Cricket ಸಮರಕ್ಕೆ '22 ಯಾರ್ಡ್ಸ್ ಸೂಕ್ತವೆಂದಿದ್ದೇಕೆ?: ಇಲ್ಲಿದೆ ಈ ಟೆಕ್ನಿಕಲ್‌ ಕಂಪ್ಲೀಟ್ ಹಿಸ್ಟರಿ!

Published : Sep 24, 2026, 10:01 PM IST
Cricket ground

ಸಾರಾಂಶ

ಕ್ರಿಕೆಟ್ ಪಿಚ್‌ನ ಉದ್ದವನ್ನು ನಿಖರವಾಗಿ 22 ಗಜಗಳಿಗೆ ನಿಗದಿಪಡಿಸಿರುವುದರ ಹಿಂದೆ 18ನೇ ಶತಮಾನದ ಬ್ರಿಟಿಷರ 'ಗುಂಟರ್ಸ್ ಚೈನ್' ಅಳತೆಯ ರೋಮಾಂಚನಕಾರಿ ಇತಿಹಾಸವಿದೆ. ಈ ನಿರ್ದಿಷ್ಟ ಅಂತರವು ಬೌಲರ್ ಮತ್ತು ಬ್ಯಾಟರ್ ನಡುವೆ ಅತ್ಯುತ್ತಮ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಪಿಚ್‌ನ ಅಳತೆಯಲ್ಲಿ ಸ್ವಲ್ಪ ಬದಲಾವಣೆಯಾದರೂ ಇಡೀ ಆಟದ ಗತಿಯೇ ಸಂಪೂರ್ಣವಾಗಿ ಬದಲಾಗುತ್ತದೆ.

ಇತ್ತೀಚೆಗೆ ಜಪಾನ್ ವಿರುದ್ಧ ಭಾರತ ತಂಡ ಆಡಿದ್ದನ್ನು ಗಮನಿಸಿದಾಗ ನಮಗೆ ಮೂಡುವ ಮೊದಲ ಪ್ರಶ್ನೆ— ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಅಥವಾ ಶ್ರೇಯಸ್ ಅಯ್ಯರ್ ಎಲ್ಲರ ಕೈಯಲ್ಲೂ ಒಂದೇ ರೀತಿಯ ಬ್ಯಾಟ್ ಇರುತ್ತದೆ, ಚೆಂಡು ಕೂಡ ಒಂದೇ, ಆದರೂ ಕೆಲವು ಪಂದ್ಯಗಳಲ್ಲಿ ಸಿಕ್ಸರ್ ಬಾರಿಸುವುದು ಏಕೆ ಕಷ್ಟವಾಗುತ್ತದೆ? ಇದಕ್ಕೆ ಉತ್ತರವೇ ಆ '22 ಗಜಗಳ ಪಿಚ್'! ಈ ಮಣ್ಣಿನ ಪಟ್ಟಿ ತನ್ನ ಸ್ವಭಾವ ಬದಲಾಯಿಸಿದಾಗ ಜಗತ್ತಿನ ದಿಗ್ಗಜ ಆಟಗಾರರೂ ಬೆವತು ಹೋಗುತ್ತಾರೆ. ಆದರೆ, ಕ್ರಿಕೆಟ್ ಅಂಗಳದಲ್ಲಿ ಬೌಲರ್ ಮತ್ತು ಬ್ಯಾಟರ್ ನಡುವಿನ ಅಂತರವನ್ನು ಕಖಚಿತವಾಗಿ 22 ಗಜಗಳಿಗೇ ನಿಗದಿಪಡಿಸಿದ್ದು ಏಕೆ? ಇದರ ಹಿಂದೆ 300 ವರ್ಷಗಳ ರೋಮಾಂಚನಕಾರಿ ಇತಿಹಾಸವಿದೆ.

ಯಾವುದೇ ಮಾದರಿಗೂ ಅದೇ ನಿರ್ಣಾಯಕ!

ಟೆಸ್ಟ್, ಏಕದಿನ ಅಥವಾ ಟಿ20 ಮಾದರಿ ಯಾವುದೇ ಇರಲಿ, ಪ್ರಪಂಚದಾದ್ಯಂತ ಕ್ರಿಕೆಟ್ ಪಿಚ್‌ನ ಉದ್ದ 22 ಗಜಗಳು ಅಂದರೆ 20.12 ಮೀಟರ್‌ಗಳಾಗಿಯೇ ಇರುತ್ತದೆ. ಒಂದೆಡೆ ಬೌಲರ್ ತನ್ನ ವೇಗ ಹಾಗೂ ಸ್ವಿಂಗ್‌ನಿಂದ ಸವಾಲು ಎಸೆದರೆ, ಮತ್ತೊಂದೆಡೆ ಬ್ಯಾಟರ್ ತನ್ನ ಟೈಮಿಂಗ್, ತಂತ್ರ ಹಾಗೂ ಪಾದಚಲನೆಯಿಂದ (Footwork) ಆ ಸವಾಲನ್ನು ಎದುರಿಸುವ ನಿರ್ಣಾಯಕ ಅಂತರವಿದು.

'ಗುಂಟರ್ಸ್ ಚೈನ್' ಮತ್ತು 22 ಗಜಗಳ ಪಿಚ್ ನಿಗದಿಯಾದ ಕಥೆ!

ಈ 22 ಗಜಗಳ ಅಳತೆಯ ಬೇರುಗಳು 18 ನೇ ಶತಮಾನದ ಇಂಗ್ಲೆಂಡ್‌ನಲ್ಲಿವೆ. ಆ ಕಾಲದಲ್ಲಿ ಜಮೀನು ಹಾಗೂ ಭೂಮಿಯನ್ನು ಅಳೆಯಲು ಬ್ರಿಟಿಷರು 'ಗುಂಟರ್ಸ್ ಚೈನ್' (Gunter's Chain) ಎಂಬ 100 ಕೊಂಡಿಗಳಿದ್ದ ವಿಶೇಷ ಅಳತೆ ಸರಪಳಿಯನ್ನು ಬಳಸುತ್ತಿದ್ದರು. ಈ ಸರಪಳಿಯ ಒಟ್ಟು ಉದ್ದ ಕಖಚಿತವಾಗಿ 66 ಅಡಿ, ಅಂದರೆ 22 ಗಜಗಳಾಗಿತ್ತು. 18 ನೇ ಶತಮಾನದಲ್ಲಿ ಕ್ರಿಕೆಟ್ ಆಟವು ನಿಯಮಾವಳಿಗಳೊಂದಿಗೆ ಸಂಘಟಿತವಾಗಲು ಪ್ರಾರಂಭಿಸಿದಾಗ, ಮೈದಾನದ ಆಯಾಮಗಳನ್ನು ನಿಗದಿಪಡಿಸಲು ಈ ಸಾಂಪ್ರದಾಯಿಕ ಅಳತೆ ಸರಪಳಿಯನ್ನೇ ಬಳಸಲಾಯಿತು. ಕ್ರಮೇಣ ಈ 'ಗುಂಟರ್ಸ್ ಚೈನ್' ಅಳತೆಯೇ ಕ್ರಿಕೆಟ್‌ನ ಅಧಿಕೃತ ಪಿಚ್ ಉದ್ದವಾಗಿ ಕಾಯ್ದೆಯಾಯಿತು. ಅಂದರೆ, ಇಂದು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜೋ ರೂಟ್ ಅಥವಾ ಬಾಬರ್ ಅಜಮ್ ಎದುರಿಸುವ ಪಿಚ್ ಅಳತೆಯು ಪ್ರಾಚೀನ ಬ್ರಿಟಿಷ್ ಅಳತೆ ತಂತ್ರದೊಂದಿಗೆ ನೇರ ಸಂಬಂಧ ಹೊಂದಿದೆ.

22 ಗಜ ಅಂತರದಲ್ಲೇ ಇದ್ಯಾ ಬ್ಯಾಟ್-ಚೆಂಡಿನ ಅಸಲಿ ಸಮತೋಲನ?

22 ಗಜ ಎಂಬುದು ಕೇವಲ ಕಾಕತಾಳೀಯವಲ್ಲ; ಅದು ಆಟಕ್ಕೆ ನೀಡಿರುವ ಅಚ್ಚುಕಟ್ಟಾದ ಸಮತೋಲನ. ಈ ಅಂತರವಿದ್ದಾಗ ಮಾತ್ರ ಬೌಲರ್ ಎಸೆಯುವ ಚೆಂಡಿಗೆ ಸೂಕ್ತ ವೇಗ, ಬೌನ್ಸ್, ಸ್ವಿಂಗ್ ಮತ್ತು ಸ್ಪಿನ್ ದೊರೆಯುತ್ತದೆ. ಅದೇ ಸಮಯದಲ್ಲಿ, ಗಂಟೆಗೆ 140-150 ಕಿ.ಮೀ ವೇಗದಲ್ಲಿ ಬರುವ ಚೆಂಡಿನ ಲೈನ್, ಲೆಂತ್ ಹಾಗೂ ಚಲನೆಯನ್ನು ಗ್ರಹಿಸಿ, ಸೂಕ್ತ ಶೌಟ್ ಆಡಲು ಬ್ಯಾಟರ್‌ಗೆ ಕೇವಲ ಸೆಕೆಂಡಿನ ಕೆಲವೇ ಭಾಗಗಳಷ್ಟು (ಮೈಕ್ರೋಸೆಕೆಂಡ್) ಸಮಯ ಸಿಗುತ್ತದೆ.

ಕೇವಲ 2-3 ಗಜಗಳ ವ್ಯತ್ಯಾಸವೂ ಇಡೀ ಆಟವನ್ನು ಬದಲಾಯಿಸಬಲ್ಲದು!

ಒಂದು ವೇಳೆ ಪಿಚ್ 20 ಗಜಗಳಾಗಿದ್ದರೆ; ಪಿಚ್ ಉದ್ದವನ್ನು 22 ಗಜದಿಂದ 20 ಕ್ಕೆ ತಗ್ಗಿಸಿದರೆ ಚೆಂಡು ತಕ್ಷಣವೇ ಬ್ಯಾಟರ್‌ನತ್ತ ತಲುಪುವುದರಿಂದ ಪ್ರತಿಕ್ರಿಯಿಸುವ ಸಮಯವೇ ಸಿಗುವುದಿಲ್ಲ. ವೇಗಿಗಳ ಬೌನ್ಸರ್ ತೀರಾ ಅಪಾಯಕಾರಿಯಾಗಲಿದ್ದು, ಬ್ಯಾಟರ್‌ಗಳ ತಂತ್ರ ಹಾಗೂ ಪಾದಚಲನೆ ಸಂಪೂರ್ಣ ಏರುಪೇರಾಗುತ್ತದೆ.

ಒಂದು ವೇಳೆ ಪಿಚ್ 25 ಗಜಗಳಾಗಿದ್ದರೆ?

ಪಿಚ್ ಅಳತೆಯನ್ನು 25 ಗಜಗಳಿಗೆ ಹೆಚ್ಚಿಸಿದರೆ ಬ್ಯಾಟರ್‌ಗಳಿಗೆ ಚೆಂಡನ್ನು ಜಡ್ಜ್ ಮಾಡಲು ಅಗತ್ಯಕ್ಕಿಂತ ಹೆಚ್ಚು ಸಮಯ ಸಿಗುತ್ತದೆ. ಬೌಲರ್‌ಗಳ ವೇಗ ಹಾಗೂ ಸ್ಪಿನ್ ಪ್ರಭಾವ ಕಡಿಮೆಯಾಗಿ ಆಟದ ರೋಮಾಂಚನವೇ ಹೊರಟುಹೋಗುತ್ತದೆ. ಅಂತಿಮವಾಗಿ, ಕ್ರಿಕೆಟ್ ತಂತ್ರಜ್ಞಾನ, ಫಿಟ್‌ನೆಸ್ ಹಾಗೂ ಬ್ಯಾಟ್‌ಗಳ ಗುಣಮಟ್ಟ ಎಷ್ಟೇ ಬದಲಾಗಿದ್ದರೂ, ಈ 22 ಗಜಗಳ ಮಣ್ಣಿನ ಪಟ್ಟಿಯೇ ಆಟದ ಜೀವಕೋಶವಾಗಿ ಉಳಿದುಕೊಂಡಿದೆ. ಮುಂದಿನ ಬಾರಿ ನೀವು ಟಿವಿಯಲ್ಲಿ ಪಂದ್ಯ ವೀಕ್ಷಿಸುವಾಗ ಆ 22 ಗಜಗಳ ಪಿಚ್ ಕಂಡರೆ, ಅದು ಕೇವಲ ಅಂಗಳದ ಜಾಗವಲ್ಲ, ಬದಲಾಗಿ 18ನೇ ಶತಮಾನದ ಬ್ರಿಟಿಷರ ಅಳತೆ ಸರಪಳಿಯ ಇತಿಹಾಸ ಎಂದು ನೆನಪಿಸಿಕೊಳ್ಳಿ!

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆರ್‌ಸಿಬಿಗೆ ಟ್ರೋಫಿ ಗೆಲ್ಲಿಸಿಕೊಟ್ಟ ಕೋಚ್ ಇದೀಗ ಮುಂಬೈ ಇಂಡಿಯನ್ಸ್‌ಗೆ ಹೆಡ್ ಕೋಚ್ ಆಗಿ ನೇಮಕ
ಸಚಿನ್ ತೆಂಡೂಲ್ಕರ್ ಮತ್ತೊಂದು ದಾಖಲೆ ನುಚ್ಚುನೂರು; ಕೇವಲ 521 ಇನ್ನಿಂಗ್ಸ್‌ನಲ್ಲೇ ಹೊಸ ದಾಖಲೆ ಬರೆದ ಜೋ ರೂಟ್..! ಆದ್ರೂ ಕೊಹ್ಲಿ ರೆಕಾರ್ಡ್ ಸೇಫ್