ಬೆಂಗಳೂರಲ್ಲಿ ಘರ್ಜಿಸಿದ ಟೀಂ ಇಂಡಿಯಾ; ಏಕದಿನ ಸರಣಿ ಕೈವಶ!

By Suvarna News  |  First Published Jan 19, 2020, 9:07 PM IST

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ರೋಚಕ ಅಂತ್ಯ ಕಂಡಿದೆ. ಬೆಂಗಳೂರಿನಲ್ಲಿ ನಡೆದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಕೊಹ್ಲಿ ಸೈನ್ಯ ಅಬ್ಬರಿಸೋ ಮೂಲಕ ಸರಣಿ ಗೆದ್ದುಕೊಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ಕಿಕ್ಕಿರಿದು ತುಂಬಿದ್ದು ಅಭಿಮಾನಿಗಳ ಮುಂದೆ ಟೀಂ ಇಂಡಿಯಾ ಹೋರಾಟ ಹೇಗಿತ್ತು? ಇಲ್ಲಿದೆ ಹೈಲೈಟ್ಸ್!


"

ಬೆಂಗಳೂರು(ಜ.19): ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಟೀಕೆಗೆ ಗುರಿಯಾಗಿದ್ದ ಟೀಂ ಇಂಡಿಯಾ ಇದೀಗ ತಕ್ಕ ಉತ್ತರ ನೀಡಿದೆ. ರಾಜ್‌ಕೋಟ್ ಪಂದ್ಯದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅದ್ಬುತ್ ಸ್ಪೆಲ್, ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 7 ವಿಕೆಟ್ ಗೆಲವು ಸಾಧಿಸಿದೆ.ಬೆಂಗಳೂರು ಪಂದ್ಯದ ಗೆಲುವಿನೊಂದಿಗೆ ಭಾರತ ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿತು. 

Latest Videos

ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ; ಜಯಸೂರ್ಯ ದಾಖಲೆ ಪುಡಿ ಪುಡಿ!.

ತೀವ್ರ ಕುತೂಹಲ ಕೆರಳಿಸಿದ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ ಆಯ್ಕೆ ಮಾಡಿಕೊಳ್ಳೋ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿತು. ಆದರೆ ಭಾರತೀಯ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡೋ ಮೂಲಕ ಆಸೀಸ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದರು. ಬ್ಯಾಟಿಂಗ್ ಸಹಕಾರಿ ಚಿನ್ನಸ್ವಾಮಿ ಕ್ರೀಡಾಂಗಣಗಲ್ಲಿ ಆಸ್ಟ್ರೇಲಿಯಾ 300 ರನ್ ಗಡಿ ದಾಟೋ ಸೂಚನೆ ನೀಡಿತ್ತು. ಆದರೆ ಮೊಹಮ್ಮದ್ ಶಮಿ ಇದಕ್ಕೆ ಅವಕಾಶ ಕೊಡಲಿಲ್ಲ. ಸ್ಟೀವ್ ಸ್ಮಿತ್ ಶತಕದಿಂದ ಆಸ್ಟ್ರೇಲಿಯಾ 286 ರನ್ ಸಿಡಿಸಿತು.

ಇದನ್ನೂ ಓದಿ: ನಾಯಕನಾಗಿ ಧೋನಿ, ಪಾಂಟಿಂಗ್ ಹಿಂದಿಕ್ಕಿ ದಾಖಲೆ ಬರೆದ ಕೊಹ್ಲಿ!

287ರನ್ ಟಾರ್ಗೆಟ್ ಬೆನ್ನಟ್ಟಲು ಕಣಕ್ಕಿಳಿದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಉತ್ತಮ ಆರಂಭ ನೀಡಿದರು. ಶಿಖರ್ ಧವನ್ ಇಂಜುರಿಯಿಂದ ಕೆಎಲ್ ರಾಹುಲ್ ಆರಂಭಿಕನಾಗಿ ಭಡ್ತಿ ಪಡೆದರು. ಇತ್ತ ಧವನ್ ಬ್ಯಾಟಿಂಗ್ ಮಾಡುವ ಸ್ಥಿತಿಯಲ್ಲಿರಲಿಲ್ಲ. ಕಳೆದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ್ದ ರಾಹುಲ್ ತವರಿನ ಪಿಚ್‌ನಲ್ಲಿ 19 ರನ್ ಸಿಡಿಸಿ ಔಟಾದರು.

ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಯಾಟ, ಆಸೀಸ್ ಪ್ಲಾನ್ ತೆಲೆಕೆಳಗೆ ಮಾಡಿತು. ಆರಂಭದಲ್ಲೇ ಆಗ್ರಸ್ಸೀವ್ ಆಟಕ್ಕೆ ಮುಂದಾಗ ರೋಹಿತ್ 110 ಎಸೆತದಲ್ಲಿ ಸೆಂಚುರಿ ಪೂರೈಸಿದರು. ಏಕದಿನ ಕ್ರಿಕೆಟ್‌ನಲ್ಲಿ 29ನೇ ಶತಕ ಪೂರೈಸಿದರು. ರೋಹಿತ್ 119 ರನ್ ಸಿಡಿಸಿ ಔಟಾದರು. ರೋಹಿತ್ ಇನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ಒಳಗೊಂಡಿತ್ತು.

ರೋಹಿತ್ ಬಳಿಕ, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಜವಾಬ್ದಾರಿ ನಿರ್ವಹಿಸಿದರು. ಅರ್ಧಶತಕದ ಬಳಿಕ ಹೆಚ್ಚು ಆಕ್ರಮಣಕಾರಿ ಆಟವಾಡಿದ ಕೊಹ್ಲಿ 89 ರನ್ ಸಿಡಿಸಿ ಔಟಾದರು. ಈ ವೇಳೆ ಭಾರತದ ಗೆಲುವಿಗೆ 25 ಎಸೆತದಲ್ಲಿ 13 ರನ್ ಅವಶ್ಯಕತೆ ಇತ್ತು. ಶ್ರೇಯಸ್ ಅಯ್ಯರ್ ಅಬ್ಬರ ಮುಂದುವರಿಸಿದರೆ, ಕನ್ನಡಿಗ ಮನೀಶ್ ಪಾಂಡೆ ಉತ್ತಮ ಸಾಥ್ ನೀಡಿದರು.

ಶ್ರೇಯಸ್ ಅಯ್ಯರ್ ಅಜೇಯ 44 ರನ್ ಹಾಗೂ ಮನೀಶ್ ಪಾಂಡೆ ಅಜೇಯ 8 ರನ್ ಸಿಡಿಸಿದರು. ಭಾರತ 47.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗೆಲುವು ಸಾಧಿಸಿತು. 7 ವಿಕೆಟ್ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿ ಗೆದ್ದುಕೊಂಡಿತು. ಟೀಂ ಇಂಡಿಯಾ ಗೆಲುವನ್ನು ಕ್ರಿಕೆಟ್ ದಿಗ್ಗಜರು, ಸೆಲೆಬ್ರೆಟಿಗಳು ಸೇರಿದಂತೆ ಅಭಿಮಾನಿಗಳು ಸಂಭ್ರಮಿಸಿದ್ದಾರೆ.  
 

click me!