Rishi Dhavan: ಪಂಜಾಬ್‌ ಪರ ಆಡಿದ ರಿಷಿ ಧವನ್‌ ಗ್ಲಾಸ್‌ ಫೇಸ್‌ ಶೀಲ್ಡ್‌ ಧರಿಸಿದ್ದೇಕೆ?

Published : Apr 26, 2022, 11:17 AM IST
Rishi Dhavan: ಪಂಜಾಬ್‌ ಪರ ಆಡಿದ ರಿಷಿ ಧವನ್‌ ಗ್ಲಾಸ್‌ ಫೇಸ್‌ ಶೀಲ್ಡ್‌ ಧರಿಸಿದ್ದೇಕೆ?

ಸಾರಾಂಶ

Explained why Rishi Dhavan wore face shield: CSK vs PBKS ಪಂದ್ಯದಲ್ಲಿ ಇಬ್ಬರು ಧವನ್‌ಗಳ ಬಗ್ಗೆ ಚರ್ಚೆಯಾಗುತ್ತಿದೆ. ಒಂದು ಗಬ್ಬರ್‌ ಶಿಖರ್‌ ಧವನ್‌ ಅವರ ಅದ್ಭುತ ಆಟ, ಇನ್ನೊಂದು ರಿಷಿ ಧವನ್‌ ಅವರ ಫೇಸ್‌ ಶೀಲ್ಡ್‌. ರಿಷಿ ಧವನ್‌ ಫೇಸ್‌ ಶೀಲ್ಡ್‌ ಯಾಕೆ ಹಾಕಿ ಕೊಂಡರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. 

IPL 2022 Updates: ಐಪಿಎಲ್‌ 2022 ಆವೃತ್ತಿಯಲ್ಲಿ ಪಂಜಾಬ್‌ ಕಿಂಗ್ಸ್‌ (Punjab Kings) ಪರ ಮೊದಲ ಪಂದ್ಯವಾಡಿದ ರಿಷಿ ಧವನ್‌ (Rishi Dhavan) ಕೇವಲ ಪ್ರದರ್ಶನದಿಂದಷ್ಟೇ ಅಲ್ಲ ವಿಚಿತ್ರ ಶೈಲಿಯ ಫೇಸ್‌ ಶೀಲ್ಡ್‌ನಿಂದಲೂ ಸುದ್ದಿಯಾಗಿದ್ದಾರೆ. ಪಂದ್ಯದಲ್ಲಿ ರಿಷಿ ಧವನ್‌ ಬೌಲಿಂಗ್‌ಗೆ ಇಳಿಯುತ್ತಿದ್ದಂತೆ, ಅವರ ವಿಚಿತ್ರ ಫೇಸ್‌ ಶೀಲ್ಡ್‌ ಕುರಿತಾಗಿ ಕುತೂಹಲ ಮತ್ತು ಚರ್ಚೆಗಳು ಆರಂಭವಾದವು. ಟ್ವಿಟ್ಟರ್‌ನಲ್ಲಿ ಕ್ರಿಕೆಟ್‌ ಅಭಿಮಾನಿಗಳು ಫೇಸ್‌ಶೀಲ್ಡ್‌ಗೆ ನಾನಾ ರೀತಿಯ ವ್ಯಾಖ್ಯಾನ ಕೊಡಲಾರಂಭಿಸಿದರು. ಬೌಲಿಂಗ್‌ನಲ್ಲಿ ರಿಷಿ ಧವನ್‌ ಕೊಂಚ ದುಬಾರಿಯಾದರೂ, ಪಂಜಾಬ್‌ ತಂಡದ ಗೆಲುವಿನಲ್ಲಿ ಅವರ ಪಾತ್ರವೂ ಇದೆ. ಹಾಗಾದರೆ ನಿನ್ನೆ ನಡೆದ ಪಂಜಾಬ್‌ ಕಿಂಗ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ (Punjab Kings vs Chennai Super Kings) ನಡುವಿನ ಪಂದ್ಯದಲ್ಲಿ ರಿಷಿ ಧವನ್‌ ಯಾಕೆ ಫೇಸ್‌ ಶೀಲ್ಡ್‌ ಧರಿಸಿದ್ದರು ಎಂಬ ಕುತೂಹಲ ನಿಮಗೂ ಇದೆಯಾ? ಅದಕ್ಕೆ ಉತ್ತರ ಇಲ್ಲಿದೆ. 

ನಿನ್ನೆ (ಏಪ್ರಿಲ್‌ 25ರಂದು) ಕನ್ನಡಿಗ ಮಯಾಂಕ್‌ ಅಗರ್ವಾಲ್‌ (PBKS Captain Mayank Agarwal) ನಾಯಕತ್ವದ ಪಂಜಾಬ್‌ ಕಿಂಗ್ಸ್‌ ಮತ್ತು ಸರ್‌ ಜಡೇಜಾ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings captain Ravindra Jadeja) ನಡುವೆ ಐಪಿಎಲ್‌ ಈ ಆವೃತ್ತಿಯ 38ನೇ ಪಂದ್ಯ ನಡೆಯಿತು. ಪಂದ್ಯದಲ್ಲಿ ಸದ್ದು ಮಾಡಿದ್ದು ಇಬ್ಬರು ಧವನ್‌ಗಳು. ಒಂದೆಡೆ ಬ್ಯಾಟಿಂಗ್‌ನಲ್ಲಿ ಚೆನ್ನೈ ಬೌಲರ್‌ಗಳ ಧೂಳೆಬ್ಬಸಿದ ಗಬ್ಬರ್‌ ಖ್ಯಾತಿಯ ಶಿಖರ್‌ ಧವನ್‌ ಮತ್ತು ಪಂಜಾಬ್‌ ಪರ ಪಾದಾರ್ಪಣೆ ಮಾಡಿದ ರಿಷಿ ಧವನ್‌. 

ರಿಷಿ ಧವನ್‌ ಐಪಿಎಲ್‌ಗೂ ಮುನ್ನ ನಡೆದ ರಣಜಿ ಟ್ರೋಫಿ ಪಂದ್ಯಾವಳಿ ವೇಳೆ ಬೌಲಿಂಗ್‌ ಮಾಡುವಾಗ ಗಾಯಗೊಂಡಿದ್ದರು. ಬ್ಯಾಟ್ಸ್‌ಮನ್‌ ಹೊಡೆದ ಬಾಲು ನೇರವಾಗಿ ರಿಷಿ ಧವನ್‌ ಮುಖಕ್ಕೆ ಬಡಿದಿತ್ತು. ಅದಾದ ನಂತರ 32 ವರ್ಷದ ರಿಷಿ ಧವನ್‌ ಚಿಕಿತ್ಸೆಗೆ ಒಳಗಾಗಿದ್ದರು. ಇದೇ ಕಾರಣಕ್ಕಾಗಿ ಅವರು ಮೊದಲ ನಾಲ್ಕು ಪಂದ್ಯಗಳಲ್ಲಿ ಪಂಜಾಬ್‌ ತಂಡವನ್ನು ಸೇರಿಕೊಂಡಿರಲಿಲ್ಲ. ಅದಾದ ನಂತರ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಅವರು ನೆಟ್‌ ಅಭ್ಯಾಸದಲ್ಲಿ ಸಹ ಫೇಸ್‌ ಶೀಲ್ಡ್‌ ಬಳಕೆ ಮಾಡುತ್ತಿದ್ದರು, ಯಾಕೆಂದರೆ ಮತ್ತೊಮ್ಮೆ ಮುಖಕ್ಕೆ ಗಾಯವೇನಾದರೂ ಆದರೆ ಚೇತರಿಸಿಕೊಳ್ಳುವುದು ಕಷ್ಟ ಎಂದು ವೈದ್ಯರು ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ: 

ಇತ್ತೀಚೆಗೆ ಪಂಜಾಬ್‌ ಕಿಂಗ್ಸ್‌ ಅಧಿಕೃತ ಟ್ವಿಟ್ಟರ್‌ನಲ್ಲಿ ರಿಷಿ ಧವನ್‌ ಅವರ ಅಭಿಪ್ರಾಯವನ್ನು ಹಂಚಿಕೊಂಡಿತ್ತು. "ನಾಲ್ಕು ವರ್ಷಗಳ ನಂತರ ಮತ್ತೆ ಐಪಿಎಲ್‌ ಆಡುವ ಅವಕಾಶ ಸಿಕ್ಕಿದೆ, ಆದರೆ ರಣಜಿ ಟ್ರೋಫಿಯಲ್ಲಿ ಗಾಯಗೊಂಡು ನಾಲ್ಕು ಪಂದ್ಯಗಳಿಂದ ದೂರ ಉಳಿಯುವಂತಾಗಿದ್ದು ಬೇಸರ ತಂದಿತ್ತು. ಆದರೆ ಈಗ ನಾನು ಆಯ್ಕೆಗೆ ಸಿದ್ಧನಾಗಿದ್ದೇನೆ," ಎಂದು ರಿಷಿ ಧವನ್‌ ಹೇಳಿದ್ದರು. 

ಇದರ ಬಗ್ಗೆ ಟ್ವೀಟ್‌ ಮಾಡಿದ್ದ ಪಂಜಾಬ್‌ ಕಿಂಗ್ಸ್‌, "ಹಸಿದಿರುವ ಸಿಂಹಕ್ಕಿಂತ ಅಪಾಯಕಾರಿ ಯಾವುದಿದೆ. ರಿಷಿ ಧವನ್‌ ಮೊದಲ ಕೆಲ ಪಂದ್ಯಗಳಿಂದ ಏಕೆ ದೂರ ಇದ್ದರು ಮತ್ತು ಈಗ ಘರ್ಜಿಸಲು ಹೇಗೆ ಸಿದ್ಧರಾಗಿದ್ದಾರೆ ಎಂಬುದನ್ನು ನೀವೇ ನೋಡಿ," ಎಂದು ಟ್ವೀಟ್‌ ಮಾಡಲಾಗಿತ್ತು. 

 

ಇದನ್ನೂ ಓದಿ: IPL 2022: ಬಟ್ಲರ್ 'ಜೋಶ್' ಅಡಗಿಸುತ್ತಾ ಆರ್‌ಸಿಬಿ..?

ಪಂಜಾಬ್‌ 11 ರನ್‌ಗಳಿಂದ ಚೆನ್ನೈ ವಿರುದ್ಧ ಪಂದ್ಯವನ್ನು ಗೆದ್ದುಕೊಂಡಿದೆ. ನಾಯಕ ಮಯಾಂಕ್‌ ಅಗರ್ವಾಲ್‌ ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಕಂಡರೂ, ನಾಯಕತ್ವ ನಿಭಾಯಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಅವರ ಶಾಂತಚಿತ್ತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ ಟಿ-20 ತಂಡದಿಂದ ಹೊರಬಿದ್ದಿರುವ ಶಿಖರ್‌ ಧವನ್‌ ಕೂಡ ಟಿ-20 ವಲ್ಡ್‌ ಕಪ್‌ ರಾಷ್ಟ್ರೀಯ ತಂಡಕ್ಕೆ ಮರಳಲು ಪಣ ತೊಟ್ಟಿದ್ದಾರೆ. ಆರೇಂಜ್‌ ಕ್ಯಾಪ್‌ ಪಟ್ಟಿಯಲ್ಲಿ ಮೊದಲ ಐದು ದಾಂಡಿಗರಲ್ಲಿ ಶಿಖರ್‌ ಧವನ್‌ ಕೂಡ ಒಬ್ಬರಾಗಿದ್ದಾರೆ. ಈ ಮೂಲಕ ಮತ್ತೆ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲು ತಮ್ಮೆಲ್ಲಾ ಪ್ರಯತ್ನ ಪಡುತ್ತಿದ್ದಾರೆ.  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ