ಆಸ್ಟ್ರೆಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಟೀಂ ಇಂಡಿಯಾ 1992 ರ ಕಾಲಘಟ್ಟದಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ತೊಡುತ್ತಿದ್ದ ಜೆರ್ಸಿಯ ಹೋಲಿಕೆಯ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ ಎಂದು ವರದಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ನ.13): ಆಸ್ಪ್ರೇಲಿಯಾ ಪ್ರವಾಸದಲ್ಲಿನ ಸೀಮಿತ ಓವರ್‌ಗಳ ಸರಣಿಯಲ್ಲಿ ಟೀಂ ಇಂಡಿಯಾ ಆಟಗಾರರು ರೆಟ್ರೋ ಜೆರ್ಸಿ ಧರಿಸಲಿದ್ದಾರೆ ಎಂಬ ವದಂತಿ ಹಬ್ಬಿದೆ. ಆದರೆ ಈ ಬಗ್ಗೆ ಬಿಸಿಸಿಐ ಯಾವುದೇ ಸ್ಪಷ್ಟನೆ ನೀಡಿಲ್ಲ.
1992 ರ ಕಾಲಘಟ್ಟದಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ತೊಡುತ್ತಿದ್ದ ಜೆರ್ಸಿಯ ಹೋಲಿಕೆ ಇರುವ ಹಳೆಯ ಜೆರ್ಸಿ ಇದಾಗಿದೆ ಎಂಬ ಸುದ್ದಿ ಹರಿದಾಡ್ತಿದೆ. ಮೂಲಗಳ ಪ್ರಕಾರ 70-80ರ ದಶಕದಲ್ಲಿ ಭಾರತ ತಂಡದ ಆಟಗಾರರು ಧರಿಸುತ್ತಿದ್ದ ಜೆರ್ಸಿ ಎನ್ನಲಾಗಿದೆ. ಕೊರೋನಾ ಲಾಕ್‌ಡೌನ್ ಬಳಿಕ ಭಾರತ ಕ್ರಿಕೆಟ್ ತಂಡ, ಪಾಲ್ಗೊಳ್ಳುತ್ತಿರುವ ಮೊದಲ ಕ್ರಿಕೆಟ್ ಸರಣಿ ಇದಾಗಿದ್ದು, ನ.27 ರಿಂದ ಆರಂಭವಾಗಲಿದೆ. ಏಕದಿನ, ಟಿ20 ಹಾಗೂ ಟೆಸ್ಟ್ ಸರಣಿಯನ್ನಾಡಲು ಟೀಂ ಇಂಡಿಯಾದ 30 ಆಟಗಾರರು ಸಿಡ್ನಿಗೆ ಬಂದಿಳಿದಿದ್ದು, ಸಿಡ್ನಿಯಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಟ್ಟಿದೆ.
undefined
ಸಿಡ್ನಿಯಲ್ಲಿಳಿದ ಟೀಂ ಇಂಡಿಯಾ ಆಟಗಾರರಿಗೆ 14 ದಿನ ಕ್ವಾರಂಟೈನ್..!
ನವೆಂಬರ್ 27ರಿಂದ ಡಿಸೆಂಬರ್ 08ರವರೆಗೆ ಟೀಂ ಇಂಡಿಯಾ 3 ಏಕದಿನ ಬಳಿಕ 3 ಟಿ20 ಪಂದ್ಯಗಳ ಸರಣಿಯಾಡಲಿದೆ. ಸೀಮಿತ ಓವರ್‌ಗಳ ಸರಣಿಯಲ್ಲಿ ಟೀಂ ಇಂಡಿಯಾ ರೆಟ್ರೋ ಜೆರ್ಸಿ ತೊಟ್ಟು ಕಣಕ್ಕಿಳಿಯುವ ವಿಚಾರ ಬಯಲಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಸುರಿಮಳೆಯೇ ಹರಿದುಬರಲಾರಂಭಿಸಿದೆ.
If reports are true this is jersy of India team for Australia tour
Retro Kit
Virat's look in it . pic.twitter.com/QAWortmfhA
Team India Ye Retro jersey ke sath Limited overs matches khelegi 😍 pic.twitter.com/s0DBFtRhGD
— Sushant ⚪ (@i_Sushant10)India to wear this jersey, clearly inspired from 1992, for the Aus series! Wow! Retro kits are 🔥 pic.twitter.com/yWi15WN64W
— Rohit Sankar (@imRohit_SN)