ಕಳೆದ ಡಿಸೆಂಬರ್ ತಿಂಗಳ ಕೊನೆಯಲ್ಲಿ ಯುವತಿಯಬ್ಬಳು ಕಾರಿಯಪ್ಪ ಮೇಲೆ, ಮದುವೆಯಾಗುವುದಾಗಿ ಲೈಂಗಿಕವಾಗಿ ಬಳಸಿಕೊಂಡು, ಈಗ ಮೋಸ ಮಾಡಿದ್ದಾರೆ ಎಂದು ಬೆಂಗಳೂರಿನ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಯುತ್ತಿತ್ತು. ಇದೆಲ್ಲದರ ನಡುವೆ ಕೆ ಸಿ ಕಾರಿಯಪ್ಪ ತಾವು ವಿದೇಶಿ ಪ್ರಯಾಣಕ್ಕೆ ಪೋಲಿಸರಿಂದ ಕ್ಲಿಯರೆನ್ಸ್ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು.
ಬೆಂಗಳೂರು(ಏ.02): ಕರ್ನಾಟಕದ ಪ್ರತಿಭಾನ್ವಿತ ಕ್ರಿಕೆಟಿಗ ಕೆ ಸಿ ಕಾರಿಯಪ್ಪ ಅವರ ಮೇಲೆ ಯುವತಿಯೊಬ್ಬಳು ಪ್ರೀತಿಸಿ ವಂಚಿಸಿದ ಆರೋಪ ಮಾಡಿದ್ದರು. ಈ ಸಂಬಂಧ ಕೇಸ್ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಹೀಗಾಗಿ ಕೆ ಸಿ ಕಾರಿಯಪ್ಪಗೆ ವಿದೇಶಿ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿತ್ತು. ಈ ವಿಚಾರದಲ್ಲಿ ಕಾರಿಯಪ್ಪಗೆ ಕೊನೆಗೂ ರಿಲೀಫ್ ಸಿಕ್ಕಿದೆ.
ಹೌದು, ಕಳೆದ ಡಿಸೆಂಬರ್ ತಿಂಗಳ ಕೊನೆಯಲ್ಲಿ ಯುವತಿಯಬ್ಬಳು ಕಾರಿಯಪ್ಪ ಮೇಲೆ, ಮದುವೆಯಾಗುವುದಾಗಿ ಲೈಂಗಿಕವಾಗಿ ಬಳಸಿಕೊಂಡು, ಈಗ ಮೋಸ ಮಾಡಿದ್ದಾರೆ ಎಂದು ಬೆಂಗಳೂರಿನ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಯುತ್ತಿತ್ತು. ಇದೆಲ್ಲದರ ನಡುವೆ ಕೆ ಸಿ ಕಾರಿಯಪ್ಪ ತಾವು ವಿದೇಶಿ ಪ್ರಯಾಣಕ್ಕೆ ಪೋಲಿಸರಿಂದ ಕ್ಲಿಯರೆನ್ಸ್ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು.
ಪೊಲೀಸ್ ಠಾಣೆ ಮೆಟ್ಟಿಲೇರಿದ ಕ್ರಿಕೆಟಿಗ ಕೆ ಸಿ ಕಾರಿಯಪ್ಪ ಲವ್‌ಸ್ಟೋರಿ; ಮಾಜಿ ಪ್ರೇಯಸಿಯಿಂದ ಗಂಭೀರ ಆರೋಪ
ತಾವು ಕ್ರಿಕೆಟ್ ಆಡಲು ಇಂಗ್ಲೆಂಡ್‌ಗೆ ಪ್ರಯಾಣಿಸಬೇಕಿದೆ. ಆದರೆ ಪೊಲೀಸ್ ಕ್ಲಿಯರೆನ್ಸ್ ಸಿಗದೇ ತಮಗೆ ಅಡ್ಡಿಯಾಗುತ್ತಿದೆ ಎಂದು ಕಾರಿಯಪ್ಪ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ವಿಚಾರಣೆ ಕೈಗೆತ್ತಿಕೊಂಡಿತು. ವಿಚಾರಣೆ ನಡೆಸಿದ ಬಳಿಕ ಪೋಲಿಸ್ ಕ್ಲಿಯರೆನ್ಸ್ ನೀಡಿದ 60 ನಿಮಿಷಗಳಲ್ಲಿ ವೀಸಾ ಒದಗಿಸಲಾಗುವುದು ಎಂದು ಕೇಂದ್ರ ಸರ್ಕಾರದ ಪರ ಡಿಎಸ್‌ಜಿಐ ಎಚ್ ಶಾಂತಿಭೂಷಣ್ ಭರವಸೆ ನೀಡಿದ್ದರು. ಕೆ ಸಿ ಕಾರಿಯಪ್ಪ ಅವರ ಅರ್ಜಿ ಪ್ರಕರಣವನ್ನು ಇತ್ಯರ್ಥಪಡಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಪೋಲಿಸ್ ಕ್ಲಿಯರೆನ್ಸ್ ಸಿಕ್ಕಿದ 60 ನಿಮಿಷಗಳಲ್ಲೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಕಾರಿಯಪ್ಪಗೆ ವೀಸಾ ಒದಗಿಸಿಕೊಟ್ಟಿತು. ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿ ಹಾಗೂ ಡಿಎಸ್ ಜಿಐ ಕ್ರಮಕ್ಕೆ ಹೈಕೋರ್ಟ್ ಮೆಚ್ಚುಗೆ ಹೈಕೋರ್ಟ್ ಪೀಠ ಮೆಚ್ಚುಗೆ ವ್ಯಕ್ತಪಡಿಸಿದೆ.