2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆ; ಕೊಹ್ಲಿ ಗತ್ತು ಒಲಿಂಪಿಕ್ಸ್‌ಗೂ ಗೊತ್ತು..!

By Naveen Kodase  |  First Published Aug 15, 2024, 3:09 PM IST

208ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆಯಾಗಿದೆ. ಇದಕ್ಕೆ ಕೊಹ್ಲಿ ಪಾತ್ರ ದೊಡ್ಡದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಬೆಂಗಳೂರು:  2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ತೆರೆ ಬಿದ್ದಿದ್ದು, ಇದೀಗ ಕ್ರೀಡಾಭಿಮಾನಿಗಳ ಚಿತ್ತ 2028ರಲ್ಲಿ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನತ್ತ ನೆಟ್ಟಿದೆ. ಇನ್ನು ಶತಮಾನದ ಬಳಿಕ ಇದೀಗ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯಾಗಿದೆ. ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಟೀಂ ಇಂಡಿಯಾ ಮಷೀನ್ ವಿರಾಟ್ ಕೊಹ್ಲಿ. ಹೌದು, ಹೀಗಂತ ನಾವು ಹೇಳ್ತಿಲ್ಲ, ಸ್ವತಃ ಒಲಿಂಪಿಕ್ ಡೈರೆಕ್ಟರ್ ಆಗಿರುವ ನಿಕ್ಕೋಲೊ ಚಂಪ್ರೈನಿ ಅವರೇ ಹೇಳಿದ್ದಾರೆ.

ಮುಂಬರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಕ್ರೀಡೆಯನ್ನು ಸೇರ್ಪಡೆಗೊಳಿಸುವಲ್ಲಿ ವಿರಾಟ್ ಕೊಹ್ಲಿ ಪಾತ್ರ ದೊಡ್ಡದಿದೆ ಎಂದು ಸ್ವತಃ ನಿಕ್ಕೋಲೊ ಚಂಪ್ರೈನಿ ಹೇಳಿದ್ದಾರೆ. "ವಿರಾಟ್ ಕೊಹ್ಲಿ ಅವರೊಬ್ಬ ಜಾಗತಿಕ ಮಟ್ಟದ ಕ್ರೀಡಾಪಟುವಾಗಿದ್ದು, ಜಗತ್ತಿನ ಮೂಲೆ ಮೂಲೆಗಳಲ್ಲಿ ಕ್ರಿಕೆಟ್ ಜನಪ್ರಿಯವಾಗಲು ಅವರ ಪಾತ್ರವಿದೆ. ಅದರಲ್ಲೂ ಯುನೈಟೆಡ್ ಸ್ಟೇಟ್ಸ್‌ನಲ್ಲೂ ಕ್ರಿಕೆಟ್ ಕ್ರೇಜ್ ಇದೆ. ವಿರಾಟ್ ಕೊಹ್ಲಿ ಓರ್ವ ಸ್ಪೋರ್ಟ್ಸ್ ಐಕಾನ್ ಆಗಿದ್ದು, ಒಲಿಂಪಿಕ್ಸ್‌ಗೆ ಕ್ರಿಕೆಟ್ ಮರಳುವಲ್ಲಿ ಅವರ ಪಾತ್ರವಿದೆ ಎಂದು ನಿಕ್ಕೋಲೊ ಚಂಪ್ರೈನಿ ಹೇಳಿದ್ದಾರೆ.

Latest Videos

undefined

ಭಾರತ-ಲಂಕಾ ನಡುವೆ ಸೂಪರ್ ಓವರ್ ನಡೆಸಲು ಅಂಪೈರ್ಸ್ ಮರೆತಿದ್ದರಂತೆ! ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್‌

1900ರ ಒಲಿಂಪಿಕ್ಸ್‌ನಲ್ಲಿ ಕೊನೆಯ ಬಾರಿಗೆ ಕ್ರಿಕೆಟ್ ಕ್ರೀಡೆಗೆ ಅವಕಾಶ ನೀಡಲಾಗಿತ್ತು. ಆಗ ಪ್ಯಾರಿಸ್ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಿತ್ತು. ಆಗ ನೆದರ್‌ಲೆಂಡ್ಸ್‌ ಹಾಗೂ ಬೆಲ್ಜಿಯಂ ತಂಡಗಳು ಹಿಂದೆ ಸರಿದಿದ್ದರಿಂದ, ಗ್ರೇಟ್ ಬ್ರಿಟನ್ ಹಾಗೂ ಫ್ರಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಎರಡು ದಿನಗಳ ಕಾಲ ನಡೆದ ಒಲಿಂಪಿಕ್ಸ್‌ ಕ್ರಿಕೆಟ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ತಂಡವು 158 ರನ್ ಅಂತರದ ಜಯಭೇರಿ ಬಾರಿಸಿತ್ತು.

ಇದೀಗ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಟಿ20 ಮಾದರಿಯ ಕ್ರಿಕೆಟ್ ಟೂರ್ನಿ ಆಯೋಜನೆಗೊಳ್ಳುವ ಸಾಧ್ಯತೆಯಿದೆ.  ಇನ್ನು ಇತ್ತೀಚೆಗಷ್ಟೇ ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಫೈನಲ್‌ನಲ್ಲಿ ಮಣಿಸಿದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಇಂದಿನಿಂದ ಮಹಾರಾಜ ಟ್ರೋಫಿ ಟಿ20 ಕದನ ಆರಂಭ; ಪ್ರಶಸ್ತಿಗಾಗಿ 6 ತಂಡಗಳ ನಡುವೆ ಕಾದಾಟ

ಲಾಸ್ ಏಂಜಲೀಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕ್ರಿಕೆಟ್ ಮಾತ್ರವಲ್ಲದೇ ಬೇಸ್‌ಬಾಲ್, ಪ್ಲಾಗ್ ಫುಟ್ಬಾಲ್, ಲ್ಯಾಕ್ರೋಸ್ ಹಾಗೂ ಸ್ಕ್ಯಾಶ್ ಅನ್ನು ಪುನಃ ಪರಿಚಯಿಸಲಾಗಿದೆ.

click me!