
ಟ್ರಿನಿಡಾಡ್ (ಜು.28) ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಐತಿಹಾಸಿಕ ದಾಖಲೆಯೊಂದು ನಿರ್ಮಾಣವಾಗಿದೆ. ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯ ವಿಶ್ವದ ಗಮನಸೆಳೆದಿದೆ. ಪಾಕಿಸ್ತಾನ ಅತ್ತು ಕರೆದು, ಕಣ್ಣೀರಿಡುತ್ತಿದೆ. ಸರಿಯಾಗಿ ನಿದ್ದೆ ಬರದೆ, ಇತ್ತ ಮೈದಾನಕ್ಕಿಳಿಯಲು ಆಗದೆ ಪರದಾಡುವ ಸ್ಥಿತಿ ಎದುರಾಗಿದೆ. ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ಬೌಲರ್ ಜಸ್ಟಿನ್ ಗ್ರಿವೆಸ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದೆ. ಒಂದೇ ಒಂದು ರನ್ ನೀಡಿದ ಪಾಕಿಸ್ತಾನದ 5 ವಿಕೆಟ್ ಕಬಳಿಸುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದಾರೆ.ಟ
ಜಸ್ಟಿನ್ ಗ್ರಿವೆಸ್ ಮಾರಕ ಬೌಲಿಂಗ್ ದಾಳಿ ಪಾಕಿಸ್ತಾನ ನಿದ್ದೆ ಕಸಿದಿದೆ. ಪಾಕಿಸ್ತಾನದ ಮೊದಲ ಇನ್ನಿಂಗ್ಸ್‌ನ 64 ನೇ ಓವರ್‌ನಿಂದ ಸಂಕಷ್ಟಗಳು ಆರಂಭಗೊಂಡಿತು. 64ನೇ ಓವರ್‌ನಿಂದ ಜಸ್ಟಿನ್ ಗ್ರಿವೆಸ್ ಮಾರಕ ದಾಳಿ ಆರಂಭಗೊಂಡಿತು. ಸತತವಾಗಿ 5 ವಿಕೆಟ್ ಕಬಳಿಸಿ ಪಾಕಿಸ್ತಾನಕ್ಕೆ ಶಾಕ್ ನೀಡಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ನೀಡುತ್ತಿದ್ದ ಪಾಕಿಸ್ತಾನಕ್ಕೆ ಜಸ್ಟಿನ್ ಗ್ರಿವೆಸ್ ಬೌಲಿಂಗ್ ದಾಳಿ ಸಂಕಷ್ಟ ನೀಡಿತು. ಪರಿಣಾಮ ಪಾಕಿಸ್ತಾನ ಮೊದಲ ಇನ್ನಿಂಗ್ಸನಲ್ಲಿ 282 ರನ್‌ಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ 311 ರನ್ ಸಿಡಿಸಿ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ಬೃಹತ್ ಮೊತ್ತದ ಸೂಚನೆ ನೀಡಿತ್ತು. ಆದರೆ ಜಸ್ಟಿನ್ ಹೋರಾಟದಿಂದ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದುಕೊಂಡಿದೆ. ಇದೀಗ ವೆಸ್ಟ್ ಇಂಡೀಸ್ 2ನೇ ಇನ್ನಿಂಗ್ಸ್ ಆರಂಭಿಸಿದೆ.
ಬೌಲಿಂಗ್ ದಾಳಿ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಜಸ್ಟಿನ್ ಸಾಕಷ್ಟು ಪರಿಶ್ರಮ ಬೇಕಿದೆ. ಇನ್ನಷ್ಟು ಉತ್ತಮ ದಾಳಿ ಸಂಘಟಿಸಲು ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾರೆ. ನಾಯಕ ರೋಸ್ಟನ್ ಚೇಸ್ ಸೂಚನೆಯಂತೆ ನಾವು ರಣತಂತ್ರ ಬದಲಿಸಿದ್ದೆವು. ಪಾಕಿಸ್ತಾನ ಉತ್ತಮ ಹೋರಾಟ ನೀಡುತ್ತಾ ಸಾಗಿತ್ತು. ತಂಡಕ್ಕೆ ವಿಕೆಟ್ ಅವಶ್ಯಕತೆ ಇತ್ತು. ಹೀಗಾಗಿ ಸಂಘಟಿತ ದಾಳಿಗೆ ಮುಂದಾಗಿದ್ದೆವು. ಇದು ಫಲ ನೀಡಿತು ಎಂದು ಜಸ್ಟಿನ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.