Virat Kohli 71st Century: ಮೂರು ವರ್ಷಗಳ ಬಳಿಕ ಕೊಹ್ಲಿ ಸೆಂಚುರಿ, ಟಿ20ಯಲ್ಲಿ ಮೊಟ್ಟಮೊದಲ ಶತಕ

By Santosh NaikFirst Published Sep 8, 2022, 8:59 PM IST
Highlights

ಟೀಮ್‌ ಇಂಡಿಯಾದ ಕ್ಲಾಸಿಕ್‌ ಆಟಗಾರ ವಿರಾಟ್‌ ಕೊಹ್ಲಿ ಅಂದಾಜು ಮೂರು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ್ದಾರೆ. ಇದು ಟಿ20 ಕ್ರಿಕೆಟ್‌ನಲ್ಲಿ ಅವರ ಮೊಟ್ಟಮೊದಲ ಶತಕ ಎನಿಸಿದೆ.
 

ದುಬೈ (ಸೆ. 8): ಟೀಮ್‌ ಇಂಡಿಯಾದ ಸೂಪರ್‌ ಸ್ಟಾರ್‌ ಬ್ಯಾಟ್ಸ್‌ ಮನ್‌ ಹಾಗೂ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅಂದಾಜು ಮೂರು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಬ್ಬರದ ಶತಕ ಸಿಡಿಸಿದ್ದಾರೆ. ಗುರುವಾರ ಅಫ್ಘಾನಿಸ್ತಾನ ವಿರುದ್ಧ ಏಷ್ಯಾಕಪ್‌ ಸೂಪರ್‌-4 ಹಂತದ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ ಶತಕ ದಾಖಲು ಮಾಡುವ ಮೂಲಕ ಅಂತಾರಾಷ್ಟ್ರೀಯ ಟಿ20ಯಲ್ಲಿ ತಮ್ಮ ಮೊಟ್ಟಮೊದಲ ಶತಕ ದಾಖಲು ಮಾಡಿದರು. ಆ ಮೂಲಕ ಕ್ರಿಕೆಟ್‌ನ ಎಲ್ಲಾ ಮೂರೂ ಮಾದರಿಯಲ್ಲಿ ಶತಕ ಬಾರಿಸಿದ ವಿಶ್ವದ ಕೆಲವೇ ಕೆಲವು ಆಟಗಾರರಲ್ಲಿ ವಿರಾಟ್‌ ಕೊಹ್ಲಿ ಒಬ್ಬರಾಗಿದ್ದಾರೆ.  ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲ 50 ರನ್‌ ಬಾರಿಸಲು 32 ಎಸೆತ ಎಸೆತ ತೆಗದುಕೊಂಡ ವಿರಾಟ್‌ ಕೊಹ್ಲಿ ನಂತರದ 50 ರನ್‌ಗಳನ್ನು ಬಾರಿಸಲು ಕೇವಲ 20 ಎಸೆತಗಳನ್ನು ತೆಗೆದುಕೊಂಡರು. 2019ರ ನವೆಂಬರ್ 23 ರಂದು ಕೋಲ್ಕತದಲ್ಲಿ ನಡೆದ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಶತಕ ಬಾರಿಸಿದ್ದು ವಿರಾಟ್‌ ಕೊಹ್ಲಿಯ ಕೊನೆಯ ಅಂತಾರಾಷ್ಟ್ರೀಯ ಶತಕ ಎನಿಸಿತ್ತು. ಕೊನೆಗೂ ಅಂದಾಜು 1 ಸಾವಿರ ದಿನಗಳ ಬಳಿಕ ವಿಶ್ವ ಕ್ರಿಕೆಟ್‌ನ ಸೂಪರ್‌ ಸ್ಟಾರ್ ಆಟಗಾರ ತಮ್ಮ 71ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದರು. 

That Six 🥵🥵 KING is BACK 💥 pic.twitter.com/2GvTratvY8

— MAHESH ᴰᵃᵉᵐᵒⁿ (@maheshpupa)


ರಿಕಿ ಪಾಂಟಿಂಗ್‌ ದಾಖಲೆ ಸರಿಗಟ್ಟಿದ ಕಿಂಗ್‌ ಕೊಹ್ಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71ನೇ ಶತಕ ಸಿಡಿಸುವ ಮೂಲಕ ಗರಿಷ್ಠ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ, ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್‌ ದಾಖಲೆಯನ್ನು ಸರಿಗಟ್ಟಿದರು. ಸಚಿನ್‌ ತೆಂಡುಲ್ಕರ್ 782 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಿಂದ 100 ಶತಕ ಸಿಡಿಸಿದ್ದರೆ, ವಿರಾಟ್‌ ಕೊಹ್ಲಿ 522 ಇನ್ನಿಂಗ್ಸ್‌ಗಳಿಂದ 71 ಶತಕ ಬಾರಿಸಿದ್ದಾರೆ. ಪಾಂಟಿಂಗ್‌ ಇಷ್ಟೇ ಶತಕಗಳನ್ನು ಬಾರಿಸಲು 668 ಇನ್ನಿಂಗ್ಸ್‌ ಆಡಿದ್ದರು. ನಂತರದ ಸ್ಥಾನಗಳಲ್ಲಿ ಕುಮಾರ ಸಂಗಕ್ಕರ (63) ಹಾಗೂ ಜಾಕ್ಸ್‌ ಕಾಲಿಸ್‌ (62) ಇದ್ದಾರೆ.

10 ವರ್ಷದಲ್ಲಿ ಮೊದಲ ಬಾರಿಗೆ ಒಂದು ತಿಂಗಳು ಬ್ಯಾಟ್‌ ಮುಟ್ಟಿರಲಿಲ್ಲ..! ವಿರಾಟ್ ಕೊಹ್ಲಿ ಹೀಗಂದಿದ್ದೇಕೆ?

84 ಇನ್ನಿಂಗ್ಸ್‌ಗಳ ಬಳಿಕ ಶತಕ: ವಿರಾಟ್‌ ಕೊಹ್ಲಿ (Virat Kohli) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (International Cricket) ಒಟ್ಟು 84 ಇನ್ನಿಂಗ್ಸ್‌ಗಳ ಬಳಿಕ ಮೊದಲ ಶತಕ ಬಾರಿಸಿದರು. ಅದಲ್ಲದೆ, ವಿರಾಟ್ ಕೊಹ್ಲಿ ಬಾರಿಸಿದ ಅಜೇಯ 122 ರನ್‌ ಅಂತಾರಾಷ್ಟ್ರೀಯ ಟಿ20ಯಲ್ಲಿ ಅಫ್ಘಾನಿಸ್ತಾನ  (Afghanistan)ವಿರುದ್ಧದ ಯಾವುದೇ ಬ್ಯಾಟ್ಸ್‌ಮನ್‌ನ ಗರಿಷ್ಠ ಮೊತ್ತವಾಗಿದೆ. ಇದನ್ನೂ ಮುನ್ನ 2012ರಲ್ಲಿ ಆರ್‌ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ನ ಲೈಕ್‌ ರೈಟ್‌ ಅಜೇಯ 99 ರನ್‌ ಬಾರಿಸಿದ್ದು ಗರಿಷ್ಠ ಮೊತ್ತವಾಗಿತ್ತು. ಅದಲ್ಲದೆ, 2019ರಲ್ಲಿ ಡೆಹ್ರಾಡೂನ್‌ನಲ್ಲಿ ನಡೆದ ಪಂದ್ಯದಲ್ಲಿ ಪೌಲ್‌ ಸ್ಟಿರ್ಲಿಂಗ್‌ 91 ರನ್‌ ಬಾರಿಸಿದ್ದು ಹಿಂದಿನ ಗರಿಷ್ಠ ಮೊತ್ತ ಎನಿಸಿತ್ತು.

Asia Cup 2022: ಪಾಂಟಿಂಗ್‌ ಶತಕದ ದಾಖಲೆ ಸರಿಗಟ್ಟಿದ ಕೊಹ್ಲಿ, ಅಫ್ಘಾನ್‌ಗೆ ಬೃಹತ್‌ ಸವಾಲು

ಟಿ20ಯಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ನ ಗರಿಷ್ಠ ಮೊತ್ತ: ವಿರಾಟ್‌ ಕೊಹ್ಲಿ ಬಾರಿಸಿದ ಅಜೇಯ 122 ರನ್‌ ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತದ ಆಟಗಾರನ ವೈಯಕ್ತಿಕ ಗರಿಷ್ಠ ಮೊತ್ತ ಎನಿಸಿದೆ. ಇದಕ್ಕೂ ಮುನ್ನ ಶ್ರೀಲಂಕಾ (Sri Lanka) ವಿರುದ್ಧ 2017ರಲ್ಲಿ ಇಂದೋರ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ರೋಹಿತ್‌ ಶರ್ಮ (Rohit Sharma) ಬಾರಿಸಿದ್ದ 118 ರನ್‌ ಭಾರತದ ಆಟಗಾರನ ಗರಿಷ್ಠ ಮೊತ್ತ ಎನಿಸಿತ್ತು. 2022ರಲ್ಲಿ ಇಂಗ್ಲೆಂಡ್‌ ವಿರುದ್ಧ ನಾಟಿಂಗ್‌ಹ್ಯಾಂ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ಬಾರಿಸಿದ್ 117 ರನ್‌, 2018ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಲಕ್ನೋದಲ್ಲಿ ರೋಹಿತ್‌ ಬಾರಿಸಿದ್ದ ಅಜೇಯ 111 ರನ್‌, 2016ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಲೌಡೆರ್‌ ಹಿಲ್‌ನಲ್ಲಿ ಕೆಲ್‌ ರಾಹುಲ್‌ ಬಾರಿಸಿದ್ದ ಅಜೇಯ 110 ರನ್‌ ನಂತರದ ಸ್ಥಾನದಲ್ಲಿವೆ.

click me!