
2025 ರ ಏಷ್ಯಾ ಕಪ್ ಫೈನಲ್ (Asia Cup Final) ಹಂತ ತಲುಪಿದೆ. ಇಂದು ಭಾರತ – ಪಾಕಿಸ್ತಾನದ ಮಧ್ಯೆ ಹೈ ಓಲ್ಟೇಜ್ ಫೈನಲ್ ಪಂದ್ಯ ನಡೆಯಲಿದೆ. ಭಾರತ – ಪಾಕಿಸ್ತಾನ ಫೈನಲ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಲೆಜೆಂಡರಿ ಬ್ಯಾಟ್ಸ್ ಮೆನ್ ವಿರಾಟ್ ಕೊಹ್ಲಿ ಪೋಸ್ಟ್ ಒಂದು ವೈರಲ್ ಆಗಿದೆ. ವಿರಾಟ್ ಕೊಹ್ಲಿ (Virat Kohli) ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದು, ಒಂದು ಗಂಟೆಯಲ್ಲಿ ಫೋಟೋ 5 ಮಿಲಿಯನ್ ಲೈಕ್ ಪಡೆದಿದೆ.
ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ, ಟೆಸ್ಟ್ ಹಾಗೂ ಟಿ 20 ಆವೃತ್ತಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ಪ್ರೇಮಿಗಳು ಮಾತ್ರವಲ್ಲ ವಿಶ್ವದಾದ್ಯಂತ ಇರುವ ಕ್ರಿಕೆಟ್ ಪ್ರೇಮಿಗಳು ಏಕದಿನ ಹಾಗೂ ಟಿ 20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರ ಮಿಸ್ ಮಾಡಿಕೊಳ್ತಿದ್ದಾರೆ. ಏಷ್ಯಾ ಕಪ್ ನಲ್ಲಿ ಕೊಹ್ಲಿ ಇದ್ದಿದ್ರೆ ಅದ್ರ ಮಜವೇ ಬೇರೆ ಎನ್ನುವ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಅನೇಕ ದಿನಗಳ ನಂತ್ರ ಇನ್ಸ್ಟಾಗ್ರಾಮ್ ನಲ್ಲಿ ಒಂದು ಫೋಟೋ ಪೋಸ್ಟ್ ಮಾಡಿ ಖುಷಿಪಡಿಸಿದ್ದಾರೆ. ವಿರಾಟ್ ಕೊಹ್ಲಿ ಏಷ್ಯಾಕಪ್ ಕ್ರಿಕೆಟ್ ಬಗ್ಗೆ ಯಾವುದೇ ಪೋಸ್ಟ್ ಹಾಕಿಲ್ಲ. ಅವರು ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೊತೆಗಿರುವ ಒಂದು ಫೋಟೋ ಹಂಚಿಕೊಂಡಿದ್ದಾರೆ.
ವಿಶ್ವ ಪ್ಯಾರಾ ಅರ್ಚರಿ ಚಾಂಪಿಯನ್‌ಶಿಪ್: ಚಿನ್ನ ಗೆದ್ದ ಕೈಗಳಿಲ್ಲದ ಶೀತಲ್‌ದೇವಿ!
ಶನಿವಾರ ವಿರಾಟ್ ಕೊಹ್ಲಿ ಹಾಕಿರುವ ಪೋಸ್ಟ್ ಒಂದೇ ಗಂಟೆಯಲ್ಲಿ 3 ಮಿಲಿಯನ್ಸ್ ಲೈಕ್ ಪಡೆದಿದೆ. 16 ಗಂಟೆಯೊಳಗೆ 9 ಮಿಲಿಯನ್ ಲೈಕ್ ಪಡೆದಿದೆ. 2 ಸಾವಿರಕ್ಕೂ ಹೆಚ್ಚು ಕಮೆಂಟ್ ಬಂದಿದ್ದು, ಅನೇಕರು ಫೋಟೋವನ್ನು ಶೇರ್ ಮಾಡಿದ್ದಾರೆ. ಫೋಟೋದಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಬೆಚ್ಚಗಿನ ಬಟ್ಟೆ ಹಾಕಿರೋದನ್ನು ಕಾಣ್ಬಹುದು. ಅನುಷ್ಕಾ ಕುಳಿತುಕೊಂಡಿದ್ರೆ ವಿರಾಟ್ ಕೊಹ್ಲಿ ನಿಂತು ಫೋಟೋಕ್ಕೆ ಫೋಸ್ ನೀಡಿದ್ದಾರೆ. ಕೊಹ್ಲಿ ಫೋಟೋಗೆ ಒಂದು ನಿಮಿಷ ಆಯ್ತು ಎನ್ನುವ ಶೀರ್ಷಿಕೆ ನೀಡಿದ್ದಾರೆ. ವಿರಾಟ್ ಉದ್ದನೆಯ ನೀಲಿ ಕೋಟ್ನಲ್ಲಿ ಸ್ಟೈಲಿಶ್ ಆಗಿ ಕಾಣುತ್ತಿದ್ದರೆ, ಅನುಷ್ಕಾ ಬಿಳಿ ಟಾಪ್ ಮೇಲೆ ಬೂದು ಬಣ್ಣದ ಸ್ವೆಟರ್ ಧರಿಸಿದ್ದಾರೆ. ಇಬ್ಬರೂ ಲಂಡನ್ ಚಳಿ ಎಂಜಾಯ್ ಮಾಡ್ತಿದ್ದಾರೆ.
ಫ್ಯಾಮಿಲಿ ಜೊತೆ ಲಂಡನ್ ನಲ್ಲಿ ಕೊಹ್ಲಿ :
ಸದ್ಯ ವಿರಾಟ್ ಕೊಹ್ಲಿ ತಮ್ಮ ಫ್ಯಾಮಿಲಿ ಜೊತೆ ಲಂಡನ್ನಲ್ಲಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಕೊಹ್ಲಿ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಈ ವರ್ಷದ ಆರಂಭದಲ್ಲಿ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತರಾದರು. 2024 ರ ಟಿ 20 ವಿಶ್ವಕಪ್ ಗೆದ್ದ ನಂತರ ಅವರು ಇದಕ್ಕೆ ನಿವೃತ್ತಿ ಘೋಷಣೆ ಮಾಡಿದ್ರು. ಕೊಹ್ಲಿ ಈಗ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡಲಿದ್ದಾರೆ. ಅಕ್ಟೋಬರ್ 19 ರಿಂದ ಪ್ರಾರಂಭವಾಗುವ ಆಸ್ಟ್ರೇಲಿಯಾ ಸರಣಿಯಲ್ಲಿ ಅವರು ಮತ್ತೆ ಮೈದಾನಕ್ಕಿಳಿಯುವ ಸಾಧ್ಯತೆ ಇದೆ.
ಏಷ್ಯಾಕಪ್ ಫೈನಲ್: ಪಾಕ್ ವಿರುದ್ಧ ಭಾರತದ ಹೈವೋಲ್ಟೇಜ್ ಮ್ಯಾಚ್!
4,000 ಕ್ಕೂ ಹೆಚ್ಚು ರನ್ ಗಳಿಸಿರುವ ಕೊಹ್ಲಿ :
ವಿರಾಟ್ ಕೊಹ್ಲಿ ವೃತ್ತಿಜೀವನದಲ್ಲಿ 125 ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 117 ಇನ್ನಿಂಗ್ಸ್ಗಳಲ್ಲಿ 4,188 ರನ್ ಗಳಿಸಿದ್ದಾರೆ. ಅವರು ಟಿ 20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ.
ಇನ್ಸ್ಟಾಗ್ರಾಮ್ ನಲ್ಲಿ ಕೊಹ್ಲಿ ಪ್ರಸಿದ್ಧಿ :
ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ 273 ಮಿಲಿಯನ್ಗಿಂತಲೂ ಹೆಚ್ಚು ಫಾಲೋವರ್ಗಳನ್ನು ಹೊಂದಿದ್ದಾರೆ. ಅವರು ವಿಶ್ವಾದ್ಯಂತ ಹೆಚ್ಚು ಫಾಲೋವರ್ಗಳನ್ನು ಹೊಂದಿರುವ ಆಟಗಾರರಲ್ಲಿ ಒಬ್ಬರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.