ಬೆಂಗಳೂರು(ಅ.20): ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ಬಹು-ಭಾಷೆಯ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ ಆಪ್ ಸೇರಿದ ಕೇವಲ 15 ದಿನಗಳಲ್ಲಿ 1 ಲಕ್ಷ ಫಾಲೋವರ್ಸ್ ಪಡೆದಿದ್ದಾರೆ. ಕೂ ಖಾತೆಯಲ್ಲಿ ಸೆಹ್ವಾಗ್ ನೇರ ಮಾತು ಹಾಗು ಚಮತ್ಕಾರಿ ಕಾಮೆಂಟ್‌ಗಳಿಂದಾಗಿ ಅತ್ಯಂತ ಜನಪ್ರಿಯರಾಗಿದ್ದಾರೆ.
ಕೌನ್ ಬನೇಗಾ ಕರೋಡ್‌ಪತಿಯಲ್ಲಿ ವೀರೂ-ದಾದಾ; ಸೆಹ್ವಾಗ್ ಮಾತಿಗೆ ಬಿದ್ದು ಬಿದ್ದು ನಕ್ಕ ಸೌರವ್..!
undefined
2021 ರ ಟಿ 20 ವಿಶ್ವಕಪ್ ಸಂದರ್ಭದಲ್ಲಿ ಕೂ ಹಲವು ವಿಶೇಷತೆಗಳನ್ನು ಘೋಷಿಸಿದೆ. ಸೆಹ್ವಾಗ್ ಜೊತೆಗೆ, ವೆಂಕಟೇಶ್ ಪ್ರಸಾದ್, ನಿಖಿಲ್ ಚೋಪ್ರಾ, ಸೈಯದ್ ಸಾಬಾ ಕರೀಮ್, ಪಿಯೂಷ್ ಚಾವ್ಲಾ, ಹನುಮ ವಿಹಾರಿ, ಜೋಗಿಂದರ್ ಶರ್ಮಾ, ಪ್ರವೀಣ್ ಕುಮಾರ್, ವಿಆರ್‌ವಿ ಸಿಂಗ್, ಅಮೋಲ್ ಮುಜುಮ್ದಾರ್, ವಿನೋದ್ ಕಾಂಬ್ಳಿ, ವಾಸಿಂ ಜಾಫರ್, ಆಕಾಶ್ ಚೋಪ್ರಾ, ದೀಪ್ ದಾಸ್‌ಗುಪ್ತಾ ಮುಂತಾದವರು ಕೂ ಆಪ್‌ಗೆ ಸೇರಿದ್ದಾರೆ. ಮತ್ತು ಅಭಿಮಾನಿಗಳೊಂದಿಗೆ ಸಂಪರ್ಕ ಹೊಂದಲು ಅವರು ಸಕ್ರಿಯವಾಗಿ ಕೂ ಮಾಡುತ್ತಿರುವುದರಿಂದ ಭಾರೀ ಫಾಲೋವರ್ಸ್ ಗಳಿಸುತ್ತಿದ್ದಾರೆ.
"ವೀರೇಂದ್ರ ಸೆಹ್ವಾಗ್ ಕಡಿಮೆ ಅವಧಿಯಲ್ಲಿ 100,000 ಮೈಲಿಗಲ್ಲನ್ನು ದಾಟಿರುವುದಕ್ಕೆ ನಾವು ಸಂತೋಷಪಡುತ್ತೇವೆ. ಸ್ಥಳೀಯ ಭಾಷೆಗಳಲ್ಲಿ ಸಂಭಾಷಣೆ ನಡೆಸಲು ಕೂ ವೇದಿಕೆಯಾಗಿದೆ. ಭಾರತೀಯರಾದ ನಮಗೆ ಕ್ರಿಕೆಟ್ ಒಂದು ಭಾವನೆ ಮತ್ತು ಪಂದ್ಯಗಳ ಸುತ್ತ ಸಂಭಾಷಣೆಗಳು ಸಾಮಾಜಿಕ ಮಾಧ್ಯಮದಲ್ಲಿ ಎಂಗೇಜ್ಮೆಂಟ್ ಅನ್ನು ಉತ್ತೇಜಿಸುತ್ತದೆ. ನಮ್ಮ ಪ್ಲಾಟ್‌ಫಾರ್ಮ್ ಮೂಲಕ, ಬಳಕೆದಾರರು ತಮ್ಮ ನೆಚ್ಚಿನ ಆಟಗಾರರು ಮತ್ತು ಕಾಮೆಂಟೇಟರ್ಸ್ ಗಳ ತಮ್ಮ ಆಯ್ಕೆಯ ಭಾಷೆಯಲ್ಲಿ ಸಂಭಾಷಣೆಗೆ ಅವಕಾಶವಿದೆ. ವಿಶ್ವಕಪ್ ಮತ್ತು ಅದರಾಚೆಗೂ ಬಳಕೆದಾರರು ಪಾಲ್ಗೊಳ್ಳಲು ಕೂವು ಮೈಕ್ರೋ ಬ್ಲಾಗಿಂಗ್ ವೇದಿಕೆಯಾಗಿದೆ' ಎಂದು ಕೂ ವಕ್ತಾರರು ವಿಶ್ವಾಸವ್ಯಕ್ತಪಡಿಸಿದ್ದಾರೆ.
IPL 2021 ಧೋನಿ ಒಮ್ಮೆ ತುಂಬಾ ಸಿಟ್ಟಾಗಿದ್ದರು, ಅಶ್ವಿನ್ ಬಾಯಿ ಮುಚ್ಚಿಸಿದ್ದರು: ವಿರೇಂದ್ರ ಸೆಹ್ವಾಗ್..!
ಅವರವರದ್ದೇ ಭಾಷೆಗಳಲ್ಲಿ ಅಭಿವ್ಯಕ್ತಿಗೊಳಿಸಲು ಒಂದು ಮುಕ್ತ ವೇದಿಕೆಯಾಗಿರುವ 'ಕೂ' ಗೆ ಇತ್ತೀಚೆಗೆ ಕ್ರಿಕೆಟ್ ಮಾಸದಲ್ಲಿ ಹೆಸರಾಂತ ಕ್ರಿಕೆಟಿಗರು ಮತ್ತು ವ್ಯಾಖ್ಯಾನಕಾರರು ಸೇರಿದ್ದು , ಡೌನ್‌ಲೋಡ್‌ಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕ್ರಿಕೆಟಿಗರು, ಸೆಲೆಬ್ರಿಟಿಗಳು ಸೇರಿದಂತೆ ವಿವಿಧ ಬಳಕೆದಾರರು ಪ್ಲಾಟ್‌ಫಾರ್ಮ್‌ನ ಬಹು-ಭಾಷೆಯ ವೈಶಿಷ್ಟ್ಯಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕಳೆದ ಮಾರ್ಚ್ ನಲ್ಲಿ ಆಪ್ ಪ್ರಾರಂಭವಾಗಿದ್ದು, ಕೇವಲ 20 ತಿಂಗಳ ಅವಧಿಯಲ್ಲಿ 1.5 ಕೋಟಿ (15 ಮಿಲಿಯನ್) ಬಳಕೆದಾರರು ನೋಂದಾಯಿಸಿಕೊಂಡಿದ್ದಾರೆ. ಈ ಕ್ರಿಕೆಟ್ ಸೀಸನ್ ನಲ್ಲಿಯೇ 5 ಮಿಲಿಯನ್ ಜನರು ವೇದಿಕೆಗೆ ಸೇರಿಕೊಂಡಿದ್ದಾರೆ. ಟಿ 20 ವಿಶ್ವಕಪ್ ಸರಣಿ ನಡೆಯುತ್ತಿರುವ ಈ ಸಂದರ್ಭದಲ್ಲಿ ವೇದಿಕೆಗೆ ಮತ್ತಷ್ಟು ಜನರು ಸೇರುವ ನಿರೀಕ್ಷೆಯಿದೆ.
ಟ್ವಿಟರ್‌ಗೆ ಪ್ರತಿಸ್ಪರ್ಧಿಯಾಗಿ ಬಂದ ಕೂ:
ಕೂ ಅನ್ನು ಮಾರ್ಚ್ 2020 ರಲ್ಲಿ ಸ್ಥಾಪಿಸಲಾಯಿತು, ಬಹುಭಾಷಾ ಮೈಕ್ರೋ ಬ್ಲಾಗಿಂಗ್ ವೇದಿಕೆಯಾಗಿ ಭಾರತೀಯ ಭಾಷೆಗಳಲ್ಲಿ ಮತ್ತು ಈಗ ಭಾರತದಾದ್ಯಂತ 15 ಮಿಲಿಯನ್‌ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಬಹು ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ, ಭಾರತದ ವಿವಿಧ ಪ್ರದೇಶಗಳ ಜನರು ತಮ್ಮ ಮಾತೃಭಾಷೆಯಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಬಹುದು. ಭಾರತದಲ್ಲಿ ಕೇವಲ 10% ಇಂಗ್ಲಿಷ್ ಮಾತನಾಡುವ ದೇಶದಲ್ಲಿ, ಭಾರತೀಯ ಬಳಕೆದಾರರಿಗೆ ತಲ್ಲೀನಗೊಳಿಸುವ ಭಾಷೆಯ ಅನುಭವಗಳನ್ನು ನೀಡಲು ಮತ್ತು ಅವರನ್ನು ಸಂಪರ್ಕಿಸಲು ಸಹಾಯ ಮಾಡುವ ಸಾಮಾಜಿಕ ಮಾಧ್ಯಮ ವೇದಿಕೆಯ ಆಳವಾದ ಅವಶ್ಯಕತೆ ಇದೆ. ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುವ ಭಾರತೀಯರ ಧ್ವನಿಗಳಿಗೆ ಕೂ ಒಂದು ವೇದಿಕೆಯನ್ನು ಒದಗಿಸುತ್ತದೆ.