ತಂಡವನ್ನು ನಿಯಂತ್ರಿಸಿ ಈ ಪಂದ್ಯದಲ್ಲಿ ಉತ್ತಮ ಹೋರಾಟ ನೀಡುತ್ತೇವೆ ಎಂದು ನಾಯಕ ಶಿಖರ ಧವನ್ ಹೇಳಿದ್ದಾರೆ. ಟಾಸ್ ಗೆದ್ದು ಮಾತನಾಡಿದ ವಿಂಡೀಸ್ ನಾಯಕ ಪೂರನ್, 250 ರನ್ ಸಿಡಿಸಿದರೆ ಚೇಸಿಂಗ್ ಕಷ್ಟವಾಗಲಿದೆ. ಹೀಗಾಗಿ ಉತ್ತಮ್ ರನ್ ದಾಖಲಿಸಿ ಪಂದ್ಯದ  ಮೂಲಕ ಕಮ್‌ಬ್ಯಾಕ್ ಮಾಡಲಿದ್ದೇವೆ ಎಂದಿದ್ದಾರೆ.

WI vs IND: ಕೆರಿಬಿಯನ್ನರ ವಿರುದ್ಧ ಗೆದ್ದುಬೀಗಿದ ಟೀಂ ಇಂಡಿಯಾ, ಸರಣಿಯಲ್ಲಿ 1-0 ಮುನ್ನಡೆ

ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಮಧ್ಯಮ ಕ್ರಮಾಂಕದಲ್ಲಿ ಕೊಂಚ ಸಮಸ್ಯೆ ಎದುರಿಸಿತ್ತು. ನಾಯಕ ಶಿಖರ್ ಧವನ್ ಹಾಗೂ ಶುಭಮನ್ ಗಿಲ್ ಅತ್ಯುತ್ತಮ ಹೋರಾಟದ ಬಳಿಕ ಶ್ರೇಯಸ್ ಅಯ್ಯರ್ ಹಾಫ್ ಸೆಂಚುರಿ ಸಿಡಿಸಿ ನೆರವಾದರು. ಟಾಪ್ 3 ಬ್ಯಾಟ್ಸ್‌ಮನ್ ವಿಕೆಟ್ ಪತನದ ಬಳಿಕ ಟೀಂ ಇಂಡಿಯಾ ನಿರೀಕ್ಷಿತ ರನ್ ಸಿಡಿಸಿಲು ಸಾಧ್ಯವಾಗಲಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಸಮಸ್ಯೆ ಬಗೆಹರಿಸಲು ಟೀಂ ಇಂಡಿಯಾ ಮುಂದಾಗಿದೆ. 308 ರನ್ ಸಿಡಿಸಿದ ಟೀಂ ಇಂಡಿಯಾ ಕೇವಲ 3 ರನ್‌ಗಳಿಂದ ಪಂದ್ಯ ಗೆದ್ದುಕೊಂಡಿತು. ಬೌಲಿಂಗ್‌ನಲ್ಲೂ ಕೊಂಚ ದುಬಾರಿಯಾಗಿತ್ತು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!
U19 Asia Cup: ಮತ್ತೆ ಸಿಕ್ಸರ್ ಸುರಿಮಳೆ ಹರಿಸಿ ಸ್ಪೋಟಕ ಶತಕ ಚಚ್ಚಿದ ವೈಭವ್ ಸೂರ್ಯವಂಶಿ!