ಇಂದು ನಡಯೋ ಮೊದಲ ಟಿ20ಯಲ್ಲಿ ಕೊಹ್ಲಿ ಆಡೋದಿಲ್ಲ. ಆದ್ರೆ, ಉಳಿದೆರೆಡು ಪಂದ್ಯಗಳಲ್ಲಿ ಕೊಹ್ಲಿ ಆಡೋದು ಪಕ್ಕಾ..!! ಅದರಲ್ಲೂ ಬ್ಯಾಟಿಂಗ್‌ನಲ್ಲಿ ಇನ್ನಿಂಗ್ಸ್‌ನ ಮೊದಲ ಓವರ್‌ನಿಂದಲೇ ದರ್ಶನ ನೀಡಲಿದ್ದಾರೆ.
ಬೆಂಗಳೂರು(ಜ.11): ಆಪ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯ ಆರಂಭಕ್ಕೂ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಸರಣಿಯ ಮೊದಲ ಪಂದ್ಯದಿಂದ ಟೀಮ್ ಇಂಡಿಯಾದ ಬಿಗ್ ಪ್ಲೇಯರ್ ಔಟಾಗಿದ್ದಾರೆ. ಆದ್ರೆ, ಇದರ ನಡುವೆಯೇ ಈ ಬಿಗ್ ಆಟಗಾರನ ಫ್ಯಾನ್ಸ್ಗೆ ಗುಡ್ನ್ಯೂಸ್ ಸಿಕ್ಕಿದೆ. ಅಷ್ಟಕ್ಕೂ ಇವ್ರು ಏನ್ ಹೇಳ್ತಿದ್ದಾರೆ ಅನ್ಕೊಂಡ್ರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.
ಮೊದಲ ಟಿ20 ಫೈಟ್‌ನಿಂದ ಕೊಹ್ಲಿ ಔಟ್..!
ಆಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಮೊದಲೇ ಟೀಂ ಇಂಡಿಯಾ ಆಘಾತ ಎದುರಾಗಿದೆ. ರನ್ ಮಷಿನ್ ವಿರಾಟ್ ಕೊಹ್ಲಿ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಈ ವಿಷಯವನ್ನು ಖುದ್ದು ತಂಡದ ಕೋಚ್ ರಾಹುಲ್ ದ್ರಾವಿಡ್ ಕನ್ಫರ್ಮ್ ಮಾಡಿದ್ದಾರೆ. ವೈಯಕ್ತಿಕ ಕಾರಣದಿಂದ ಕೊಹ್ಲಿ ಮೊದಲ ಪಂದ್ಯವಾಡ್ತಿಲ್ಲ ಅಂತ ದ್ರಾವಿಡ್ ತಿಳಿಸಿದ್ದಾರೆ. ಇದ್ರಿಂದ 14 ತಿಂಗಳ ನಂತರ T20ಯಲ್ಲಿ ಕೊಹ್ಲಿ ಬ್ಯಾಟಿಂಗ್ ನೋಡಲು ಕಾಯ್ತಿದ್ದ ಫ್ಯಾನ್ಸ್ ನಿರಾಸೆಯಾಗಿದೆ.
ರೆಸ್ಟ್ ಬೇಕೆಂದು ಕಾರಣ ಹೇಳಿ ದುಬೈನಲ್ಲಿ ಪಾರ್ಟಿ ಮಾಡಿದ ಇಶಾನ್ ಕಿಶನ್‌ಗೆ BCCI ಶಾಕ್!
ಯೆಸ್, ಇಂದು ನಡಯೋ ಮೊದಲ ಟಿ20ಯಲ್ಲಿ ಕೊಹ್ಲಿ ಆಡೋದಿಲ್ಲ. ಆದ್ರೆ, ಉಳಿದೆರೆಡು ಪಂದ್ಯಗಳಲ್ಲಿ ಕೊಹ್ಲಿ ಆಡೋದು ಪಕ್ಕಾ..! ಅದರಲ್ಲೂ ಬ್ಯಾಟಿಂಗ್‌ನಲ್ಲಿ ಇನ್ನಿಂಗ್ಸ್‌ನ ಮೊದಲ ಓವರ್‌ನಿಂದಲೇ ದರ್ಶನ ನೀಡಲಿದ್ದಾರೆ.
ಆರಂಭಿಕರಾಗಿ ವಿರಾಟ್ ಕಣಕ್ಕೆ..?
ಹೌದು, ಅಪ್ಘಾನ್ ಟಿ20 ಸರಣಿಯಲ್ಲಿ ರೋಹಿತ್ ಆರಂಭಿಕರಾಗಿ ಕಣಕ್ಕಿಳಿಯೋದು ಫಿಕ್ಸ್. ಆದ್ರೆ, ಕೊಹ್ಲಿ ಯಾವ ಸ್ಥಾನದಲ್ಲಿ ಆಡ್ತಾರೆ ಅನ್ನೋ ಬಗ್ಗೆ ಚರ್ಚೆ ಜೋರಾಗಿದೆ. ಒನ್ಡೇಯಲ್ಲಿ ಆಡಿದಂತೆ 3ನೇ ಕ್ರಮಾಂಕದಲ್ಲಿ ಆಡ್ತಾರಾ..? ಅಥವಾ IPLನಲ್ಲಿ ಆಡಿದಂತೆ ಆರಂಭಿಕರಾಗಿ ಆಡ್ತಾರಾ..? ಅನ್ನೋ ಪ್ರಶ್ನೆ ಮೂಡಿದೆ. ಏಕದಿನ ಕ್ರಿಕೆಟ್ನಲ್ಲಿ ಕೊಹ್ಲಿ ಒನ್ಡೌನ್ನಲ್ಲಿ ಕ್ರೀಸ್ಗಿಳಿದು, ಆ್ಯಂಕರ್ ರೋಲ್ ನಿಭಾಯಿಸ್ತಾರೆ. ಆದ್ರೆ, T20ಯಲ್ಲಿ ಅಂತಹ ಆಟ ನಡೆಯಲ್ಲ. ಹೀಗಾಗಿ ಕೊಹ್ಲಿಯನ್ನ ಒನ್ಡೌನ್ ಬದಲಾಗಿ, ಓಪನರ್ ಆಗಿ ಆಡಿಸಬೇಕು ಅನ್ನೋ ಮಾತುಗಳು ಕೇಳಿಬರ್ತಿವೆ.
ಟೀಂ ಇಂಡಿಯಾ ಪರವೂ ಅದ್ಭುತ ದಾಖಲೆ..!
ಟಿ20ಯಲ್ಲಿ ಆರಂಭಿಕರಾಗಿ ಕೊಹ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಅಲ್ಲದೇ, ಸದ್ಯ IPLನಲ್ಲಿ RCB ಪರವಾಗಿ ಓಪನರ್ ಆಗಿಯೇ ಆಡ್ತಿದ್ದಾರೆ. ಮೂರನೇ ಸ್ಥಾನದಲ್ಲಿ 135ರ ಸ್ಟ್ರೈಕ್ರೇಟ್ನಲ್ಲಿ ರನ್‌ಗಳಿಸಿರೋ ವಿರಾಟ್, ಆರಂಭಿಕರಾಗಿ 161ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಸಿಡಿಸಿದ್ದಾರೆ. ಟೀಂ ಇಂಡಿಯಾ ಪರವೂ ಆರಂಭಿಕರಾಗಿ ಸಕ್ಸಸ್ ಕಂಡಿದ್ದಾರೆ.
ಬ್ಲೂ ಜೆರ್ಸಿಯಲ್ಲಿ ಈವರೆಗೂ 9 ಪಂದ್ಯಗಳಲ್ಲಿ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇದ್ರಲ್ಲಿ 57.14ರ ಸರಾಸರಿ ಮತ್ತು 161.29ರ ಸ್ಟ್ರೈಕ್ರೇಟ್ನಲ್ಲಿ ಬರೋಬ್ಬರಿ 400 ರನ್ಗಳಿಸಿದ್ದಾರೆ. ಇದ್ರಲ್ಲಿ 1 ಶತಕ ಮತ್ತು 2 ಅರ್ಧಶತಕ ಸೇರಿವೆ. ಟೀಂ ಇಂಡಿಯಾ ಪರ ಕೊನೆಯ ಬಾರಿ 2022ರ ಏಷ್ಯಾಕಪ್‌ನಲ್ಲಿ ಅಪ್ಘಾನಿಸ್ತಾನ ವಿರುದ್ಧ ಓಪನರ್ ಆಗಿ ಆಡಿದ್ರು. ಅದೇ ಮ್ಯಾಚಲ್ಲಿ ಭರ್ಜರಿ ಶತಕ ಸಿಡಿಸಿ, ಶತಕದ ಬರದಿಂದ ಹೊರಬಂದಿದ್ರು.
ರೋಹಿತ್ ಶರ್ಮಾಗೆ ಪರ್ಫೆಕ್ಟ್ ಪಾರ್ಟ್ನರ್..!
ಕೊಹ್ಲಿ ಸ್ಪಿನ್ ವಿರುದ್ಧ ರನ್ಗಳಿಸಲು ಪರದಾಡ್ತಾರೆ. ಫಸ್ಟ್ ಡೌನ್ನಲ್ಲಿ ಆಡಿದ್ರೆ ಮಿಡಲ್ ಓವರ್ನಲ್ಲಿ ಸ್ಪಿನ್ ವಿರುದ್ಧ ಆಡೋದು ಕಷ್ಟವಾಗುತ್ತೆ. T20ಯಲ್ಲಿ ಬಾಲ್ಗಳನ್ನ ಡಾಟ್ ಮಾಡೋದು ಅಪರಾಧ. ಹೀಗಾಗಿ ಆರಂಭಿಕರಾಗಿ ಬ್ಯಾಟ್ ಬೀಸಿದ್ರೆ, ಫೀಲ್ಡಿಂಗ್ ರಿಸ್ಟ್ರಿಕ್ಷನ್ ಅಡ್ವಾಂಟೇಜ್ ಸಿಗಲಿದೆ. ಅಲ್ಲದೇ, ರೋಹಿತ್ ಶರ್ಮಾಗೆ ಕೊಹ್ಲಿ ಪರ್ಫೆಕ್ಟ್ ಪಾರ್ಟ್ನರ್. ಇವರಿಬ್ಬರು ಜೊತೆಯಾದ ದಾಖಲೆಯು ಅದ್ಭುತವಾಗಿದೆ. ಕೊಹ್ಲಿ ಕೂಲ್ ಆ್ಯಂಡ್ ಕಾಮ್ ಆಗಿ ಆಡಬಹುದು.
ಅದೇನೆ ಇರಲಿ, ಟಿ20ಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿರೋ ಕೊಹ್ಲಿಗೆ ಪ್ರಮೋಷನ್ ಸಿಗುತ್ತಾ..? ಅಥವಾ ಹಳೆಯ ಪೊಜಿಷನ್ನಲ್ಲೇ ಮುಂದುವರಿಯುತ್ತಾರಾ..? ಅನ್ನೋದು ಕುತೂಹಲ ಮೂಡಿದೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್