ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪದೇ ಪದೇ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಫೇಲ್ಯೂರ್‌ಗೆ ಕಾರಣವೇನು ನೋಡೋಣ ಬನ್ನಿ
ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಇದ್ರಿಂದ ವಿರಾಟ್ ಕೊಹ್ಲಿ ಆಟದ ಬಗ್ಗೆ ಟೀಕೆಗಳು ಕೇಳಿಬರ್ತಿವೆ. ಮತ್ತೊಂದೆಡೆ ಅವರ ಫೇಲ್ಯೂರ್ ಬಗ್ಗೆ ಚರ್ಚೆ ಶುರುವಾಗಿದೆ. ಇದರ ಜೊತೆಗೆ ಟೀಮ್ ಮ್ಯಾನೇಜ್ಮೆಂಟ್ ರನ್ ಮಷಿನ್ ವಿಷಯದಲ್ಲಿ ತಪ್ಪು ಮಾಡ್ತಾ ಅನ್ನೋ ಪ್ರಶ್ನೆ ಮೂಡಿದೆ.
ಓಪನರ್ ಆಗಿ ಆಡಿಸಿ ತಪ್ಪು ಮಾಡ್ತಾ ಟೀಮ್ ಮ್ಯಾನೇಜ್ಮೆಂಟ್..?
undefined
ಟಿ20 ವರ್ಲ್ಡ್‌ಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ, ಹ್ಯಾಟ್ರಿಕ್ ಗೆಲುವಿನ ಮೂಲಕ ಮುನ್ನುಗ್ತುತ್ತಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಅತ್ಯದ್ಭುತ ಪರ್ಫಾಮೆನ್ಸ್ ನೀಡ್ತಿದೆ. ಹಾಗಂತ, ರೋಹಿತ್ ಶರ್ಮಾ ಪಡೆಯಲ್ಲಿ ವೀಕ್ನಸ್ಸೇ ಇಲ್ಲ, ಅಂತ ಅಲ್ಲ. ರನ್‌ಮಷಿನ್ ವಿರಾಟ್ ಕೊಹ್ಲಿ ಫ್ಲಾಪ್ ಶೋ ತಂಡಕ್ಕೆ ದೊಡ್ಡ ಸಮಸ್ಯೆಯಾಗಿದೆ. ಕ್ಯಾಪ್ಟನ್ ರೋಹಿತ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಚಿಂತೆ ಹೆಚ್ಚಿಸಿದೆ.
ಮತ್ತೊಂದೆಡೆ ಕೊಹ್ಲಿ ಫೇಲ್ಯೂರ್‌ಗೆ ಕಾರಣ ಏನು ಅನ್ನೋ ಚರ್ಚೆ ಶುರುವಾಗಿದೆ. 3ನೇ ಕ್ರಮಾಂಕದಲ್ಲಿ ಆಡ್ತಿದ್ದವರನ್ನ ಆರಂಭಿಕರಾಗಿ ಆಡಿಸಿದ್ದೇ ಅವರ ವೈಫಲ್ಯಕ್ಕೆ ಕಾರಣ ಎನ್ನಲಾಗ್ತಿದೆ. ಯಾಕಂದ್ರೆ, ಕೊಹ್ಲಿ ಅಟ್ಯಾಕಿಂಗ್ ಬ್ಯಾಟರ್ ಅಲ್ಲ. ಆದ್ರೆ, ಸಂದರ್ಭಕ್ಕೆ ತಕ್ಕಂತೆ ಆಡಿ ಮ್ಯಾಚ್ ಗೆಲ್ಲಿಸಿಕೊಡಬಲ್ಲ ಬ್ಯಾಟ್ಸ್‌ಮನ್. ನಂ.3 ಸ್ಲಾಟ್ನಲ್ಲಿ ಕೊಹ್ಲಿ, ಮಿಡಲ್ ಓವರ್‌ಗಳಲ್ಲಿ ಬ್ಯಾಟ್ ಬೀಸುತ್ತಾ ಇನ್ನಿಂಗ್ಸ್ ಬಿಲ್ಡ್ ಮಾಡುತ್ತಿದ್ರು. ಆದ್ರೀಗ ಆರಂಭಿಕರಾಗಿ ಆರಂಭದಿಂದಲೇ ಆರ್ಭಟಿಸಬೇಕಿದೆ. ಇದು ಕೊಹ್ಲಿ ನ್ಯಾಚುರಲ್ ಗೇಮ್‌ಗೆ ಹೊಡೆತ ನೀಡಿದೆ.
T20 World Cup 2024: ಅಯ್ಯೋ.. ಭಾರತ-ಇಂಗ್ಲೆಂಡ್ ಸೆಮಿಫೈನಲ್ ಪಂದ್ಯ ನಡೆಯೋದೇ ಡೌಟ್..!
ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆರಂಭಿಕರಾಗಿ ಕೊಹ್ಲಿ ಯಶಸ್ಸು ಕಂಡಿದ್ದಾರೆ. ಆದ್ರೆ, IPLನಲ್ಲಿ ಇನ್ನಿಂಗ್ಸ್ ಆರಂಭಿಸೋದಕ್ಕೂ, ಟೀಂ ಇಂಡಿಯಾ ಪರ ಇನ್ನಿಂಗ್ಸ್ ಆರಂಭಿಸೋದೂ ಎರಡೂ ಒಂದೇ ಅಲ್ಲ. ಐಪಿಎಲ್‌ನಲ್ಲಿ ಆಟಗಾರರ ಮೇಲೆ ಅಷ್ಟೊಂದು ಪ್ರೆಶರ್ ಇರಲ್ಲ. ಆದ್ರೆ ಬ್ಲೂ ಜೆರ್ಸಿಯಲ್ಲಿ ಆಡೋವಾಗ ಕೋಟ್ಯಂತರ ಜನರ ನಿರೀಕ್ಷೆ, ಒತ್ತಡ ಕೊಹ್ಲಿ ಮೇಲಿರುತ್ತೆ. ಅದರಲ್ಲೂ ವಿಶ್ವಕಪ್‌ನಂತ ಬಿಗ್ ಇವೆಂಟ್‌ಗಳಲ್ಲಿ ಅದು ಡಬಲ್ ಅಗಿರುತ್ತೆ.
ರೋಹಿತ್ ಶರ್ಮಾ ಆ್ಯಂಡ್ ದ್ರಾವಿಡ್‌ಗೆ ಧರ್ಮಸಂಕಟ..!
ಯೆಸ್, ವಿರಾಟ್ ಕೊಹ್ಲಿ ಬದಲು ಬೇರೆಯವರ ಆರಂಭಿಕರಾಗಿ ಫೇಲ್ ಆಗಿದ್ದರೆ, ಅವರನ್ನ ಡ್ರಾಪ್ ಮಾಡಿ, ಮತ್ತೊಬ್ಬರಿಗೆ ಪ್ಲೇಯಿಂಗ್ 11ನಲ್ಲಿ ಚಾನ್ಸ್ ನೀಡ ಬಹುದಿತ್ತು. ಆದ್ರೀಗ ಅದು ಸುಲಭವಲ್ಲ. ಕೊಹ್ಲಿಯಂತ ಲೆಜೆಂಡ್‌ನ ಡ್ರಾಪ್ ಮಾಡೋದು ಸಾಧ್ಯವಿಲ್ಲ. ಇದೇ ಟೀಂ ಇಂಡಿಯಾಗೆ ಧರ್ಮ ಸಂಕಟವಾಗಿದೆ.
ಅದೇನೆ ಇರಲಿ, ಸೆಮಿಫೈನಲ್ ಕಾದಾಟದಲ್ಲಿ ವಿರಾಟ್ ವಿರಾಟರೂಪ ತೋರಲಿ. ಆ ಮೂಲಕ ತಂಡಕ್ಕೆ ಗೆಲವು ತಂದುಕೊಡಲಿ ಅನ್ನೋದೆ ನಮ್ಮ ಆಶಯ.