
ರಾವಲ್ಪಿಂಡಿ(ಸೆ.16): ತವರಿನಲ್ಲಿ ನ್ಯೂಜಿಲೆಂಡ್ ವಿರುದ್ದ ಸೆಪ್ಟೆಂಬರ್ 17ರಿಂದ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ 12 ಆಟಗಾರರನ್ನೊಳಗೊಂಡ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ಯುವ ಲೆಗ್ ಸ್ಪಿನ್ನರ್ ಜಹಿದ್ ಮೊಹಮೂದ್‌ಗೆ ಇದೇ ಮೊದಲ ಬಾರಿಗೆ ಅಂತಿಮ 12ರ ಬಳಗದಲ್ಲಿ ಸ್ಥಾನ ನೀಡಲಾಗಿದೆ
ಜಹಿದ್ ಮೊಹಮೂದ್ ಖ್ವಾಯಿದ್ ಇ ಅಜಂ ಟ್ರೋಫಿಯಲ್ಲಿ 10 ಪಂದ್ಯಗಳನ್ನಾಡಿ 52 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಹೀಗಾಗಿ ಕಿವೀಸ್ ಎದುರಿನ ಸರಣಿಗೆ ಯುವ ಲೆಗ್ ಸ್ಪಿನ್ನರ್‌ಗೆ ಮಣೆ ಹಾಕಲಾಗಿದೆ. ಈ ವರ್ಷಾರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಏಕದಿನ ಸರಣಿಯನ್ನಾಡಿತ್ತು. ಇಂಗ್ಲೆಂಡ್ ಎದುರಿನ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಬಲಿಷ್ಠ ಇಂಗ್ಲೆಂಡ್ ಎದುರು 0-3 ಅಂತರದಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿತ್ತು. ಇದೀಗ ಬಾಬರ್ ಅಜಂ ಪಡೆ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ತಂಡದೆದುರು 3 ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ.
IPL 2021 ಆರ್‌ಸಿಬಿ ಮಾಡಿದ ಅತಿದೊಡ್ಡ ಎಡವಟ್ಟು ಗುರುತಿಸಿದ ಬ್ರಾಡ್ ಹಾಗ್..!
ಇನ್ನು ನ್ಯೂಜಿಲೆಂಡ್ ತಂಡವು 2003ರ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿಯನ್ನಾಡಲು ಬಂದಿಳಿದಿದೆ. ಸದ್ಯ ಇಸ್ಲಾಮಾಬಾದ್‌ನಲ್ಲಿ ಕಿವೀಸ್ ತಂಡವು ಬಯೋ ಬಬಲ್ ವ್ಯವಸ್ಥೆಯೊಳಗಿದೆ. ಐಪಿಎಲ್ ಟೂರ್ನಿಯಲ್ಲಿ ಕೈಲ್ ಜೇಮಿಸನ್, ಟಿಮ್ ಸೈಫರ್ಟ್, ಕೇನ್ ವಿಲಿಯಮ್ಸನ್, ಜೇಮ್ಸ್ ನೀಶಮ್, ಟ್ರೆಂಟ್ ಬೌಲ್ಟ್, ಆಡಂ ಮಿಲ್ನೆ, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗ್ಯೂಸನ್ ಅವರಂತಹ ಆಟಗಾರರು ಪಾಲ್ಗೊಳ್ಳುತ್ತಿದ್ದು, ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಪಾಕಿಸ್ತಾನವನ್ನು ಎದುರಿಸಲಿದೆ
ಕಿವೀಸ್ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ಪಾಕಿಸ್ತಾನ ತಂಡ ಹೀಗಿದೆ ನೋಡಿ:
ಬಾಬರ್ ಅಜಂ(ನಾಯಕ), ಶದಾಬ್ ಖಾನ್, ಫಖರ್ ಜಮಾನ್, ಹ್ಯಾರಿಸ್ ರವೂಫ್, ಹಸನ್ ಅಲಿ, ಇಫ್ತಿಕರ್ ಅಹಮದ್, ಇಮಾಮ್ ಉಲ್ ಹಕ್, ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಸೌದ್ ಶಕಿಲ್, ಶಾಹಿನ್ ಅಫ್ರಿದಿ, ಉಸ್ಮಾನ್ ಖಾದಿರ್, ಜಹಿದ್ ಮೊಹಮೂದ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.