IPL ಮೆಗಾ ಹರಾಜಿಗೂ ಮುನ್ನ 8 ಆಟಗಾರರನ್ನು ಉಳಿಸಿಕೊಳ್ಳಲು ಕೆಲ ಫ್ರಾಂಚೈಸಿ ಡಿಮ್ಯಾಂಡ್..!

By Naveen Kodase  |  First Published Apr 2, 2024, 12:04 PM IST

2025ರ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದೆ. ಐಪಿಎಲ್ ಮೆಗಾ ಹರಾಜು ಮುಂದಿನ ವರ್ಷ ಅಂದರೆ 2025ರ ಜನವರಿ ಇಲ್ಲವೇ ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆಯಿದೆ. ಇನ್ನು ಕೆಲವು ಫ್ರಾಂಚೈಸಿಗಳು ಆಟಗಾರರ ರೀಟೈನ್ ಅವಕಾಶವನ್ನು 8ಕ್ಕೆ ಹೆಚ್ಚಿಸುವಂತೆ ಬಿಸಿಸಿಐ ಬಳಿ ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.


ನವದೆಹಲಿ: ಏ.16ರಂದು ಅಹಮದಾಬಾದ್‌ನಲ್ಲಿ ಐಪಿಎಲ್‌ನ ಎಲ್ಲಾ 10 ತಂಡಗಳ ಮಾಲಿಕರ ಸಭೆಯನ್ನು ಬಿಸಿಸಿಐ ಕರೆದಿದೆ. ಇದೊಂದು ಅನೌಪಚಾರಿಕ ಸಭೆಯಾಗಿದ್ದು, ಯಾವುದೇ ನಿರ್ದಿಷ್ಟ ಅಂಶಗಳನ್ನು ಚರ್ಚಿಸುವ ಬಗ್ಗೆ ಬಿಸಿಸಿಐ ತಿಳಿಸಿಲ್ಲ. ಆದರೆ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ, ಆಟಗಾರರ ಉಳಿಸಿಕೊಳ್ಳುವಿಕೆ, ಆಟಗಾರರ ಖರೀದಿಗೆ ಬಜೆಟ್‌ ಹೆಚ್ಚಿಸುವ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ, ಕಾರ್ಯದರ್ಶಿ ಜಯ್‌ ಶಾ, ಐಪಿಎಲ್‌ ಮುಖ್ಯಸ್ಥ ಅರುಣ್‌ ಧುಮಾಲ್‌ ಪಾಲ್ಗೊಳ್ಳಲಿದ್ದಾರೆ.

2025ರ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದೆ. ಐಪಿಎಲ್ ಮೆಗಾ ಹರಾಜು ಮುಂದಿನ ವರ್ಷ ಅಂದರೆ 2025ರ ಜನವರಿ ಇಲ್ಲವೇ ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆಯಿದೆ. ಇನ್ನು ಕೆಲವು ಫ್ರಾಂಚೈಸಿಗಳು ಆಟಗಾರರ ರೀಟೈನ್ ಅವಕಾಶವನ್ನು 8ಕ್ಕೆ ಹೆಚ್ಚಿಸುವಂತೆ ಬಿಸಿಸಿಐ ಬಳಿ ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಅದೇ ರೀತಿ ಮುಂಬರುವ ಮೆಗಾ ಹರಾಜಿನಲ್ಲಿ ಮತ್ತೊಮ್ಮೆ RTM ಕಾರ್ಡ್ ಬಳಸುವ ಬಗ್ಗೆಯೂ ಫ್ರಾಂಚೈಸಿ ಡಿಮ್ಯಾಂಡ್ ಇಡುವ ಸಾಧ್ಯತೆಯಿದೆ ಎನ್ನಲಾಗಿದೆ. 2018ರ ಮೆಗಾ ಹರಾಜಿನಲ್ಲಿ ರೈಟ್ ಟು ಮ್ಯಾಚ್ ಕಾರ್ಡ್ ಬಳಕೆಗೆ ಅವಕಾಶವಿತ್ತು. ಆದರೆ 2022ರಲ್ಲಿ ನಡೆದ ಮೆಗಾ ಹರಾಜಿನಲ್ಲಿ RTM ಕಾರ್ಡ್ ಬಳಕೆಗೆ ಅವಕಾಶ ಇರಲಿಲ್ಲ. 

Tap to resize

Latest Videos

ಹಾರ್ದಿಕ್‌ ಪಾಂಡ್ಯರನ್ನು ಕಿಚಾಯಿಸಿದ ಫ್ಯಾನ್ಸ್‌ಗೆ ಸಂಜಯ್‌ ಮಂಜ್ರೇಕರ್ ಕಿವಿಮಾತು..!

ಮೈದಾನದಲ್ಲಿ ರೋಹಿತ್‌ರ ಆಲಿಂಗಿಸಿದ ಅಭಿಮಾನಿ!

ಮುಂಬೈ: ರಾಜಸ್ಥಾನ ಹಾಗೂ ಮುಂಬೈ ನಡುವಿನ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಅಭಿಮಾನಿಯೋರ್ವ ರೋಹಿತ್ ಶರ್ಮಾ ಹಾಗೂ ಇಶಾನ್‌ ಕಿಶನ್‌ರನ್ನು ಆಲಿಂಗಿಸಿದ ಪ್ರಸಂಗ ಜರುಗಿತು. ರಾಜಸ್ಥಾನ ಬ್ಯಾಟಿಂಗ್‌ ವೇಳೆ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಅಭಿಮಾನಿ ಮೈದಾನಕ್ಕೆ ಆಗಮಿಸಿದ್ದಾನೆ. ಕೂಡಲೇ ಆತನನ್ನು ಭದ್ರತಾ ಸಿಬ್ಬಂದಿ ಮೈದಾನದಿಂದ ಹೊರಹಾಕಿದ್ದಾರೆ.

ನಿಧಾನಗತಿ ಬೌಲಿಂಗ್‌: ಪಂತ್‌ಗೆ ₹12 ಲಕ್ಷ ದಂಡ

ವಿಶಾಖಪಟ್ಟಣಂ: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ನಿಧಾನಗತಿ ಬೌಲಿಂಗ್‌ ಮಾಡಿದ್ದಕ್ಕೆ ಆ ತಂಡದ ನಾಯಕ ರಿಷಭ್‌ ಪಂತ್‌ಗೆ ಐಪಿಎಲ್‌ ಆಡಳಿತ ಮಂಡಳಿ 12 ಲಕ್ಷ ರು. ದಂಡ ವಿಧಿಸಿದೆ. ಪಂದ್ಯದಲ್ಲಿ ಡೆಲ್ಲಿ 20 ರನ್‌ ಗೆಲುವು ಸಾಧಿಸಿತ್ತು.

ಏಪ್ರಿಲ್‌ ಅಂತ್ಯಕ್ಕೆ ಭಾರತ ವಿಶ್ವಕಪ್‌ ತಂಡ ಪ್ರಕಟ?

ನವದೆಹಲಿ: ಜೂನ್‌ನಲ್ಲಿ ವೆಸ್ಟ್‌ಇಂಡೀಸ್‌, ಅಮೆರಿಕದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ 15 ಜನರ ಭಾರತ ತಂಡವನ್ನು ಏಪ್ರಿಲ್‌ ಕೊನೆ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಏಪ್ರಿಲ್‌ ಅಂತ್ಯಕ್ಕೆ ಐಪಿಎಲ್‌ ಮೊದಲಾರ್ಧ ಮುಕ್ತಾಯಗೊಳ್ಳಲಿದೆ. ಐಪಿಎಲ್‌ನ ಪ್ರದರ್ಶನ ನೋಡಿ ಆಯ್ಕೆ ಸಮಿತಿಯು ತಂಡ ಆಯ್ಕೆ ಮಾಡಿಕೊಳ್ಳಲಿದೆ. ತಂಡ ಪ್ರಕಟಿಸಲು ಐಸಿಸಿ ಮೇ 1ರ ವರೆಗೆ ಕಾಲಾವಕಾಶ ನೀಡಿದ್ದು, ಮೇ 25ರ ವರೆಗೂ ಸದಸ್ಯರ ಬದಲಾವಣೆಗೆ ಅವಕಾಶವಿದೆ.

ಹಾರ್ದಿಕ್ ಪಡೆಗೆ ಮುಂಬೈನಲ್ಲೂ ಮುಖಭಂಗ, ಹ್ಯಾಟ್ರಿಕ್ ಗೆಲುವು ಕಂಡ ರಾಯಲ್ಸ್

ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಏಪ್ರಿಲ್‌ ಕೊನೆ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಆ ವೇಳೆಗಾಗಲೇ ಐಪಿಎಲ್‌ ಮೊದಲಾರ್ಧ ಮುಕ್ತಾಯಗೊಂಡಿರುತ್ತದೆ. ಹೀಗಾಗಿ ಐಪಿಎಲ್‌ನಲ್ಲಿ ನೀಡಿದ್ದ ಪ್ರದರ್ಶನ ನೋಡಿ ಆಯ್ಕೆ ಸಮಿತಿಯು ತಂಡವನ್ನು ಆಯ್ಕೆ ಮಾಡಲಿದೆ. ಐಪಿಎಲ್‌ನಲ್ಲಿ ಉಪಾಂತ್ಯಕ್ಕೆ ತಲುಪದ ತಂಡಗಳಲ್ಲಿರುವ ಹಾಗೂ ವಿಶ್ವಕಪ್‌ ಟೂರ್ನಿಗೆ ಆಯ್ಕೆಯಾಗಿರುವ ಆಟಗಾರರ ಮೊದಲ ತಂಡ ಮೇ 19ರ ನಂತರ ಅಂದರೆ ಐಪಿಎಲ್‌ನ ಲೀಗ್‌ ಪಂದ್ಯಗಳು ಮುಕ್ತಾಯವಾದ ತಕ್ಷಣವೇ ನ್ಯೂಯಾರ್ಕ್‌ಗೆ ತೆರಳಲಿದ್ದಾರೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ.


 

click me!