2016ರಲ್ಲೇ ಧೋನಿಯಿಂದ ನಾಯಕತ್ವ ಕಿತ್ತುಕೊಳ್ಳಲು ಬಯಸಿದ್ರು ವಿರಾಟ್ ಕೊಹ್ಲಿ..!

Published : Jan 14, 2023, 04:20 PM IST
2016ರಲ್ಲೇ ಧೋನಿಯಿಂದ ನಾಯಕತ್ವ ಕಿತ್ತುಕೊಳ್ಳಲು ಬಯಸಿದ್ರು ವಿರಾಟ್ ಕೊಹ್ಲಿ..!

ಸಾರಾಂಶ

2016ರಲ್ಲೇ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಸೀಮಿತ ಓವರ್‌ಗಳ ತಂಡದ ನಾಯಕರಾಗಲು ಬಯಸಿದ್ದರು ಫೀಲ್ಡಿಂಗ್ ಆರ್. ಶ್ರೀಧರ್ ಪುಸ್ತಕದಲ್ಲಿ ಅಚ್ಚರಿಯ ಮಾಹಿತಿ ಬಯಲು ರವಿಶಾಸ್ತ್ರಿ ಮಧ್ಯ ಪ್ರವೇಶಿಸಿದ ಬಳಿಕ ಮನಸು ಬದಲಿಸಿದ್ರಾ ಕೊಹ್ಲಿ?

ನವದೆಹಲಿ(ಜ.14): ವಿರಾಟ್ ಕೊಹ್ಲಿ, ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಅಪ್ಪಟ ಅಭಿಮಾನಿ ಹಾಗೂ ಅವರನ್ನು ಅಪಾರವಾಗಿ ಗೌರವಿಸುತ್ತಾರೆ ಎನ್ನುವ ವಿಚಾರ ಗುಟ್ಟಾಗಿಯೇನೂ ಉಳಿದಿಲ್ಲ. ಅವರಿಬ್ಬರ ಸ್ನೇಹ, ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿಯೇ ವಿರಾಟ್ ಕೊಹ್ಲಿ 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾಗಿ ಕೆಲವೇ ವರ್ಷಗಳಲ್ಲಿ ವಿರಾಟ್ ಕೊಹ್ಲಿ, ಧೋನಿಯ ಉತ್ತರಾಧಿಕಾರಿಯಾಗಿ ಟೀಂ ಇಂಡಿಯಾ ನಾಯಕನಾಗಿಯೂ ನೇಮಕವಾಗಿದ್ದರು.

ಹೌದು, 2014ರಲ್ಲಿ ಮಹೇಂದ್ರ ಸಿಂಗ್ ಧೋನಿ ಟೆಸ್ಟ್‌ಗೆ ವಿದಾಯ ಹೇಳಿದ ಬಳಿಕ ಭಾರತ ಟೆಸ್ಟ್‌ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ನೇಮಕವಾಗಿದ್ದರು. ಆದರೆ ವಿರಾಟ್ ಕೊಹ್ಲಿ, 2016ರಲ್ಲಿಯೇ ಟೀಂ ಇಂಡಿಯಾ ಸೀಮಿತ ಓವರ್‌ಗಳ ತಂಡದ ನಾಯಕರಾಗಲೂ ಬಯಸಿದ್ದರು ಎನ್ನುವ ಅಚ್ಚರಿಯ ವಿಚಾರವೊಂದು ಚರ್ಚೆಗೆ ಗ್ರಾಸವಾಗಿದೆ. ಟೀಂ ಇಂಡಿಯಾ ಮಾಜಿ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರು, ಈ ವಿಚಾರವನ್ನು ಪುಸ್ತಕದಲ್ಲಿ ಅನಾವರಣ ಮಾಡಿದ್ದಾರೆ.

2016ರ ಸಂದರ್ಭದಲ್ಲಿ ವಿರಾಟ್ ಕೊಹ್ಲಿ, ಟೀಂ ಇಂಡಿಯಾ (Team India) ಸೀಮಿತ ಓವರ್‌ಗಳ ತಂಡದ ನಾಯಕರಾಗಲು ಹಾತೊರೆಯುತ್ತಿದ್ದರು ಎನ್ನವ ವಿಚಾರವನ್ನು ಆರ್‌. ಶ್ರೀಧರ್, ಆರ್‌ ಕೌಶಿಕ್ ಬರೆದ ಕೋಚಿಂಗ್ "ಬಿಯಾಂಡ್- ಮೈ ಡೇಸ್‌ ವಿತ್ ಇಂಡಿಯನ್ ಕ್ರಿಕೆಟ್ ಟೀಂ" ಪುಸ್ತಕದಲ್ಲಿ ಈ ಅಚ್ಚರಿಯ ಸಂಗತಿಯನ್ನು ಹೊರಗೆಡವಿದ್ದಾರೆ. ಇನ್ನು ಇದೇ ವೇಳೆ ರವಿಶಾಸ್ತ್ರಿಯ ಮಧ್ಯ ಪ್ರವೇಶ ಮಾಡಿದ್ದರಿಂದ ವಿರಾಟ್ ಕೊಹ್ಲಿಗೆ ಟೀಂ ಇಂಡಿಯಾ ಸೀಮಿತ ಓವರ್‌ಗಳ ನಾಯಕತ್ವ ಸಿಗುವುದು ಸ್ವಲ್ಪ ತಡವಾಯಿತು ಎನ್ನುವ ಸಂಗತಿಯನ್ನು ಹೊರಹಾಕಿದ್ದಾರೆ.

ಕಿವೀಸ್ ಎದುರಿನ ಟಿ20 ಸರಣಿಗೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗಿಲ್ಲ ಸ್ಥಾನ..!

"ಒಂದು ಸಂಜೆ, ರವಿಶಾಸ್ತ್ರಿ, ವಿರಾಟ್ ಕೊಹ್ಲಿಯನ್ನು ಕರೆದು, " ನೋಡು ವಿರಾಟ್, ಧೋನಿ ಈಗಾಗಲೇ ನಿಮಗೆ ಟೆಸ್ಟ್ ತಂಡದ ನಾಯಕತ್ವ ಬಿಟ್ಟುಕೊಟ್ಟಿದ್ದಾರೆ. ಅದನ್ನು ನೀನು ಮೊದಲು ಗೌರವಿಸುವುದನ್ನು ಕಲಿ. ಅವರು ನಿನಗೆ ಸರಿಯಾದ ಸಮಯ ಬಂದಾಗ ಸೀಮಿತ ಓವರ್‌ಗಳ ತಂಡದ ನಾಯಕತ್ವವನ್ನೂ ಬಿಟ್ಟುಕೊಡುತ್ತಾರೆ ಕೂಡಾ. ಅಲ್ಲಿಯವರೆಗೂ ನೀನು ಅವರ ನಿರ್ಧಾರವನ್ನು ಗೌರವಿಸು. ಒಂದು ವೇಳೆ ನೀನು ಅವರನ್ನು ಗೌರವಿಸದೇ ಹೋದರೇ, ನೀನು ನಾಯಕನಾದ ಬಳಿಕ ತಂಡವು ನಿನಗೆ ಗೌರವ ನೀಡುವುದಿಲ್ಲ ನೆನಪಿರಲಿ. ಈಗ ಪರಿಸ್ಥಿತಿ ಏನೇ ಇರಲಿ, ನೀನು ಅವರನ್ನು ಗೌರವಿಸಬೇಕಷ್ಟೇ. ನಿನ್ನ ಕಾಲ ಬಂದೇ ಬರುತ್ತದೆ, ಅದರ ಹಿಂದೆ ಓಡಬೇಡ ಅಷ್ಟೇ ಎಂದು ಹೇಳಿದ್ದರು ಎಂದು ಆರ್‌ ಶ್ರೀಧರ್ ಬರೆದುಕೊಂಡಿದ್ದಾರೆ. 

ಇದಾಗಿ ಮರು ವರ್ಷದಲ್ಲೇ ಅಂದರೇ 2017ರಲ್ಲಿ ವಿರಾಟ್ ಕೊಹ್ಲಿ(Virat Kohli), ಟೀಂ ಇಂಡಿಯಾ ಮೂರು ಮಾದರಿಯ ತಂಡದ ನಾಯಕರಾಗಿ ನೇಮಕವಾಗಿದ್ದರು. ಧೋನಿ ಕೇವಲ ನಾಯಕತ್ವವನ್ನು ಹಸ್ತಾಂತರಿಸಿದ್ದು ಮಾತ್ರವಲ್ಲದೇ, ಕೊಹ್ಲಿ ನಾಯಕತ್ವದಲ್ಲಿ ಧೋನಿ ಕೆಲ ವರ್ಷಗಳ ಕಾಲ ಕ್ರಿಕೆಟ್ ಆಡಿದ್ದರು. ಇದಾದ ಬಳಿಕ ಧೋನಿ 2020ರ ಡಿಸೆಂಬರ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?