ಫಾರ್ಮ್ ಸಮಸ್ಸೆ, ಸತತ ಟೀಕೆಗಳಿಂದ ಬೇಸತ್ತು ನಿವೃತ್ತಿಗೆ ನಿರ್ಧರಿಸಿದ್ರಾ ಕೊಹ್ಲಿ?

By Chethan Kumar  |  First Published Jan 5, 2025, 9:40 PM IST

ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್, ಸತತ ಟೀಕೆಗಳಿಂದ ನಿವೃತ್ತಿಗೆ ನಿರ್ಧರಿಸಿದ್ದಾರ? ಈ ಕುರಿತು ಕೊಹ್ಲಿ ನಿರ್ಧಾರವೇನು? 


ಸಿಡ್ನಿ(ಜ.05) ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ಪ್ರಮುಖ ಬ್ಯಾಟರ್‌ಗಳ ಕ್ರಿಕೆಟ್ ಕರಿಯರ್ ತೂಗಯ್ಯಾಲೆಯಲ್ಲಿದೆ. ನಾಯಕ ರೋಹಿತ್ ಶರ್ಮಾ ಫಾರ್ಮ್ ಹಾಗೂ ತಂಡವನ್ನು ಮುನ್ನಡೆಸಿದ ರೀತಿ ತೃಪ್ತಿ ತಂದಿಲ್ಲ. ಕೊನೆಯ ಟೆಸ್ಟ್ ಪಂದ್ಯದಿಂದ ರೋಹಿತ್ ಹೊರಗುಳಿದಿದ್ದರು. ಇತ್ತ ವಿದಾಯದ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಕಳಪೆ ಫಾರ್ಮ್ ಎದುರಿಸಿದ ವಿರಾಟ್ ಕೊಹ್ಲಿ ವಿದಾಯಕ್ಕೆ ನಿರ್ಧರಿಸಿದ್ದಾರ? ಈ ಕುರಿತ ಪ್ರಶ್ನೆಗಳು, ಚರ್ಚೆಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಕ್ರಿಕೆಟ್ ಕರಿಯರ್ ಕುರಿತು ಕೆಲ ಗೊಂದಲ ಹಾಗೂ ಅನುಮಾನಗಳಿಗೆ ಉತ್ತರ ಸಿಕ್ಕಿದೆ.

36 ವರ್ಷದ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ 2024 ಹಾಗೂ 2025ರ ಆರಂಭ ಅತ್ಯಂತ ಕೆಟ್ಟ ವರ್ಷವಾಗಿದೆ. ಕಳಪೆ ಫಾರ್ಮ್ ಕೊಹ್ಲಿಯನ್ನು ಇನ್ನಿಲ್ಲದಂತೆ ಕಾಡಿದೆ. ಆಸಿಸ್ ಪ್ರವಾಸದ ಕಳಪೆ ಬ್ಯಾಟಿಂಗ್‌ನಿಂದ ಕೊಹ್ಲಿ ನಿವೃತ್ತಿಗೆ ಸಜ್ಜಾಗಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಮೂಲಗಳ ಪ್ರಕಾರ 2027ರ ವಿಶ್ವಕಪ್ ವರೆಗೆ ವಿರಾಟ್ ಕೊಹ್ಲಿ ನಿವೃತ್ತಿಗೆ ನಿರ್ಧರಿಸಿಲ್ಲ ಎಂದು ಹೇಳಲಾಗಿದೆ. ಸದ್ಯ ಕ್ರಿಕೆಟ್‌ಗೆ ವಿದಾಯ ಹೇಳುವ ಯಾವುದೇ ನಿರ್ಧಾರವನ್ನು ಕೊಹ್ಲಿ ಮಾಡಿಲ್ಲ ಎಂದು ವರದಿಯಾಗಿದೆ.

Tap to resize

Latest Videos

ರೋಹಿತ್ ಶರ್ಮಾ ತಲೆದಂಡವಾದ್ರೆ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಈತನೇ ಟೀಂ ಇಂಡಿಯಾ ಕ್ಯಾಪ್ಟನ್!

ಆಫ್ರಿಕಾದಲ್ಲಿ ನಡೆಯಲಿರುವ 2027ರ ವಿಶ್ವಕಪ್ ಟ್ರೋಫಿವರೆಗೂ ಟೀಂ ಇಂಡಿಯಾ ಪರ ಆಡಲು ಕೊಹ್ಲಿ ಬಯಸಿದ್ದಾರೆ. ಸದ್ಯ ಎದುರಿಸುತ್ತಿರುವ ಫಾರ್ಮ್ ಸಮಸ್ಯೆಯಿಂದ ಹೊರಬರಲು ಮತ್ತಷ್ಟು ಕಠಿಣ ಅಭ್ಯಾಸ ಹಾಗೂ ಏಕಾಗ್ರತೆ ಸಾಧಿಸಲು ಕೊಹ್ಲಿ ಪ್ಲಾನ್ ಮಾಡಿದ್ದಾರೆ.ಆದರೆ ವಿದಾಯದ ಮಾತುಗಳನ್ನು ತಳ್ಳಿ ಹಾಕಿದ್ದಾರೆ ಎನ್ನಲಾಗುತ್ತಿದೆ.  ಆದರೆ ಜೂನ್ ತಿಂಗಳ ಇಂಗ್ಲೆಂಡ್ ಪ್ರವಾಸಕ್ಕೆ ಕೊಹ್ಲಿ, ರೋಹಿತ್ ಶರ್ಮಾ ಆಯ್ಕೆಯಾಗುತ್ತಾರ ಅನ್ನೋ ಪ್ರಶ್ನೆಗಳು ಮೂಡಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಹೀನಾಯ ಪ್ರದರ್ಶನ ನೀಡಿದ್ದಾರೆ. ಪರ್ತ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಸೆಂಚುರಿ ಸಾಧನೆ ಮಾಡಿದ್ದರು. ಕೊಹ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಫಾರ್ಮ್‌ಗೆ ಮರಳಿದ್ದಾರೆ ಅನ್ನೋ ಸೂಚನೆ ನೀಡಿದ್ದರು. ಆದರೆ ಇನ್ನುಳಿದ ಎಲ್ಲಾ ಟೆಸ್ಟ್ ಪಂದ್ಯಗಳಲ್ಲಿ ವಿಕೆಟ್ ಕೈಚೆಲ್ಲಿ ನಿರಾಸೆ ಅನುಭವಿಸಿದರು. 9 ಇನ್ನಿಂಗ್ಸ್‌ಗಳಿಂದ ಕೊಹ್ಲಿ ಕೇವಲ 190 ರನ್ ಸಿಡಿಸಿದ್ದಾರೆ. ಕೊಹ್ಲಿ ಬ್ಯಾಟಿಂಗ್ ಸರಾಸರಿ 23.75. 

ನಿವೃತ್ತಿ ಮಾತುಗಳಿಂದ ದೂರವಿರಲು ನಿರ್ದರಿಸಿರುವ ಕೊಹ್ಲಿ, ಫಾರ್ಮ್ ಮತ್ತೆ ಕಂಡುಕೊಳ್ಳಲು ಈ ಬಾರಿಯ ರಣಜಿ ಟೂರ್ನಿಯಲ್ಲಿ ಕೊಹ್ಲಿ ದೆಹಲಿ ತಂಡದ ಪರ ಕಣಕ್ಕಿಳಿಯುವ ಸಾಧ್ಯತೆ ಇದೆ. ಜನವರಿ 23ರಿಂದ ರಣಜಿ ಟ್ರೋಫಿ ಆರಂಭಗೊಳ್ಳಲಿದೆ. ಇನ್ನು ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಜೂನ್ ತಿಂಗಳ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಲು ಕೊಹ್ಲಿ ನಿರ್ಧರಿಸಿದ್ದಾರೆ. ಇನ್ನು ಫೆಬ್ರವರಿ ತಿಂಗಳಲ್ಲಿ ಮೂರು ಏಕದಿನ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಮಾಡಲಿದೆ. ಈ ಎಲ್ಲಾ ಸರಣಿಗಳು ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಪ್ರಮುಖ ಸರಣಿಗಳಾಗಿದೆ.

ಇತ್ತ ರೋಹಿತ್ ಶರ್ಮಾ ಈಗಾಗಲೇ ಆಸ್ಟ್ರೇಲಿಯಾ ವಿರುದ್ದದ 5ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಟೆಸ್ಟ್ ಕ್ರಿಕೆಟ್‌ನಿಂದ ರೋಹಿತ್ ಶರ್ಮಾ ವಿದಾಯ ಹೇಳುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬಂದಿದೆ. ರೋಹಿತ್ ಶರ್ಮಾ ನಿರ್ಧಾರ ಕುರಿತು ಆಯ್ಕೆ ಸಮಿತಿ ಚರ್ಚಿಸುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಯಾವುದೂ ಅಧಿಕೃತವಾಗಿಲ್ಲ. ಈ ಬಾರಿಯ ಆಸ್ಟ್ರೇಲಿಯಾ ಸರಣಿ ಹಲವು ಹಿರಿಯ ಕ್ರಿಕೆಟಿಗರ ಮೇಲೆ ತೀವ್ರ ಪರಿಣಾಮ ಬೀರಿದೆ. ತಂಡದ ಸ್ಥಾನ ಉಳಿಸಿಕೊಳ್ಳುವುದೇ ಸವಾಲಾಗಿದೆ. ಈ ಪೈಕಿ ರೊಹಿತ್ ಹಾಗೂ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಿಲ್ಲದ ಕೊಹ್ಲಿಯ ಪರದಾಟ! ವಿರಾಟ್ ಫೇಲ್ಯೂರ್ ಸೀಕ್ರೇಟ್ ಬಿಚ್ಚಿಟ್ಟ ಆಸೀಸ್ ವೇಗಿ

click me!