WI vs IND ಭಾರತಕ್ಕೆ ಬೃಹತ್ ಟಾರ್ಗೆಟ್, ಸರಣಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿ ವಿಂಡೀಸ್!

Published : Jul 24, 2022, 11:01 PM IST
WI vs IND ಭಾರತಕ್ಕೆ ಬೃಹತ್ ಟಾರ್ಗೆಟ್, ಸರಣಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿ ವಿಂಡೀಸ್!

ಸಾರಾಂಶ

ದ್ವಿತೀಯ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 311 ರನ್ ಸಿಡಿಸಿದೆ. ಬೃಹತ್ ಮೊತ್ತ ಟಾರ್ಗೆಟ್ ಪಡೆದಿರುವ ಟೀಂ ಇಂಡಿಯಾ ಯಶಸ್ವಿಯಾಗಿ ಚೇಸ್ ಮಾಡುವ ವಿಶ್ವಾಸದಲ್ಲಿದೆ.

ಟ್ರಿನಿಡ್ಯಾಡ್(ಜು.24):  ಶೈ ಹೋಪ್ ಭರ್ಜರಿ ಸೆಂಚುರಿ ಹಾಗೂ ನಿಕೋಲಸ್ ಪೂರನ್ ಹಾಫ್ ಸೆಂಚುರಿ ನೆರವಿನಿಂದ ವೆಸ್ಟ್ ಇಂಡೀಸ್ 6 ವಿಕೆಟ್ ನಷ್ಟಕ್ಕೆ 311 ರನ್ ಸಿಡಿಸಿದೆ.  ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆಯಿತು. ಶೈ ಹೋಪ್ ಹಾಗೂ ಕೈಲ್ ಮೇಯರ್ಸ್ ಹೋರಾಟ ಟೀಂ ಇಂಡಿ ಇಂಡಿಯಾಗೆ ಆರಂಭದಲ್ಲೇ ತಲೆನೋವು ಹೆಚ್ಚಿಸಿತು. ಆರಂಭಿಕರು ಮೊದಲ ವಿಕೆಟ್‌ಗೆ 65 ರನ್ ಜೊತೆಯಾಟ ನೀಡಿದರು. ಕೈಲ್ ಮೇಯರ್ಸ್ 39 ರನ್ ಸಿಡಿಸಿ ಔಟಾದರು. ಆದರೆ ಹೋಪ್ ವಿಂಡೀಸ್ ತಂಡಕ್ಕೆ ಆಸರೆಯಾದರು. ಶ್ಯಮ್ರಾ ಬ್ರೂಕ್ಸ್ ಜೊತೆ ಇನ್ನಿಂಗ್ಸ್ ಮುಂದುವರಿಸಿದ ಶೈ ಹೋಪ್ ಮತ್ತೆ ಅಬ್ಬರಸಲು ಆರಂಭಿಸಿದರು. ಇದರಿಂದ ವಿಂಡೀಸ್ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು.  

ಬೂಕ್ಸ್ 35 ರನ್ ಸಿಡಿಸಿ ಔಟಾದದರು. ಇದರ ಬೆನ್ನಲ್ಲೇ ಬ್ರ್ಯಾಂಡನ್ ಕಿಂಗ್ ಡಕೌಟ್ ಆದರು. 130ರನ್‌ಗೆ ವಿಂಡೀಸ್ 3ನೇ ವಿಕೆಟ್ ಕಳೆದುಕೊಂಡಿತು. ಆದರೆ ಶೈ ಹೋಪ್ ಹಾಗೂ ನಾಯಕ ನಿಕೋಲಸ್ ಪೂರನ್ ಹೋರಾಟದಿಂದ ವೆಸ್ಟ್ ಇಂಡೀಸ್ ಯಾವುದೇ ಅಡೆ ತಡೆ ಇಲ್ಲದೆ ರನ್ ಕಲೆಹಾಕಿತು. ಇತ್ತ ಪೂರನ್ ಅರ್ಧಶತಕ ಸಿಡಿಸಿದರು. 

ಶೈ ಹೋಪ್ ಹಾಗೂ ಪೂರನ್ ಬ್ಯಾಟಿಂಗ್ ಅಬ್ಬರದಿಂದ ವೆಸ್ಟ್ ಇಂಡೀಸ್ 300 ರನ್ ಗಡಿಯತ್ತ ದಾಪುಗಾಲಿಟ್ಟಿತು. ಶೈ ಹೋಪ್ ಆಕರ್ಷಕ ಸೆಂಚುರಿ ಸಿಡಿಸಿ ಮಿಂಚದರು. ಪೂರನ್ 74 ರನ್ ಸಿಡಿಸಿ ಔಟಾದರು. ಇತ್ತ ರೋವ್ಮನ್ ಪೊವೆಲ್ 13 ರನ್ ಸಿಡಿಸಿ ಔಟಾದರು. ಇತ್ತ ರೋಮಾರಿಯೋ ಅಜೇಯ ಶೆಫರ್ಡ್ 15 ರನ್ ಸಿಡಿಸಿದರು. ಸೆಂಚುರಿ ಸಿಡಿಸಿ ಅಬ್ಬರಿಸಿದ ಶೈ ಹೋಪ್ 115 ರನ್ ಕಾಣಿಕೆ ನೀಡಿದರು. ಅಕೆಲ್ ಹುಸೈನ್ ಅಜೇಯ 6 ರನ್ ಸಿಡಿಸಿದರು.  ಈ ಮೂಲಕ ವೆಸ್ಟ್ ಇಂಡೀಸ್ 6 ವಿಕೆಟ್ ನಷ್ಟಕ್ಕೆ 311 ರನ್ ಸಿಡಿಸಿತು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?
T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?