ಟಿ20 ವಿಶ್ವಕಪ್‌ನಲ್ಲಿ ಇವರೇ ಭಾರತದ ಟಾಪ್ ಬ್ಯಾಟರ್‌ಗಳಿರಬೇಕು: ಲಾರಾ

By Naveen Kodase  |  First Published Apr 9, 2024, 12:31 PM IST

ಸ್ಟಾರ್‌ಸ್ಟೋರ್ಟ್ಸ್ ಬಗ್ಗೆ ಜೊತೆ ಮಾತನಾಡಿದ ಅವರು, ಸ್ಟ್ರೈಕ್‌ರೇಟ್‌ ಯಾವತ್ತೂ ಬ್ಯಾಟಿಂಗ್ ಕ್ರಮಾಂಕದ ಮೇಲೆ ಅವಲಂಬಿತವಾಗಿರುತ್ತದೆ. ಆರಂಭಿಕ ಆಟಗಾರನ ಸ್ಟ್ರೈಕ್‌ರೇಟ್‌ 130-140 ಇರುವುದು ತಪ್ಪಲ್ಲ ಎಂದಿದ್ದಾರೆ. ಅಲ್ಲದೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತದ ಅಗ್ರ-3 ಆಟಗಾರರಾಗಿರಬೇಕು ಎಂದು ಲಾರಾ ತಿಳಿಸಿದ್ದಾರೆ.


ಬೆಂಗಳೂರು: ವಿರಾಟ್ ಕೊಹ್ಲಿಯ ಮೌಲ್ಯ ಸ್ಟ್ರೈಕ್‌ರೇಟ್‌ ಗಿಂತ ಮಿಗಿಲಾದದ್ದು. ಅವರು ಟಿ20 ವಿಶ್ವಕಪ್ ತಂಡದಲ್ಲಿ ಇರಬೇಕು ಎಂದು ವೆಸ್ಟ್‌ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಹೇಳಿದ್ದಾರೆ. ಇದೇ ವೇಳೆ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಭಾರತದ ಮೂವರು ಅಗ್ರಕ್ರಮಾಂಕದ ಬ್ಯಾಟರ್‌ಗಳು ಯಾರಿರಬೇಕು ಎನ್ನುವುದನ್ನು ಹೆಸರಿಸಿದ್ದಾರೆ. 

ಈ ಕುರಿತಂತೆ ಸ್ಟಾರ್‌ಸ್ಟೋರ್ಟ್ಸ್ ಬಗ್ಗೆ ಜೊತೆ ಮಾತನಾಡಿದ ಅವರು, ಸ್ಟ್ರೈಕ್‌ರೇಟ್‌ ಯಾವತ್ತೂ ಬ್ಯಾಟಿಂಗ್ ಕ್ರಮಾಂಕದ ಮೇಲೆ ಅವಲಂಬಿತವಾಗಿರುತ್ತದೆ. ಆರಂಭಿಕ ಆಟಗಾರನ ಸ್ಟ್ರೈಕ್‌ರೇಟ್‌ 130-140 ಇರುವುದು ತಪ್ಪಲ್ಲ ಎಂದಿದ್ದಾರೆ. ಅಲ್ಲದೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತದ ಅಗ್ರ-3 ಆಟಗಾರರಾಗಿರಬೇಕು ಎಂದು ಲಾರಾ ತಿಳಿಸಿದ್ದಾರೆ.

Tap to resize

Latest Videos

IPL 2024 ತವರಿನಲ್ಲಿ ಗೆಲುವಿನ ಹಳಿಗೆ ಮರಳಿದ ಸಿಎಸ್‌ಕೆ..! ಕೆಕೆಆರ್‌ಗೆ ಹೀನಾಯ ಸೋಲು

ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಯಶಸ್ವಿ ಜೈಸ್ವಾಲ್, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮಂಕಾಗಿದ್ದಾರೆ. ಜೈಸ್ವಾಲ್ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆಡಿದ ಮೊದಲ 4 ಪಂದ್ಯಗಳಲ್ಲಿ ಕೇವಲ 9.75ರ ಸರಾಸರಿಯಲ್ಲಿ 39 ರನ್ ಗಳಿಸಿದ್ದಾರೆ. ಹೀಗಾಗಿ ಯಶಸ್ವಿ ಜೈಸ್ವಾಲ್ ಅವರಿಗಿಂತ ಶುಭ್‌ಮನ್ ಗಿಲ್ ಉತ್ತಮ ಎನ್ನುವ ಅಭಿಪ್ರಾಯವನ್ನು ಲಾರಾ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನ ರಾಯಲ್ಸ್ ಎದುರು ವಿರಾಟ್ ಕೊಹ್ಲಿ 67 ಎಸೆತಗಳನ್ನು ಎದುರಿಸಿ ಶತಕ ಬಾರಿಸಿದ್ದರು. ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ಬಗ್ಗೆ ನೆಟ್ಟಿಗರು ವಿರಾಟ್ ಕೊಹ್ಲಿ ಮೇಲೆ ಅಸಮಾಧಾನ ಹೊರಹಾಕಿದ್ದರು. ವಿರಾಟ್ ಕೊಹ್ಲಿ ಆಡಿದ ಈ ಇನಿಂಗ್ಸ್‌ ಐಪಿಎಲ್ ಇತಿಹಾಸದಲ್ಲೇ ದಾಖಲಾದ ಜಂಟಿ ನಿಧಾನಗತಿಯ ಶತಕ ಎನಿಸಿಕೊಂಡಿತು. ಯಾಕೆಂದರೆ ಈ ಮೊದಲು 2009ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದಲ್ಲಿದ್ದ ಮನೀಶ್ ಪಾಂಡೆ ಕೂಡಾ 67 ಎಸೆತಗಳನ್ನು ಎದುರಿಸಿ ಶತಕ ಬಾರಿಸಿದ್ದರು.

T20 World Cup 2024 ಪಂತ್-ಸೂರ್ಯನಿಗೆ ಈ ಆಟಗಾರನೇ ಕಂಠಕವಾಗಬಲ್ಲ: ಭವಿಷ್ಯ ನುಡಿದ ವಿರೇಂದ್ರ ಸೆಹ್ವಾಗ್

ಐಪಿಎಲ್‌ನಲ್ಲಿ ವಿರಾಟ್‌ಗರಿಷ್ಠ ಕ್ಯಾಚ್‌ ದಾಖಲೆ

ಐಪಿಎಲ್‌ನಲ್ಲಿ ಗರಿಷ್ಠ ಕ್ಯಾಚ್‌ ಪಡೆದ ಫೀಲ್ಡರ್‌ಗಳ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಅಗ್ರಸ್ಥಾನಕ್ಕೇರಿದರು. ಅವರು ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದ ವೇಳೆ 110ನೇ ಕ್ಯಾಚ್‌ ಪಡೆಯುವ ಮೂಲಕ ಸುರೇಶ್‌ ರೈನಾ(109) ಅವರನ್ನು ಹಿಂದಿಕ್ಕಿದರು. ಕೀರನ್‌ ಪೊಲ್ಲಾರ್ಡ್‌ 108, ರೋಹಿತ್‌ ಶರ್ಮಾ 99, ಶಿಖರ್‌ ಧವನ್‌ 98, ರವೀಂದ್ರ ಜಡೇಜಾ 98 ಕ್ಯಾಚ್‌ಗಳನ್ನು ಪಡೆದಿದ್ದಾರೆ.

click me!