ಸಿಡ್ನಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ 2018ರ ಸ್ಯಾಂಡ್‌ಪೇಪರ್ ವಿವಾದವನ್ನು ನೆನಪಿಸಿದ್ದಾರೆ. ಪ್ಯಾಂಟ್‌ನ ಖಾಲಿ ಜೇಬುಗಳನ್ನು ತೋರಿಸುವ ಮೂಲಕ ಸ್ಯಾಂಡ್‌ಪೇಪರ್ ಇಲ್ಲ ಎಂದು ಅಭಿನಯಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಟೆಸ್ಟ್ ಪಂದ್ಯಕ್ಕೆ ಸಿಡ್ನಿ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಿತ್ತು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾರೆ. ಸಿಡ್ನಿ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆಯಲ್ಲಿ ವಿರಾಟ್ ಮಾಡಿದ್ದೊಂದು ಸಾಹಸದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮೂರನೇ ದಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾದ ಅಭಿಮಾನಿಗಳು ವಿರಾಟ್ ಕೊಹ್ಲಿ ವಿರುದ್ಧ ಕೂಗಾಡುತ್ತಿದ್ದರು. ಅದಕ್ಕೆ ಕಿಂಗ್ ಕೊಹ್ಲಿ ಪ್ರತಿಕ್ರಿಯಿಸಿ ಇಡೀ ಕ್ರೀಡಾಂಗಣಕ್ಕೆ 2018ರ ಸ್ಯಾಂಡ್‌ಪೇಪರ್ ವಿವಾದ(ಬಾಲ್ ಟ್ಯಾಂಪರಿಂಗ್)ವನ್ನು ನೆನಪಿಸಿ ಇಡೀ ಆಸೀಸ್ ಅಭಿಮಾನಿಗಳು ಮುಟ್ಟಿನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ. .
ಸಿಡ್ನಿ ಟೆಸ್ಟ್ ಸೋಲುತ್ತಿದ್ದಂತೆಯೇ ರೋಹಿತ್ ಬಗ್ಗೆ ಉಲ್ಟಾ ಹೊಡೆದ ಗೌತಮ್ ಗಂಭೀರ್!
ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್‌ನಲ್ಲಿ ಮೂರನೇ ವಿಕೆಟ್ ಆಗಿ ಸ್ಟೀವ್ ಸ್ಮಿತ್ ಔಟಾದರು. ನಂತರ ಆಸ್ಟ್ರೇಲಿಯಾದ ಪ್ರೇಕ್ಷಕರು ವಿರಾಟ್ ಕೊಹ್ಲಿ ವಿರುದ್ಧ ಕೂಗಾಡಲು ಪ್ರಾರಂಭಿಸಿದರು. ಅವರು ಅಭಿಮಾನಿಗಳಿಗೆ ತಮ್ಮ ಪ್ಯಾಂಟ್‌ನ ಎರಡೂ ಖಾಲಿ ಜೇಬುಗಳನ್ನು ತೋರಿಸಿದರು. ನನ್ನ ಪ್ಯಾಂಟ್‌ನಲ್ಲಿ ಸ್ಯಾಂಡ್‌ಪೇಪರ್ ಇಲ್ಲ ಎಂದು ಅಭಿನಯಿಸಿ ತೋರಿಸಿದರು. ಇದರ ನಂತರ ವಿರಾಟ್ ಈಗ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದ್ದಾರೆ ಮತ್ತು ಅವರ ವಿಡಿಯೋ ವೈರಲ್ ಆಗುತ್ತಿದೆ.
"What is that about?" pic.twitter.com/HwNZXhKW1S
— cricket.com.au (@cricketcomau)
VIRAT KOHLI REPLICATING THE SANDPAPER GATE INCIDENT. 🤣🔥pic.twitter.com/qRxgmBaqAh
— Mufaddal Vohra (@mufaddal_vohra)ಸ್ಯಾಂಡ್‌ಪೇಪರ್ ವಿವಾದ 2018ರಲ್ಲಿ ನಡೆದಿತ್ತು, ಆಗ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿತ್ತು. ಕೇಪ್‌ಟೌನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾದ ನಾಯಕರಾಗಿದ್ದ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಹಾಗೂ ಕ್ಯಾಮರೋನ್ ಬೆನ್‌ಕ್ರಾಪ್ಟ್ ಸೇರಿ ಸ್ಯಾಂಡ್‌ಪೇಪರ್ ಬಳಸಿ ಬಾಲ್ ಟ್ಯಾಂಪರಿಂಗ್(ಚೆಂಡು ವಿರೂಪ) ಮಾಡಿ ಸಿಕ್ಕಿ ಬಿದ್ದಿದ್ದರು. ಇದು ಕ್ರಿಕೆಟ್ ಜಗತ್ತಿನಲ್ಲಿ ಆಸ್ಟ್ರೇಲಿಯಾದ ಮರ್ಯಾದೆ ಹಾಳಾಗಿತ್ತು. ಸ್ಮಿತ್ ಮತ್ತು ವಾರ್ನರ್ ಮೇಲೆ ಐಸಿಸಿ ಒಂದು ವರ್ಷ ಪಂದ್ಯಗಳನ್ನು ಆಡದಂತೆ ನಿಷೇಧ ಹೇರಿತ್ತು. ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್‌ರನ್ನು 9 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರವಿಡಲಾಗಿತ್ತು.
ದಶಕದ ಬಳಿಕ ಬಾರ್ಡರ್-ಗವಾಸ್ಕರ್ ಸರಣಿ ಸೋತ ಭಾರತ: WTC ಫೈನಲ್‌ನಿಂದಲೂ ಔಟ್
ಸಿಡ್ನಿ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಕೊನೆಯಲ್ಲಿ ಜಸ್ಪ್ರೀತ್ ಬುಮ್ರಾ ಗಾಯಗೊಂಡು ಮೈದಾನದಿಂದ ಹೊರನಡೆದರು. ಇದರ ನಂತರ ನಾಯಕತ್ವದ ಹೊಣೆ ವಿರಾಟ್ ಕೊಹ್ಲಿ ಅವರ ಹೆಗಲೇರಿತು. ಎರಡನೇ ದಿನದ ಊಟದ ವಿರಾಮದ ನಂತರ ವಿರಾಟ್ ಟೀಂ ಇಂಡಿಯಾವನ್ನು ಮುನ್ನಡೆಸಿದರು. ಆದರೆ ತಂಡವನ್ನು ಸೋಲಿನಿಂದ ಪಾರು ಮಾಡಲು ವಿರಾಟ್ ಕೊಹ್ಲಿಗೂ ಸಾಧ್ಯವಾಗಲಿಲ್ಲ.