BCCI ಮಾಸ್ಟರ್ ಪ್ಲಾನ್: ಅಜಿತ್ ಅಗರ್ಕರ್‌, ಕೋಚ್‌ ಗೌತಮ್ ಗಂಭೀರ್‌ಗಿಂತ ಉನ್ನತ ಹುದ್ದೆ ವಿವಿಎಸ್‌ ಲಕ್ಷ್ಮಣ್ ಹೆಗಲಿಗೆ?

Kannadaprabha News   | Kannada Prabha
Published : Aug 15, 2026, 09:21 AM IST
Gautam Gambhir-VVS Laxman

ಸಾರಾಂಶ

ಬಿಸಿಸಿಐ 'ಕ್ರಿಕೆಟ್‌ ನಿರ್ದೇಶಕ' ಎಂಬ ಹೊಸ ಹುದ್ದೆಯನ್ನು ಸೃಷ್ಟಿಸುವ ಸಾಧ್ಯತೆಯಿದ್ದು, ಈ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ನೇಮಕಗೊಳ್ಳುವ ನಿರೀಕ್ಷೆಯಿದೆ. ಈ ಹುದ್ದೆಯು ಕೋಚ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥರಿಗಿಂತ ಉನ್ನತವಾಗಿದ್ದು, ಭಾರತೀಯ ಕ್ರಿಕೆಟ್‌ನ ಸಮಗ್ರ ಕಾರ್ಯಾಚರಣೆಯ ಜವಾಬ್ದಾರಿಯನ್ನು ಲಕ್ಷ್ಮಣ್ ಹೊರಲಿದ್ದಾರೆ.

ನವದೆಹಲಿ: ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್(ಸಿಒಇ) ಮುಖ್ಯಸ್ಥರಾಗಿರುವ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರಿಗೆ ಬಿಸಿಸಿಐನ ನೂತನ ‘ಕ್ರಿಕೆಟ್‌ ನಿರ್ದೇಶಕ’ ಎಂಬ ಮಹತ್ವದ ಹುದ್ದೆ ಸಿಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದು ಕೋಚ್‌ ಗೌತಮ್‌ ಗಂಭೀರ್‌ ಹಾಗೂ ಆಯ್ಕೆ ಸಮಿತ ಮುಖ್ಯಸ್ಥ ಅಜಿತ್‌ ಅಗರ್ಕರ್‌ಗಿಂತ ಉನ್ನತ ಹುದ್ದೆಯಾಗಿರಲಿದೆ ಎಂದು ತಿಳಿದುಬಂದಿದ್ದು, ಬಿಸಿಸಿಐನ ಈ ನಡೆ ಕುತೂಹಲಕ್ಕೆ ಕಾರಣವಾಗಿದೆ.

ಈ ಹುದ್ದೆ ಸೃಷ್ಟಿಯಾಗಿ, ಅದಕ್ಕೆ ಲಕ್ಷ್ಮಣ್‌ ನೇಮಕಗೊಂಡರೆ ರಾಷ್ಟ್ರೀಯ ತಂಡ, ಆಯ್ಕೆ ಸಮಿತಿ, ಕೋಚ್‌ ಹಾಗೂ ಯುವ ಪ್ರತಿಭೆಗಳ ತರಬೇತಿ ವ್ಯವಸ್ಥೆ ನಡುವೆ ಸಮನ್ವಯ ಸಾಧಿಸುವ ದೊಡ್ಡ ಜವಾಬ್ದಾರಿ ಅವರಿಗೆ ಸಿಗಲಿದೆ. ಅಲ್ಲದೆ ಅವರು ಭಾರತೀಯ ಕ್ರಿಕೆಟ್‌ನ ಸಮಗ್ರ ಕಾರ್ಯಾಚರಣೆಯ ಕೇಂದ್ರ ಬಿಂದುವಾಗಲಿದ್ದಾರೆ. ಆಟಗಾರರ ಆಯ್ಕೆ, ಪ್ರವಾಸ, ತರಬೇತಿ ವಿಚಾರದಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಅಗರ್ಕರ್‌ ಅವಧಿ ಶೀಘ್ರ ಕೊನೆಗೊಳ್ಳುವುದರಿಂದಾಗಿ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಲಕ್ಷ್ಮಣ್‌ ನೇಮಕಗೊಳ್ಳಬಹುದು ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಆಯ್ಕೆ ಸಮಿತಿ ಬಗ್ಗೆ ಲಕ್ಷ್ಮಣ್‌ ಒಲವು ಹೊಂದಿಲ್ಲ ಎಂದು ವರದಿಯಾಗಿದೆ.

ಗಣೇಶ ಚತುರ್ಥಿ ದಿನ ಟಿ20 ನಡೆಸಿ: ಬಿಸಿಸಿಐಗೆ ಆಫ್ಘನ್ ಕ್ರಿಕೆಟ್‌ ಮಂಡಳಿಯ ಮನವಿ

ನವದೆಹಲಿ: ಭಾರತ ವಿರುದ್ಧ ನಿಗದಿಯಾಗಿರುವ 3 ಟಿ20 ಪಂದ್ಯಗಳ ಸರಣಿಯ ವೇಳಾಪಟ್ಟಿಯನ್ನು ಗಣೇಶ ಚತುರ್ಥಿ ಹಬ್ಬದ ಕಾರಣದಿಂದಾಗಿ ಬದಲಾವಣೆ ಮಾಡುವಂತೆ ಅಫ್ಘಾನಿಸ್ತಾನ ಕ್ರಿಕೆಟ್‌ ಮಂಡಳಿ(ಎಸಿಬಿ)ಯು ಬಿಸಿಸಿಐಗೆ ಮನವಿ ಮಾಡಿದೆ ಎಂದು ವರದಿಯಾಗಿದೆ.

ಆಫ್ಘನ್‌ ಆತಿಥ್ಯ ವಹಿಸಲಿರುವ ಈ ಸರಣಿಯ ವೇಳಾಪಟ್ಟಿ ಬುಧವಾರ ಪ್ರಕಟಗೊಂಡಿತ್ತು. ನವದೆಹಲಿಯಲ್ಲಿ ಸೆ.13, 15 ಹಾಗೂ 17ರಂದು ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ಹಾಗೂ ಎಸಿಬಿ ಜಂಟಿಯಾಗಿ ಘೋಷಿಸಿತ್ತು. ಆದರೆ 1 ಟಿ20 ಪಂದ್ಯವನ್ನು ಗಣೇಶ ಚತುರ್ಥಿ ದಿನ(ಸೆ.14) ಆಯೋಜಿಸುವಂತೆ ಬಿಸಿಸಿಐಗೆ ಎಸಿಬಿ ಮನವಿ ಸಲ್ಲಿಸಿದೆ. ಹಬ್ಬದ ದಿನ ಆಯೋಜಿಸಿದರೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸುತ್ತಾರೆ. ಹೀಗಾಗಿ ಸೆ.13ರ ಪಂದ್ಯವನ್ನು 1 ದಿನ ಮುಂದೂಡಿ ಅಥವಾ ಸೆ.15ರ ಪಂದ್ಯವನ್ನು 1 ದಿನ ಮೊದಲೇ ನಡೆಸಿ ಎಂದು ಕೋರಿಕೆ ಎಂದು ವರದಿಯಾಗಿದೆ.

ತಂಜಿದ್ ಸೆಂಚುರಿ: ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾ 153 ರನ್‌ ಲೀಡ್

ಡಾರ್ವಿನ್‌: ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪ್ರವಾಸಿ ಬಾಂಗ್ಲಾದೇಶ ದಿಟ್ಟ ಹೋರಾಟ ಪ್ರದರ್ಶಿಸುತ್ತಿದ್ದು, 153 ರನ್‌ ಮುನ್ನಡೆ ಸಾಧಿಸಿದೆ.

ಆಸೀಸ್‌ 198ಕ್ಕೆ ಆಲೌಟಾಗಿತ್ತು. ಇದಕ್ಕೆ ಉತ್ತರವಾಗಿ ಬಾಂಗ್ಲಾ 2ನೇ ದಿನದಂತ್ಯಕ್ಕೆ 6 ವಿಕೆಟ್‌ ನಷ್ಟದಲ್ಲಿ 351 ರನ್‌ ಗಳಿಸಿದೆ. ತಂಜಿದ್‌ ಹಸನ್‌ 101 ರನ್‌ ಗಳಿಸಿ, ಆಸ್ಟ್ರೇಲಿಯಾದಲ್ಲಿ ಶತಕ ಬಾರಿಸಿದ ಮೊದಲ ಬಾಂಗ್ಲಾ ಬ್ಯಾಟರ್‌ ಎನಿಸಿಕೊಂಡರು. ನಾಯಕ ನಜ್ಮುಲ್‌ ಹೊಸೈನ್‌ ಶಾಂಟೊ 84, ಮೋಮಿನುಲ್‌ ಹಕ್‌ 49, ರಹೀಂ 36, ಮೆಹಿದಿ ಹಸನ್ ಔಟಾಗದೆ 32 ರನ್‌ ಗಳಿಸಿದ್ದಾರೆ.

ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್‌: ಕಪಿಲ್‌ ಹಿಂದಿಕ್ಕಿದ ಸ್ಟಾರ್ಕ್

ಡಾರ್ವಿನ್‌: ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕ ಕಪಿಲ್‌ ದೇವ್‌ ಅವರನ್ನು ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಹಿಂದಿಕ್ಕಿದ್ದಾರೆ. ಕಪಿಲ್‌ 131 ಪಂದ್ಯಗಳಲ್ಲಿ 434 ಪಡೆದಿದ್ದರು. ಸ್ಟಾರ್ಕ್‌ ತಮ್ಮ 106ನೇ ಪಂದ್ಯದಲ್ಲಿ 435 ವಿಕೆಟ್‌ ಪೂರೈಸಿದ್ದು, ಗರಿಷ್ಠ ವಿಕೆಟ್‌ ಸರದಾರರ ಪಟ್ಟಿಯಲ್ಲಿ 11ನೇ ಸ್ಥಾನಕ್ಕೇರಿದ್ದಾರೆ. ಶ್ರೀಲಂಕಾದ ಮುರಳೀಧರನ್(800 ವಿಕೆಟ್‌) ಅಗ್ರಸ್ಥಾನದಲ್ಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐತಿಹಾಸಿಕ 600ನೇ ಟೆಸ್ಟ್ ಸಂಭ್ರಮದಲ್ಲಿ ಟೀಂ ಇಂಡಿಯಾ; ಗಾಲೆಯಲ್ಲಿಂದು ಭಾರತ vs ಶ್ರೀಲಂಕಾ ಮೊದಲ ಟೆಸ್ಟ್ ಅಗ್ನಿ ಪರೀಕ್ಷೆ
ನಿವೃತ್ತಿ ನಂತರ ಕೊಹ್ಲಿ, ರೋಹಿತ್ ಏನ್ಮಾಡ್ತಾರೆ? ಗುಟ್ಟು ಬಿಚ್ಚಿಟ್ಟ ಅಶ್ವಿನ್