
ನವದೆಹಲಿ(ಸೆ. 16) ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಿಟ್ಟ ನಿರ್ಧಾರವೊಂದನ್ನು ಪ್ರಕಟ ಮಾಡಿ ಅಭಿಮಾನಿಗಳಿಗೆ ಒಂದು ಅರ್ಥದಲ್ಲಿ ಶಾಕ್ ನೀಡಿದ್ದಾರೆ. ಟಿ20 ವಿಶ್ವಕಪ್ ನಂತರ ಟಿ20 ನಾಯಕತ್ವದಿಂದ ಕೆಳಕ್ಕೆ ಇಳಿಯಲಿದ್ದೇನೆ ಎಂದು ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ ಟ್ವೀಟ್ ಮಾಡಿರುವ ಕೊಹ್ಲಿ ಅನೇಕ ವಿಚಾರಗಳನ್ನು ಬರೆದುಕೊಂಡಿದ್ದಾರೆ. ಈ ಪಯಣದಲ್ಲಿ ಜತೆಯಾದ ಹಲವಾರು ಜನರಿಗೆ ಧನ್ಯವಾದ ತಿಳಿಸಿದ್ದಾರೆ.
ನಾಯಕತ್ವ ಬದಲಾವಣೆ ಬಗ್ಗೆ ಜೈ ಶಾ ಹೇಳಿದ್ದಿಷ್ಟು
ನನಗೆ ಭಾರತವನ್ನು ಪ್ರತಿನಿಧಿಸುವ ಅವಕಾಶ ಅಲ್ಲದೇ ತಂಡ ಮುನ್ನಡೆಸುವ ಭಾಗ್ಯವೂ ಸಿಕ್ಕಿತ್ತು. ನಾನು ಎಲ್ಲರಿಗೂ ಧನ್ಯವಾದ ಹೇಳುತ್ತಿದ್ದೇನೆ.. ಉಳಿದ ಆಟಗಾರರ ನೆರವು ಇಲ್ಲದಿದ್ದರೆ ಏನು ಮಾಡಲಾಗುತ್ತಿರಲಿಲ್ಲ. ಸಹ ಆಟಗಾರರು, ಸಪೋರ್ಟ್ ಸ್ಟಾಫ್, ಆಯ್ಕೆ ಮಂಡಳಿ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದ ಅರ್ಪಿಸುತ್ತಿದ್ದೇನೆ.
ಕಳದೆ 5-6 ವರ್ಷದಿಂದ ಎಲ್ಲ ಮೂರು ಮಾದರಿಯಲ್ಲಿ ಟೀಂ ಇಂಡಿಯಾ ಮುನ್ನಡೆಸಿಕೊಂಡುಬಂದಿದ್ದೇನೆ. ನಾನು ಏಕದಿನ ಮತ್ತು ಟೆಸ್ಟ್ ತಂಡ ಮುನ್ನಡೆಸಲು ಸದಾ ಸಿದ್ಧನಾಗಿಯೇ ಇದ್ದೇನೆ. ಇನ್ನು ಮುಂದೆ ಟಿ20 ಯಲ್ಲಿ ಒಬ್ಬ ಬ್ಯಾಟ್ಸ್ ಮನ್ ಆಗಿ ಇರಲು ಬಯಸಿದ್ದೇನೆ.
ಈ ನಿರ್ಧಾರಕ್ಕೆ ಬರಲು ಸಾಕಷ್ಟು ಸಮಯ ತೆಗೆದುಕೊಂಡಿದ್ದೇನೆ. ನನ್ನ ಹತ್ತಿರದ ಜನರ ಜತೆ ಚರ್ಚೆ ಮಾಡಿದ್ದೇನೆ. ರವಿ ಶಾಸ್ತ್ರಿ ಮತ್ತು ರೋಹಿತ್ ಶರ್ಮಾ ಬಳಿಯೂ ಮಾತನಾಡಿದ್ದೇನೆ. ದುಬೈನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ನಂತರ ಟಿ 20 ನಾಯಕತ್ವದಿಂದ ನಿರ್ಗಮಿಸಲಿದ್ದೇನೆ. ಕಾರ್ಯದರ್ಶಿ ಜೈಶಾ ಜತೆಗೂ ಮಾತನಾಡಿದ್ದೇನೆ. ಬಿಸಿಸಿಐ ಅಧ್ಯಕ್ಷ ದೌರವ್ ಗಂಗೂಲಿ ಜತೆಗೂ ಮಾತನಾಡಿದ್ದೇನೆ. ಇನ್ನು ಮುಂದೆಯೂ ನಾನು ಭಾರತದ ಪರವಾಗಿ ಆಡಲಿದ್ದೇನೆ ಎಂದು ಅಭಿಮಾನಿಗಳಿಗೆ ಪತ್ರದ ಮುಖೇನ ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.