
ದುಬೈ(ಮಾ.09) ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ನಡೆದ ಒಂದು ಘಟನೆ ಇದೀಗ ರವೀಂದ್ರ ಜಡೇಜಾ ನಿವೃತ್ತಿಯ ಸುಳಿವು ನೀಡುತ್ತಿದೆ. ಪಂದ್ಯದಲ್ಲಿ ಗೆಲುವು ಅಥವಾ ಸೋತರೂ ಆಟಗಾರರು ಹಗ್ ಮಾಡುತ್ತಾರೆ. ಆದರೆ ಪಂದ್ಯದ ನಡುವೆ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ತಬ್ಬಿಕೊಂಡು ಅಭಿನಂದಿಸಿರುವುದು ಇದೀಗ ನಿವೃತ್ತಿ ಚರ್ಚೆಗೆ ಕಾರಣವಾಗಿದೆ. ರವೀಂದ್ರ ಜಡೇಜಾ ತನ್ನ 10 ಓವರ್ ಕೋಟಾ ಮುಗಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಹೋಗಿ ತಬ್ಬಿಕೊಂಡಿದ್ದಾರೆ. ಕೊಹ್ಲಿ ಏಕದಿನದಲ್ಲಿ ತಮ್ಮ ಕೊನೆಯ ಬಾರಿಗೆ ಓವರ್ ಮಾಡಿದ್ದಾರೆ. ಈ ಸೂಚನೆಯನ್ನು ತಂಡದ ಸದಸ್ಯರಿಗೆ ಮೊದಲೇ ನೀಡಿದ್ದ ಕಾರಣ ಕೊಹ್ಲಿ ಹಗ್ ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ರವೀಂದ್ರ ಜಡೇಜಾ 10 ಓವರ್ ಬೌಲಿಂಗ್ ಮಾಡಿ 30 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು. ರವೀಂದ್ರ ಜಡೇಜಾ ತಮ್ಮ 10 ಓವರ್ ಕೋಟಾ ಮುಗಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಬಂದಿದ್ದಾರೆ. ಬಳಿಕ ರವೀಂದ್ರ ಜಡೇಜಾ ತಬ್ಬಿಕೊಂಡು ಅಭಿನಂದಿಸಿದ್ದಾರೆ. ಜಡೇಜಾ 10ನೇ ಓವರ್‌ನಲ್ಲಿ ವಿಕೆಟ್ ಪಡೆದಿಲ್ಲ. ಹೀಗಿದ್ದರೂ ಕೊಹ್ಲಿ ಬಂದು ತಬ್ಬಿಕೊಂಡು ಅಭಿನಂದಿಸಿದ್ದು ಯಾಕೆ ಅನ್ನೋ ಚರ್ಚಗಳಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಮಾತು ಜಡೇಜಾ ವಿದಾಯ.
ಚಾಂಪಿಯನ್ಸ್ ಟ್ರೋಫಿ ಗೆದ್ದ ರೋಹಿತ್ ವಿದಾಯ ಹೇಳ್ತಾರ? ಬಾಲ್ಯದ ಕೋಚ್ ಸ್ಫೋಟಕ ಹೇಳಿಕೆ
ಅಭಿಮಾನಿಗಳು ಜಡೇಜಾ ನಿವೃತ್ತಿ ಪಂದ್ಯ ಅನ್ನೋದಕ್ಕೆ ಕೆಲ ಕಾರಣವನ್ನು ನೀಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಂದ್ಯದ ಬಳಿಕ ಸ್ಟೀವ್ ಸ್ಮಿತ್ ತಬ್ಬಿಕೊಂಡು ಶುಭಾಶಯ ತಿಳಿಸಿದ್ದರು. ಅತ್ತ ಆಟಗಾರರ ಹಸ್ತಲಾಘವದ ಬಳಿಕ ಸ್ಟೀವ್ ಸ್ಮಿತ್ ವಿದಾಯ ಘೋಷಿಸಿದ್ದರು. ಇದೀಗ ರವೀಂದ್ರ ಜಡೇಜಾಗೆ ಕೊಹ್ಲಿ ತಬ್ಬಿಕೊಂಡು ಶುಭಾಶಯ ವಿನಿಮಯ ಮಾಡಿದ್ದಾರೆ. ಹೀಗಾಗಿ ಜಡೇಜಾ ನಿವೃತ್ತಿ ಸಾಧ್ಯತೆ ಹೆಚ್ಚು ಎನ್ನುತ್ತಿದ್ದಾರೆ ಅಭಿಮಾನಿಗಳು.
ಇಷ್ಟೇ ಅಲ್ಲ ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಇದೇ ರೀತಿ ಹಗ್ ಕೊಟ್ಟಿದ್ದರು. ಹೌದು, 3ನೇ ಟೆಸ್ಟ್ ಪಂದ್ಯ ಆದು. ಬಾರ್ಡರ್ ಗವಾಸ್ಕರ್ ಪಂದ್ಯದಲ್ಲಿ ಆರ್ ಅಶ್ವಿನ್ ಬೌಲಿಂಗ್ ಮುಗಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ, ಆರ್ ಅಶ್ವಿನ್ ತಬ್ಬಿಕೊಂಡು ಅಭಿನಂದಸಿದ್ದರು. ಇದಾದ ಕೆಲವೇ ಘಂಟೆಗಳಲ್ಲಿ ಆರ್ ಅಶ್ವಿನ್ ವಿದಾಯ ಘೋಷಿಸಿದ್ದರು. ಹೀಗಾಗಿ ಈ ಬಾರಿ ರವೀಂದ್ರ ಜಡೇಜಾ ತಮ್ಮ ವಿದಾಯ ಸೂಚನೆಯನ್ನು ಕೊಹ್ಲಿಗೆ ನೀಡಿದ್ದರು. ಹೀಗಾಗಿ ಕೊಹ್ಲಿ ಹಗ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಗೆದ್ದು ದಾಖಲೆ ಬರೆದಿರುವ ಕಾರಣ ಹಲವರಿಗೆ ವಿದಾಯ ಹೇಳಲು ಇದು ಸೂಕ್ತ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದೇ ವೇಳೆ ಮುಂದಿನ ಸರಣಿಗಳಲ್ಲೂ ಇದೇ ತಂಡ ಇರಬೇಕು. ಈ ತಂಡ ಯಾವುದೇ ಟೂರ್ನಿ ಗೆಲ್ಲಲಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಜಿಲೆಂಡ್ ಮಣಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ, ಐಸಿಸಿ ಟೂರ್ನಿಯಲ್ಲಿ ಹೊಸ ದಾಖಲೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.