ವಿರಾಟ್ ಕೊಹ್ಲಿ ಈ ಮೊದಲು 4ನೇ ಕ್ರಮಾಂಕದಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ. ಈವರೆಗು 39 ಇನ್ನಿಂಗ್ಸ್ಗಳಿಂದ 55.21ರ ಸರಾಸರಿಯಲ್ಲಿ 1,767 ರನ್ಗಳಿಸಿದ್ದಾರೆ. ಇದ್ರಲ್ಲಿ 7 ಶತಕ ಮತ್ತು ಅರ್ಧಶತಕ ಸೇರಿವೆ. ಈ ಅಂಕಿಆಂಶಗಳನ್ನ ನೋಡಿದ್ರೆ, ಕೊಹ್ಲಿ ಮಿಡಲ್ ಆರ್ಡರ್ನಲ್ಲೂ ಮಿಂಚಬಲ್ಲರು ಅನ್ನೋದು ಕನ್ಫರ್ಮ್.
ಬೆಂಗಳೂರು(ಆ.18) ಏಕದಿನ ವಿಶ್ವಕಪ್ ಮಹಾಯುದ್ಧ ಆರಂಭಕ್ಕಿನ್ನು 48 ದಿನ ಮಾತ್ರ ಬಾಕಿ ಇದೆ. 10 ವರ್ಷಗಳಿಂದ ಯಾವುದೇ ಐಸಿಸಿ ಕಪ್ ಗೆಲ್ಲದ ಟೀಂ ಇಂಡಿಯಾ, ಈ ಬಾರಿ ಅದನ್ನ ಸಾಧಿಸಲೇಬೇಕು ಅಂತ ಪಣ ತೊಟ್ಟಿದೆ. ಆದ್ರೆ, ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ಗೆ ತಂಡದ ಬ್ಯಾಟಿಂಗ್ ವಿಭಾಗದಲ್ಲಿ 4ನೇ ಕ್ರಮಾಂಕದ್ದೇ ದೊಡ್ಡ ಚಿಂತೆಯಾಗಿದೆ.
ಹೌದು, ಸದ್ಯ ತಂಡದಲ್ಲಿ 4ನೇ ಕ್ರಮಾಂಕದಲ್ಲಿ ಸಮರ್ಥವಾಗಿ ಬ್ಯಾಟ್ ಬೀಸುವ ಬ್ಯಾಟ್ಸ್ಮನ್ ಕೊರತೆ ಕಾಡ್ತಿದೆ. ಶ್ರೇಯಸ್ ಅಯ್ಯರ್ ಈ ಸ್ಲಾಟ್ನಲ್ಲಿ ಸೆಟ್ ಆಗಿದ್ರು. ಆದ್ರೆ, ಇಂಜುರಿಯಿಂದಾಗಿ ಈ ಮುಂಬೈಕರ್ ತಂಡದಿಂದ ಹೊರಗುಳಿದಿದ್ದಾರೆ. ವಿಶ್ವಕಪ್ ಟೂರ್ನಿ ಆಡೋದು ಅನುಮಾನವಾಗಿದೆ. ಶ್ರೇಯಸ್ ಮೆಗಾ ಟೂರ್ನಿಗೆ ಅಲಭ್ಯರಾದ್ರೆ, 4ನೇ ಕ್ರಮಾಂಕದಲ್ಲಿ ಯಾರನ್ನು ಆಡಿಸ್ಬೇಕು ಅನ್ನೊ ಚರ್ಚೆ ಶುರುವಾಗಿದೆ. ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ರೇಸ್ನಲ್ಲಿದ್ದಾರೆ. ಆದ್ರೀಗ, ರನ್ಮಷಿನ್ ವಿರಾಟ್ ಕೊಹ್ಲಿ ಹೆಸರು ಕೂಡ ಕೇಳಿ ಬರ್ತಿದೆ.
World Cup 2023: ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ಸಂಭಾವ್ಯ ತಂಡ ಪ್ರಕಟ; 2 ಸ್ಟಾರ್ ಆಟಗಾರರಿಗಿಲ್ಲ ಸ್ಥಾನ..!
ಹೌದು, 4ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿಯನ್ನ ಅಖಾಡಿಕ್ಕಿಳಿಸಬೇಕು ಅಂತ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ. ವಿರಾಟ್ ಕೊಹ್ಲಿಯನ್ನ ನಂಬರ್ ಪೋರ್ನಲ್ಲಿ ಆಡಿಸಬೇಕು. ಇದರಿಂದ ಟಾಪ್ ಆರ್ಡರ್ನಂತೆ ಮಿಡಲ್ ಆರ್ಡರ್ ಕೂಡ ಸ್ಟ್ರಾಂಗ್ ಆಗಲಿದೆ ಅಂತ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
3ನೇ ಕ್ರಮಾಂಕದಲ್ಲಿ ವಿರಾಟ್ ಅದ್ಭುತ ಪ್ರದರ್ಶನ..!
ಏಕದಿನ ಕ್ರಿಕೆಟ್ನಲ್ಲಿ ನಂ.3 ಸ್ಲಾಟ್ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 210 ಪಂದ್ಯಗಳಲ್ಲಿ ಬ್ಯಾಟ್ ಬೀಸಿರೋ ವಿರಾಟ್ ಕೊಹ್ಲಿ, 10,777 ರನ್ ಗಳಿಸಿದ್ದಾರೆ. ಕೊಹ್ಲಿಗಿರೋಷ್ಟು ಸಕ್ಸಸ್ ರೇಟ್ ಬೇರೆ ಯಾವ ಬ್ಯಾಟ್ಸ್ಮನ್ಗು ಇಲ್ಲ. ಅಷ್ಟರ ಮಟ್ಟಿಗೆ ಕೊಹ್ಲಿ ಈ ಸ್ಲಾಟ್ನಲ್ಲಿ ಸೆಟ್ ಆಗಿದ್ದಾರೆ. ಹೀಗಿರೋವಾಗ ಕೊಹ್ಲಿಯನ್ನ 4ನೇ ಕ್ರಮಾಂಕದಲ್ಲಿ ಆಡಿಸಿದ್ರೆ, ಟಾಪ್ ಆರ್ಡರ್ಗೆ ಪೆಟ್ಟು ಬೀಳಲ್ವಾ.? ಅನ್ನೋ ಪ್ರಶ್ನೆ ಮೂಡಿದೆ. ಒಂದು ವೇಳೆ ಮೂರನೇ ಕ್ರಮಾಂಕದಲ್ಲಿ ಆಡೋ ಆಟಗಾರ ಫೇಲ್ ಆದ್ರೆ, ಅದು ಕೊಹ್ಲಿಯ ಬ್ಯಾಟಿಂಗ್ ಮೇಲೂ ಪರಿಣಾಮ ಬೀರಲಿದೆ. ಕೊಹ್ಲಿ ಕೂಡ ವೈಫಲ್ಯ ಅನುಭವಿಸಿದ್ರೆ, ಒಟ್ಟಾರೆ ತಂಡದ ಬ್ಯಾಟಿಂಗ್ ಕೊಲ್ಯಾಪ್ಸ್ ಆಗಲಿದೆ.
ODI World Cup 2023: ವಿಶ್ವಕಪ್ ಟಿಕೆಟ್ ಖರೀದಿಸಲು ರಿಜಿಸ್ಟ್ರೇಷನ್ ಶುರು..! ನೋಂದಣಿಯಿಂದ ಏನು ಲಾಭ?
ಈ ಹಿಂದೆ ಟೀಂ ಇಂಡಿಯಾ ಇಂತದ್ದೊಂದು ಪ್ರಯೋಗ ಮಾಡಿ ಕೈ ಸುಟ್ಟುಕೊಂಡಿತ್ತು. 2007ರ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ತೆಂಡುಲ್ಕರ್ರನ್ನ 4ನೇ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ಆದ್ರೆ, ಸಚಿನ್ ಟೂರ್ನಿಯಲ್ಲಿ ಫ್ಲಾಪ್ ಶೋ ನೀಡಿದ್ರು.
ಮಿಡಲ್ ಆರ್ಡರ್ನಲ್ಲೂ ಮಿಂಚಿರೋ ರನ್ಮಷಿನ್..!
ಯೆಸ್, ವಿರಾಟ್ ಕೊಹ್ಲಿ ಈ ಮೊದಲು 4ನೇ ಕ್ರಮಾಂಕದಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ. ಈವರೆಗು 39 ಇನ್ನಿಂಗ್ಸ್ಗಳಿಂದ 55.21ರ ಸರಾಸರಿಯಲ್ಲಿ 1,767 ರನ್ಗಳಿಸಿದ್ದಾರೆ. ಇದ್ರಲ್ಲಿ 7 ಶತಕ ಮತ್ತು ಅರ್ಧಶತಕ ಸೇರಿವೆ. ಈ ಅಂಕಿಆಂಶಗಳನ್ನ ನೋಡಿದ್ರೆ, ಕೊಹ್ಲಿ ಮಿಡಲ್ ಆರ್ಡರ್ನಲ್ಲೂ ಮಿಂಚಬಲ್ಲರು ಅನ್ನೋದು ಕನ್ಫರ್ಮ್.
ಅದೇನೆ ಇರಲಿ, ವಿಶ್ವಕಪ್ನಲ್ಲಿ ವಿರಾಟ್ ತಮ್ಮ ಸ್ಥಾನವನ್ನು ಬೇರೊಬ್ಬರಿಗೆ ಬಿಟ್ಟುಕೊಟ್ಟು, ನಾಲ್ಕನೇ ಕ್ರಮಾಂಕದಲ್ಲಿ ಆಡ್ತಾರಾ..? ರವಿ ಶಾಸ್ತ್ರಿಯ ಐಡಿಯಾ ವರ್ಕೌಟ್ ಆಗುತ್ತಾ..? ಅನ್ನೋದನ್ನ ಕಾದು ನೋಡಬೇಕಿದೆ.