ಭಾರತ-ಲಂಕಾ ನಡುವೆ ಸೂಪರ್ ಓವರ್ ನಡೆಸಲು ಅಂಪೈರ್ಸ್ ಮರೆತಿದ್ದರಂತೆ! ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್‌

By Kannadaprabha NewsFirst Published Aug 15, 2024, 12:26 PM IST
Highlights

ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಟೈ ಆದಾಗ ಫಲಿತಾಂಶಕ್ಕಾಗಿ ಸೂಪರ್ ಓವರ್ ನಡೆಸುವುದನ್ನೇ ಅಂಪೈರ್ ಮರೆತಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಕೊಲೊಂಬೊ: ಇತ್ತೀಚೆಗೆ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿ ವೇಳೆ ಮೊದಲ ಪಂದ್ಯ ಟೈಗೊಂಡಿತು. ಆದರೆ ಸೂಪರ್ ಓವರ್ ನಡೆಸಲು ಅಂಪೈರ್‌ಗಳು ಮರೆತು ಹೋದರು. ಅಂಪೈರ್‌ಗಳು, ಮ್ಯಾಚ್ ರೆಫ್ರಿಯಿಂದ ಎಡವಟ್ಟಾಯಿತು ಎನ್ನುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. 

ಐಸಿಸಿಯ ನಿಯಮದ ಪ್ರಕಾರ, ಟಿ20ಯಂತೆ ಏಕದಿನ ಪಂದ್ಯ ಟೈಗೊಂಡರೂ, ಫಲಿತಾಂಶಕ್ಕಾಗಿ ಸೂಪರ್ ಓವರ್ ನಡೆಸಬೇಕು. ಆದರೆ ಅಂಪೈರ್‌ಗಳು ಮರೆತು ಹೋದರು. ಎರಡೂ ತಂಡಗಳ ಆಟಗಾರರು ಸಹ ಈ ಬಗ್ಗೆ ವಿಚಾರಿಸದೆ ಇರುವುದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.

Latest Videos

ಏಕದಿನ  ರ್‍ಯಾಂಕಿಂಗ್‌: 2ನೇ ಸ್ಥಾನಕ್ಕೇರಿದ ರೋಹಿತ್‌

ದುಬೈ: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಐಸಿಸಿ ಏಕದಿನ ಬ್ಯಾಟರ್‌ಗಳ  ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಒಂದು ಸ್ಥಾನ ಏರಿಕೆ ಕಂಡು 2ನೇ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಪರಿಣಾಮ, ರೋಹಿತ್ ರ್‍ಯಾಂಕಿಂಗ್‌ನಲ್ಲಿ ಏರಿಕೆಯಾಗಿದೆ. 

ಲಂಕಾ ವಿರುದ್ಧ ಭಾರತ 0-2ರಲ್ಲಿ ಸರಣಿ ಸೋತರೂ, ರೋಹಿತ್ 2 ಅರ್ಧಶತಕಗಳ ಸಮೇತ 157 ರನ್ ಗಳಿಸಿದ್ದರು. ಶುಭ್ ಮನ್ ಗಿಲ್ ಒಂದು ಸ್ಥಾನ ಕೆಳಗಿಳಿದು 3ನೇ ಸ್ಥಾನ ಪಡೆದರೆ, ವಿರಾಟ್ ಕೊಹ್ಲಿ 4ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಪಾಕಿಸ್ತಾನದ ಬಾಬರ್ ಆಜಂ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ದುಲೀಪ್ ಟ್ರೋಫಿಗೆ 4 ತಂಡ ಪ್ರಕಟ: ಶುಭಮನ್ ಗಿಲ್ ನಾಯಕತ್ವದಲ್ಲಿ ಆಡಲಿರುವ ಕೆ.ಎಲ್.ರಾಹುಲ್!

ಇನ್ನು ರೋಹಿತ್‌ ಎರಡು, ವಿರಾಟ್‌ ಕೊಹ್ಲಿ 5 ವರ್ಷ ಆಡ್ಬಹುದು: ಹರ್ಭಜನ್‌

ನವದೆಹಲಿ: ಭಾರತದ ನಾಯಕ ರೋಹಿತ್‌ ಶರ್ಮಾ ಇನ್ನು 2 ವರ್ಷ ಆಡಬಹುದು. ಆದರೆ ವಿರಾಟ್‌ ಕೊಹ್ಲಿ ಇನ್ನೂ 5 ವರ್ಷ ಆಡಬಲ್ಲರು ಎಂದು ಭಾರತದ ಮಾಜಿ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ವಿರಾಟ್‌ ಸದ್ಯ ಭಾರತ ತಂಡದಲ್ಲಿರುವ ಅತ್ಯಂತ ಫಿಟ್‌ ಆಟಗಾರ. ಪಿಟ್ನೆಸ್‌ ವಿಚಾರದಲ್ಲಿ ಯಾವುದೇ 19 ವರ್ಷದ ಆಟಗಾರನನ್ನೂ ವಿರಾಟ್‌ ಸೋಲಿಸಬಲ್ಲರು. ಅವರು ಅಷ್ಟರ ಮಟ್ಟಿಗೆ ಫಿಟ್‌ ಆಗಿದ್ದಾರೆ. ಹೀಗಾಗಿ ಇನ್ನೂ 5 ವರ್ಷ ಆಡಬಹುದು. ರೋಹಿತ್‌ ಕೂಡಾ ಫಿಟ್‌ ಆಗಿದ್ದಾರೆ. ಅವರಿಬ್ಬರು ಉತ್ತಮವಾಗಿ ಆಡಿದರೆ ಭಾರತ ಗೆಲ್ಲುತ್ತದೆ. ಅವರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್‌ ಉಳಿದಿದೆ’ ಎಂದು ಭಾರತದ ಪರ 700+ ವಿಕೆಟ್‌ ಕಬಳಿಸಿರುವ ಹರ್ಭಜನ್ ಹೇಳಿದ್ದಾರೆ.

Breaking: ಪಾಕ್ ತಂಡದ ಮಾಜಿ ಕೋಚ್ ಈಗ ಟೀಂ ಇಂಡಿಯಾ ನೂತನ ಬೌಲಿಂಗ್ ಗುರು..!

ಬೆಂಗ್ಳೂರಿನ ಎನ್‌ಸಿಎದಲ್ಲಿ ನೇಪಾಳ ತಂಡ ಅಭ್ಯಾಸ

ಬೆಂಗಳೂರು: ಕೆನಡಾದಲ್ಲಿ ನಡೆಯಲಿರುವ ಐಸಿಸಿ ಪುರುಷರ ವಿಶ್ವಕಪ್‌ ಲೀಗ್ 2ರ ಪೂರ್ವಭಾವಿ ಸಿದ್ಧತೆಗಾಗಿ ನೇಪಾಳ ಕ್ರಿಕೆಟ್‌ ತಂಡ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಯಲ್ಲಿ ಅಭ್ಯಾಸ ನಡೆಸಲಿದೆ. ಇನ್ನು 2 ವಾರಗಳ ಕಾಲ ತಂಡದ ಆಟಗಾರರು ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ನೇಪಾಳ ಕ್ರಿಕೆಟ್‌ ಮಂಡಳಿ ತಿಳಿಸಿದೆ. 

ಕಳೆದ ಟಿ20 ವಿಶ್ವಕಪ್‌ಗೂ ಮುನ್ನ ನೇಪಾಳ ಆಟಗಾರರು ಭಾರತಕ್ಕೆ ಆಗಮಿಸಿದ್ದರು. ಗುಜರಾತ್‌ ಹಾಗೂ ಬರೋಡಾ ತಂಡಗಳ ವಿರುದ್ಧ ಅಭ್ಯಾಸ ಪಂದ್ಯಗಳನ್ನು ಆಡಿದ್ದರು.

click me!