ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್, ಭಾರತದಲ್ಲಿ 2 ಬದಲಾವಣೆ

By Web DeskFirst Published Dec 11, 2019, 6:34 PM IST
Highlights

ಉಭಯ ತಂಡಗಳಿಗೂ ಗೆಲುವು ಅನಿವಾರ್ಯ. ಒಂದು ಸಣ್ಣ ತಪ್ಪು ಮಾಡಿದರೂ ಕೈ ತಪ್ಪಲಿದೆ ಸರಣಿ. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 3ನೇ ಹಾಗೂ ಅಂತಿಮ ಟಿ20 ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಮಹತ್ವದ ಪಂದ್ಯದ ಟಾಸ್ ವಿವರ ಇಲ್ಲಿದೆ.

ಮುಂಬೈ(ಡಿ.11): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 3ನೇ ಹಾಗೂ ಅಂತಿಮ ಟಿ20 ಪಂದ್ಯ ಫೈನಲ್ ಸ್ವರೂಪವಾಹಿ ಮಾರ್ಪಟ್ಟಿದೆ. ಸರಣಿ 1-1 ಸಮಬಲ ವಾಗಿರುವ ಕಾರಣ, ಇಂದಿನ(ಡಿ.11) ಪಂದ್ಯ ಗೆದ್ದ ತಂಡ ಸರಣಿ ಕೈವಶ ಮಾಡಲಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಭಾರತ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ರವೀಂದ್ರ ಜಡೇಜಾ ಬದಲು, ವೇಗಿ ಮೊಹಮ್ಮದ್ ಶಮಿ ತಂಡ ಸೇರಿಕೊಂಡಿದ್ದಾರೆ. ಇನ್ನು ಯಜುವೇಂದ್ರ ಚಹಾಲ್ ಬದಲು ಕುಲ್ದೀಪ್ ಯಾದವ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ ವೆಸ್ಟ್ ಇಂಡೀಸ್ ಯಾವುದೇ ಬದಲಾವಣೆ ಮಾಡಿಲ್ಲ.

 

A look at the Playing XI for the two teams for the 3rd T20I. pic.twitter.com/Yz9MVU52El

— BCCI (@BCCI)

ಇದನ್ನೂ ಓದಿ: ಗಾಯಾಳು ಧವನ್ ಬದಲಿಗೆ ಟೀಂ ಇಂಡಿಯಾ ಸೇರಿಕೊಂಡ ಮಯಾಂಕ್!

ಮುಂಬೈನ ಇದೇ ವಾಂಖೆಡೆ ಮೈದಾದಲ್ಲಿ 2016ರ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತವನ್ನು ಮಣಿಸಿದ ವಿಂಡೀಸ್ ಫೈನಲ್ ಪ್ರವೇಶಿಸಿತ್ತು. ಅಂದು  ಭಾರತ ಮೊದಲು ಬ್ಯಾಟಿಂಗ್ ಮಾಡಿ ಸೋಲು ಕಂಡಿತ್ತು. 

ಹೈದರಾಬಾದ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 208 ರನ್ ಚೇಸ್ ಮಾಡಿ ಗೆಲುವು ಸಾಧಿಸಿತ್ತು. ಭರ್ಜರಿ 6 ವಿಕೆಟ್ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ಕೊಹ್ಲಿ ಸೈನ್ಯಕ್ಕೆ, 2ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತೀರುಗೇಟು ನೀಡಿತ್ತು. 2ನೇ ಪಂದ್ಯದಲ್ಲಿ ವಿಂಡೀಸ್ 8 ವಿಕೆಟ್ ಗೆಲುವು ಸಾಧಿಸಿ ಸರಣಿ ಸಮಬಲ ಮಾಡಿಕೊಂಡಿತು.

click me!