
ಬೆಂಗಳೂರು: ಕೊಲಂಬೊದ ಆರ್. ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಂನಲ್ಲಿ 2026ರ ಟಿ20 ವಿಶ್ವಕಪ್‌ನ ಗ್ರೂಪ್ ಹಂತದ ಪಂದ್ಯ ನಡೀತು. ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಹೈವೋಲ್ಟೇಜ್ ಮ್ಯಾಚ್‌ನಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತು. ಎಲ್ಲಾ ಆಟಗಾರರು ಸಂಭ್ರಮದಲ್ಲಿದ್ರು. ಆದ್ರೆ, ಇದೇ ಹೊತ್ತಲ್ಲಿ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಮಾತ್ರ ಸಿಕ್ಕಾಪಟ್ಟೆ ಕೋಪದಿಂದ ಕುದಿಯುತ್ತಿದ್ದರು. ಟೀಂ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ ಮೇಲೆ ಗರಂ ಆಗಿದ್ದ ವಿಡಿಯೋ ಒಂದು ವೈರಲ್ ಆಗಿದೆ. ಅಷ್ಟಕ್ಕೂ ಕುಲ್ದೀಪ್ ಮಾಡಿದ ತಪ್ಪೇನು? ಕ್ಯಾಪ್ಟನ್ ಯಾಕೆ ಅಷ್ಟು ಕೋಪಗೊಂಡರು? ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
ಭಾರತ-ಪಾಕಿಸ್ತಾನ ಪಂದ್ಯದ 18ನೇ ಓವರ್‌ನಲ್ಲಿ ಕುಲ್ದೀಪ್ ಯಾದವ್ ಒಂದು ದೊಡ್ಡ ತಪ್ಪು ಮಾಡಿದರು. ಇದೇ ಕಾರಣಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಇಬ್ಬರೂ ಮೈದಾನದಲ್ಲೇ ಅಸಮಾಧಾನ ಹೊರಹಾಕಿದರು. ಅಸಲಿಗೆ, ಆ ಓವರ್‌ನ ಎರಡನೇ ಎಸೆತದಲ್ಲಿ ಶಾಹೀನ್ ಶಾ ಆಫ್ರಿದಿ ದೊಡ್ಡ ಹೊಡೆತಕ್ಕೆ ಕೈ ಹಾಕಿದರು. ಆಗ ಲಾಂಗ್ ಆನ್‌ನಲ್ಲಿದ್ದ ಕುಲ್ದೀಪ್ ಯಾದವ್, ಸುಲಭದ ಕ್ಯಾಚ್ ಕೈಚೆಲ್ಲಿದರು. ಇದರಿಂದ ಶಾಹೀನ್‌ಗೆ ಬರೋಬ್ಬರಿ 6 ರನ್ ಸಿಕ್ತು. ಇದೇ ತಪ್ಪಿನಿಂದಾಗಿ ಸೂರ್ಯಕುಮಾರ್, ಕುಲ್ದೀಪ್‌ಗೆ ಕಣ್ಣಲ್ಲೇ ಬೆದರಿಸಿದರೆ, ಹಾರ್ದಿಕ್ ಪಾಂಡ್ಯ ಕೂಡ ಬಹಿರಂಗವಾಗಿಯೇ ತಮ್ಮ ಕೋಪವನ್ನು ವ್ಯಕ್ತಪಡಿಸಿದರು. ಅಂದಹಾಗೆ, ಅದೇ 18ನೇ ಓವರ್‌ನಲ್ಲೇ ಹಾರ್ದಿಕ್ ಪಾಂಡ್ಯ ಕೊನೆಯ ವಿಕೆಟ್ ಪಡೆದು ಪಾಕಿಸ್ತಾನದ ಇನಿಂಗ್ಸ್‌ಗೆ ಅಂತ್ಯ ಹಾಡಿದರು.
ಸದ್ಯ ಎಕ್ಸ್ (ಹಿಂದಿನ ಟ್ವಿಟ್ಟರ್) ಪ್ಲಾಟ್‌ಫಾರ್ಮ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರ ಈ ಕೋಪದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪಂದ್ಯದ ನಂತರ ಆಟಗಾರರು ಪೆವಿಲಿಯನ್‌ಗೆ ವಾಪಸ್ ಬರುವಾಗ, ಕುಲ್ದೀಪ್ ಯಾದವ್ ಬರುತ್ತಿದ್ದಂತೆ ಸೂರ್ಯಕುಮಾರ್ ಕೆಕ್ಕರಿಸಿ ನೋಡುತ್ತಾರೆ. ಇನ್ನೊಂದು ವಿಡಿಯೋದಲ್ಲಿ ಹಾರ್ದಿಕ್ ಕೂಡ ಕುಲ್ದೀಪ್ ಮೇಲೆ ರೇಗಾಡುತ್ತಿರುವುದು ಕಾಣಿಸುತ್ತೆ. ಫೀಲ್ಡಿಂಗ್‌ನಲ್ಲಿ ಕುಲ್ದೀಪ್ ತಪ್ಪು ಮಾಡಿರಬಹುದು, ಅದಕ್ಕೆ ಕ್ಯಾಪ್ಟನ್ ಕೋಪವನ್ನೂ ಎದುರಿಸಬೇಕಾಯ್ತು.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದ ಅನುಭವಿ ಲೆಗ್‌ಸ್ಪಿನ್ನರ್ ಕುಲ್ದೀಪ್ ಯಾದವ್, ಪಾಕಿಸ್ತಾನ ಎದುರಿನ ಮಹತ್ವದ ಪಂದ್ಯದಲ್ಲಿ ಕಣಕ್ಕಿಳಿದರು. ಸ್ಪಿನ್ ಸ್ನೇಹಿ ಪ್ರೇಮದಾಸ ಸ್ಟೇಡಿಯಂನಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಕುಲ್ದೀಪ್ ಯಾದವ್ ಯಶಸ್ವಿಯಾದರು. ಪಾಕ್ ಎದುರು 3 ಓವರ್ ಬೌಲ್ ಮಾಡಿ ಕೇವಲ 14 ರನ್ ನೀಡಿ 1 ವಿಕೆಟ್ ಪಡೆಯುವಲ್ಲಿ ಕುಲ್ದೀಪ್ ಯಾದವ್ ಯಶಸ್ವಿಯಾದರು. ಪಾಕಿಸ್ತಾನದ ವಿರುದ್ಧ ಇದುವರೆಗೂ ಒಟ್ಟು 9 ಟಿ20 ಪಂದ್ಯಗಳನ್ನಾಡಿರುವ ಕುಲ್ದೀಪ್ ಯಾದವ್, 23 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಒಂದು ಬಾರಿ 4 ವಿಕೆಟ್ ಮತ್ತು ಇನ್ನೊಂದು ಬಾರಿ 5 ವಿಕೆಟ್ ಪಡೆದ ಸಾಧನೆಯೂ ಸೇರಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.