ಸಚಿನ್ ತೆಂಡೂಲ್ಕರ್ ಮತ್ತೊಂದು ದಾಖಲೆ ನುಚ್ಚುನೂರು; ಕೇವಲ 521 ಇನ್ನಿಂಗ್ಸ್‌ನಲ್ಲೇ ಹೊಸ ದಾಖಲೆ ಬರೆದ ಜೋ ರೂಟ್..! ಆದ್ರೂ ಕೊಹ್ಲಿ ರೆಕಾರ್ಡ್ ಸೇಫ್

Published : Sep 24, 2026, 01:55 PM IST
Sachin tendulkar Joe Root

ಸಾರಾಂಶ

ಇಂಗ್ಲೆಂಡ್‌ನ ಜೋ ರೂಟ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 23,000 ರನ್ ಪೂರೈಸಿದ ವಿಶ್ವದ 2ನೇ ಬ್ಯಾಟರ್ ಆಗಿದ್ದಾರೆ. ಇವರು 521 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಆದರೆ 490 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿರುವ ವಿರಾಟ್ ಕೊಹ್ಲಿ ದಾಖಲೆ ಇನ್ನೂ ಸುರಕ್ಷಿತವಾಗಿದೆ.

ಲಂಡನ್: ಇಂಗ್ಲೆಂಡ್ ಟೆಸ್ಟ್ ಕ್ಯಾಪ್ಟನ್ ಜೋ ರೂಟ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇದೀಗ ಜೋ ರೂಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿವೇಗವಾಗಿ 23 ಸಾವಿರ ರನ್ ಪೂರೈಸಿದ ಜಗತ್ತಿನ ಎರಡನೇ ಬ್ಯಾಟರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ರೂಟ್ ಅಳಿಸಿ ಹಾಕಿದ್ದಾರೆ. ಆದರೆ ಕೊಹ್ಲಿ ಹೆಸರಿನಲ್ಲಿರುವ ದಾಖಲೆ ಇನ್ನೂ ಅಚ್ಚಳಿಯದೇ ಉಳಿದಿದೆ.

ಸಚಿನ್ ದಾಖಲೆ ಬ್ರೇಕ್ ಮಾಡಿದ ಜೋ ರೂಟ್:

ಹೌದು, ಶ್ರೀಲಂಕಾ ಎದುರು ಡುರ್ಹಾಮ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಜೋ ರೂಟ್ ಈ ಮೈಲಿಗಲ್ಲು ನೆಟ್ಟಿದ್ದಾರೆ. ಶ್ರೀಲಂಕಾ ಎದುರಿನ ಮೊದಲ ಏಕದಿನ ಪಂದ್ಯವು ಜೋ ರೂಟ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ 521ನೇ ಇನ್ನಿಂಗ್ಸ್ ಆಗಿತ್ತು. ಆ ಪಂದ್ಯದ ಮೂಲಕ ರೂಟ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 23,000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಸಚಿನ್ ದಾಖಲೆ ಮುರಿದಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 522 ಇನ್ನಿಂಗ್ಸ್‌ಗಳನ್ನಾಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 23,000 ರನ್ ಪೂರೈಸಿದ್ದರು. ಆದರೆ ರೂಟ್, ಸಚಿನ್‌ಗಿಂತ ಒಂದು ಇನ್ನಿಂಗ್ಸ್ ಕಡಿಮೆ ಆಡಿ ಈ ಮೈಲಿಗಲ್ಲು ನೆಟ್ಟಿದ್ದಾರೆ. ಲಂಕಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಜೋ ರೂಟ್ 52 ಎಸೆತಗಳನ್ನು ಎದುರಿಸಿ 44 ರನ್ ಬಾರಿಸಿ ಮಿಂಚಿದರು.

ವಿರಾಟ್ ಕೊಹ್ಲಿ ರೆಕಾರ್ಡ್ ಇನ್ನೂ ಸೇಫ್:

ಈಗಾಗಲೇ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಕೇವಲ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ವಿರಾಟ್ ಕೊಹ್ಲಿಯ ದಾಖಲೆ ಇಂದಿಗೂ ಅಚ್ಚಳಿಯದೇ ಉಳಿದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಇತಿಹಾಸದಲ್ಲಿ ಅತಿವೇಗವಾಗಿ 23,000 ರನ್ ಬಾರಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿಯೇ ಇದೆ. ಕೊಹ್ಲಿ ಕೇವಲ 490 ಇನ್ನಿಂಗ್ಸ್‌ಗಳನ್ನಾಡಿ 23,000 ರನ್ ಬಾರಿಸಿದ ದಾಖಲೆ ಹೊಂದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 23,000 ರನ್ ಬಾರಿಸಿದ ಟಾಪ್- 4 ಬ್ಯಾಟರ್‌ಗಳಿವರು:

1. ವಿರಾಟ್ ಕೊಹ್ಲಿ: 490 ಇನ್ನಿಂಗ್ಸ್‌

2. ಜೋ ರೂಟ್: 521 ಇನ್ನಿಂಗ್ಸ್‌

3. ಸಚಿನ್ ತೆಂಡೂಲ್ಕರ್: 522 ಇನ್ನಿಂಗ್ಸ್‌

4. ರಿಕಿ ಪಾಂಟಿಂಗ್: 544 ಇನ್ನಿಂಗ್ಸ್‌

ಲಂಕಾ ವಿರುದ್ಧ ಮೊದಲ ಏಕದಿನ ಗೆದ್ದ ಇಂಗ್ಲೆಂಡ್

ಡರ್ಹ್ಯಾಮ್: ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ 89 ರನ್‌ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ1-0 ಮುನ್ನಡೆ ಪಡೆದಿದೆ. ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 48.1 ಓವರ್‌ಗಳಲ್ಲಿ 265 ರನ್‌ಗೆ ಆಲೌಟಾಯಿತು. ನಾಯಕ ಬ್ರೂಕ್‌ 67, ರೂಟ್‌ 44, ವಿಲ್‌ ಜ್ಯಾಕ್ಸ್‌ ಔಟಾಗದೆ 46 ರನ್‌ ಸಿಡಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಲಂಕಾ ಬ್ಯಾಟಿಂಗ್‌ ವೈಫಲ್ಯಕ್ಕೆ ತುತ್ತಾಗಿ 37 ಓವರ್‌ಗಳಲ್ಲಿ 176 ರನ್‌ಗೆ ಆಲೌಟಾಯಿತು. ದು ನಿತ್‌ ವೆಲ್ಲಲಗೆ 45, ನಾಯಕ ಕುಸಾಲ್‌ ಮೆಂಡಿಸ್‌ 42 ರನ್‌ ಸಿಡಿಸಿದರು. ಬೌಲಿಂಗ್‌ನಲ್ಲೂ ಮಿಂಚಿದ ಜ್ಯಾಕ್ಸ್‌ 22 ರನ್‌ ನೀಡಿ 5 ವಿಕೆಟ್‌ ಪಡೆದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಆ ರಾತ್ರಿ ನನಗೆ ನಿದ್ದೆ ಬರಲಿಲ್ಲ' ಸೂರ್ಯವಂಶಿಗಾಗಿ ಸಂಜು ಔಟ್ ಆದ್ನಾ? ಗಂಭೀರ್ ಬಿಚ್ಚಿಟ್ರು ರಹಸ್ಯ
Cricket ಸಮರಕ್ಕೆ '22 ಯಾರ್ಡ್ಸ್ ಸೂಕ್ತವೆಂದಿದ್ದೇಕೆ?: ಇಲ್ಲಿದೆ ಈ ಟೆಕ್ನಿಕಲ್‌ ಕಂಪ್ಲೀಟ್ ಹಿಸ್ಟರಿ!