ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯ ಸಾಕಷ್ಟ ಕುತೂಹಲ ಕೆರಳಿಸಿದೆ. ಮಹತ್ವದ ಪಂದ್ಯ ಟಾಸ್ ಪ್ರಕ್ರಿಯೆ ಮುಗಿದಿದೆ. ಟಾಸ್ ಹಾಗೂ ತಂಡದ ಮಾಹಿತಿ ಇಲ್ಲಿದೆ.
ಚೆನ್ನೈ(ಡಿ.15): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಇಂದಿನಿಂದ(ಡಿ.15) ಆರಂಭಗೊಳ್ಳುತ್ತಿದೆ. ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದಿರುವ ಕೊಹ್ಲಿ ಸೈನ್ಯ ಇದೀಗ ಏಕಕದಿನ ಸರಣಿಯಲ್ಲಿ ಗೆಲುವಿಗೆ ಹೊಂಚು ಹಾಕಿದೆ. ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಟಾಸ್ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಬ್ಯಾಟಿಂಗ್ ಮಾಡುವುದು ನಮ್ಮ ನಿರ್ಧಾರವಾಗಿತ್ತು. ವಿಂಡೀಸ್ ಫೀಲ್ಡಿಂಗ್ ಆಯ್ಕೆ ಮಾಡಿದಾಗ ನಮ್ಮ ಪ್ಲಾನ್ ಪ್ರಕಾರವೇ ಇದೆ. ಇದು ಸಂತಸ ತಂದಿದೆ. ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ, ಶಾರ್ಧೂಲ್ ಠಾಕೂರ್, ಯಜುವೇಂದ್ರ ಚಹಾಲ್ ಇಂದಿನ ಪಂದ್ಯದಲ್ಲಿ ಆಡುತ್ತಿಲ್ಲ ಎಂದರು.
ಉಭಯ ತಂಡಗಳ ವಿವರ ಇಲ್ಲಿದೆ:
ಭಾರತ
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಕೇದಾರ್ ಜಾದವ್, ಶಿವಂ ದುಬೆ, ರವೀಂದ್ರ ಜಡೇಜಾ, ದೀಪಕ್ ಚಹಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ
ಇದನ್ನೂ ಓದಿ: ಸತತ 10ನೇ ಸರಣಿ ಜಯಕ್ಕೆ ಪಣ: ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಭೀತಿ!
ಭಾರತ ಹಾಗೂ ವೆಸ್ಟ್ ಇಂಡೀಸ್ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಇಂದು ನಡೆಯುತ್ತಿರುವ ಮೊದಲ ಪಂದ್ಯದ ಬಳಿಕ, ಉಭಯ ತಂಡಗಳು ವಿಶಾಖಪಟ್ಟಣಂಗೆ ತೆರಳಲಿದೆ. ಡಿಸೆಂಬರ್ 18 ರಂದು 2ನೇ ಏಕದಿನ ಪಂದ್ಯ ನಡೆಯಲಿದೆ. ಡಿಸೆಂಬರ್ 22 ರಂದು 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಕಟಕ್‌ನ ಬಾರಬತಿ ಕ್ರೀಡಾಂಗಣದಲ್ಲಿ ನಡೆಯಲಿದೆ.