ರಾಜಸ್ಥಾನ ಬಿಟ್ಟು ಗುಜರಾತ್‌ ತಂಡ ಸೇರಿದ ರವಿ ಬಿಷ್ಣೋಯ್‌..!

By Kannadaprabha News  |  First Published Jun 28, 2023, 8:41 AM IST

ಈ ಋತುವಿನ ದೇಸಿ ಟೂರ್ನಿ ಆರಂಭಕ್ಕೂ ಮುನ್ನ ರಾಜಸ್ಥಾನ ತಂಡ ತೊರೆ ರವಿ ಬಿಷ್ಣೋಯ್‌
ರವಿ ಬಿಷ್ಣೋಯ್‌ ಈ ಆವೃತ್ತಿಯಿಂದ ಗುಜರಾತ್ ತಂಡದ ಪರ ಕಣಕ್ಕೆ
ಬಿಷ್ಣೋಯ್‌ ಭಾರತದ ಪರ 10 ಟಿ20, 1 ಏಕದಿನ ಪಂದ್ಯವಾಡಿರುವ ರವಿ ಬಿಷ್ಣೋಯ್


ನವದೆಹಲಿ(ಜೂ.28): ತಾರಾ ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯ್‌ ಈ ಋತುವಿನ ದೇಸಿ ಟೂರ್ನಿ ಆರಂಭಕ್ಕೂ ಮುನ್ನ ರಾಜಸ್ಥಾನ ತಂಡ ತೊರೆದು ಗುಜರಾತ್‌ ತಂಡ ಸೇರ್ಪಡೆಗೊಂಡಿದ್ದಾರೆ. ಕಳೆದ ವರ್ಷ ರಾಜಸ್ಥಾನ ತಂಡದ ಪರ 1 ಪ್ರಥಮ ದರ್ಜೆ ಹಾಗೂ ಕೆಲ ಲಿಸ್ಟ್‌ ‘ಎ’, ಟಿ20 ಪಂದ್ಯಗಳನ್ನಾಡಿದ್ದ 22 ವರ್ಷದ ಬಿಷ್ಣೋಯ್‌, ಇನ್ನು ಗುಜರಾತ್‌ ತಂಡವನ್ನು ಪ್ರತಿನಿಧಿಸುವುದಾಗಿ ಸಾಮಾಜಿಕ ತಾಣಗಳಲ್ಲಿ ಘೋಷಿಸಿದ್ದಾರೆ.

2022ರ ಫೆಬ್ರವರಿಯಲ್ಲಿ ಸ್ಪಿನ್ನರ್ ರವಿ ಬಿಷ್ಣೋಯ್‌ ಭಾರತ ಕ್ರಿಕೆಟ್‌ ತಂಡದ ಪರ ಪಾದಾರ್ಪಣೆ ಮಾಡಿದ್ದರು. ಇದೀಗ ಬಿಷ್ಣೋಯ್‌ ಭಾರತದ ಪರ 10 ಟಿ20, 1 ಏಕದಿನ ಪಂದ್ಯವಾಡಿದ್ದಾರೆ. ಇನ್ನು 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರವಿ ಬಿಷ್ಣೋಯ್‌, ಲಖನೌ ಸೂಪರ್ ಜೈಂಟ್ಸ್ ಪರ 16 ವಿಕೆಟ್ ಕಬಳಿಸಿದ್ದರು. 

Latest Videos

undefined

ಇಂದಿನಿಂದ ಬೆಂಗಳೂರಲ್ಲಿ ದುಲೀಪ್‌ ಟ್ರೋಫಿ ಕ್ರಿಕೆಟ್‌

ಬೆಂಗಳೂರು: 2023-34 ದೇಸಿ ಕ್ರಿಕೆಟ್‌ಗೆ ಬೆಂಗಳೂರಿನಲ್ಲಿ ಬುಧವಾರ ದುಲೀಪ್‌ ಟ್ರೋಫಿ ಮೂಲಕ ಚಾಲನೆ ಸಿಗಲಿದೆ. ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ನಗರದ 2 ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಆಲೂರು ಕ್ರೀಡಾಂಗಣದಲ್ಲಿ ಕೇಂದ್ರ ಹಾಗೂ ಪೂರ್ವ ವಲಯ ತಂಡಗಳು ಸೆಣಸಾಡಲಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತರ ಹಾಗೂ ಈಶಾನ್ಯ ತಂಡಗಳು ಮುಖಾಮುಖಿಯಾಗಲಿವೆ. ಕಳೆದ ಋತುವಿನಲ್ಲಿ ಫೈನಲ್‌ ಪ್ರವೇಶಿಸಿದ್ದ ಪಶ್ಚಿಮ ಹಾಗೂ ದಕ್ಷಿಣ ವಲಯ ತಂಡಗಳು ಈಗಾಗಲೇ ನೇರವಾಗಿ ಸೆಮಿಫೈನಲ್‌ ಪ್ರವೇಶಿಸಿದ್ದು, ಕ್ವಾರ್ಟರ್‌ನಲ್ಲಿ ಗೆಲ್ಲುವ ತಂಡದ ವಿರುದ್ಧ ಸೆಣಸಾಡಲಿದೆ.

ವಿಶ್ವಕಪ್‌ ಅರ್ಹತಾ ಸುತ್ತು:ನಾಳೆಯಿಂದ ಸೂಪರ್‌ 6

ಹರಾರೆ: 2023ರ ಏಕದಿನ ವಿಶ್ವಕಪ್‌ ಅರ್ಹತಾ ಟೂರ್ನಿಯ ಗುಂಪು ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಗುರುವಾರದಿಂದ ಸೂಪರ್‌ 6 ಹಂತ ಆರಂಭಗೊಳ್ಳಲಿದೆ. ಮಂಗಳವಾರ ನಡೆದ ಗುಂಪು ಹಂತದ ಕೊನೆಯ 2 ಪಂದ್ಯಗಳಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ಶ್ರೀಲಂಕಾ 82 ರನ್‌ಗಳಿಂದ ಗೆದ್ದರೆ, ಯುಎಇ ವಿರುದ್ಧ ಐರ್ಲೆಂಡ್‌ 138 ರನ್‌ಗಳಿಂದ ಜಯಿಸಿತು. ಸೂಪರ್‌-6 ಹಂತಕ್ಕೆ ವಿಂಡೀಸ್‌, ಲಂಕಾ, ಜಿಂಬಾಬ್ವೆ, ಒಮಾನ್‌, ನೆದರ್‌ಲೆಂಡ್ಸ್‌, ಸ್ಕಾಟ್ಲೆಂಡ್‌ ತಂಡಗಳು ಪ್ರವೇಶಿಸಿವೆ. ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯಲಿರುವ ಈ ಹಂತದಲ್ಲಿ ಪ್ರತಿ ತಂಡವು ಉಳಿದ 5 ತಂಡಗಳ ವಿರುದ್ಧ ತಲಾ ಒಮ್ಮೆ ಸೆಣಸಲಿವೆ. ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆವ ತಂಡಗಳು ಫೈನಲ್‌ ಪ್ರವೇಶಿಸಿ, ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ.

ವೆಸ್ಟ್‌ಇಂಡೀಸ್‌ ವಿರುದ್ಧ ಡಚ್‌ಗೆ ‘ಸೂಪರ್‌’ ಜಯ!

ಹರಾರೆ: ಭಾರೀ ರೋಚಕತೆ ಸೃಷ್ಟಿಸಿದ್ದ ವೆಸ್ಟ್‌ಇಂಡೀಸ್‌ ವಿರುದ್ಧದ ಏಕದಿನ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ನೆದರ್‌ಲೆಂಡ್ಸ್‌ ಸೂಪರ್‌ ಓವರ್‌ನಲ್ಲಿ ಗೆಲುವು ಸಾಧಿಸಿದೆ. ಇದು 2 ಬಾರಿ ಚಾಂಪಿಯನ್‌ ವಿಂಡೀಸ್‌ಗೆ ಸತತ 2ನೇ ಸೋಲು. ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌, ನಿಕೋಲಸ್‌ ಪೂರನ್‌(65 ಎಸೆತದಲ್ಲಿ 104) ಶತಕದ ನೆರವಿನಿಂದ 6 ವಿಕೆಟ್‌ಗೆ 376 ರನ್‌ ಕಲೆಹಾಕಿತು. ಬೃಹತ್‌ ಗುರಿ ಬೆನ್ನತ್ತಿದ ನೆದರ್‌ಲೆಂಡ್ಸ್‌ ತೇಜ ನಿಡಮನೂರು(111) ಶತಕದಿಂದಾಗಿ 50 ಓವರಲ್ಲಿ 9 ವಿಕೆಟ್‌ಗೆ 374 ರನ್‌ ಗಳಿಸಿತು. ಕೊನೆ ಎಸೆತದಲ್ಲಿ ವಿಕೆಟ್‌ ಕಳೆದುಕೊಳ್ಳುವುದರೊಂದಿಗೆ ಪಂದ್ಯ ಟೈ ಆಯಿತು.

Ashes 2023: ಇಂದಿನಿಂದ ಲಾರ್ಡ್ಸ್‌ನಲ್ಲಿ ಎರಡನೇ ಆ್ಯಷಸ್ ಟೆಸ್ಟ್, ಉಭಯ ತಂಡದಲ್ಲಿ ಮಹತ್ವದ ಬದಲಾವಣೆ?

ಹೀಗಾಗಿ ಫಲಿತಾಂಶ ನಿರ್ಣಯಿಸಲು ಸೂಪರ್‌ ಓವರ್‌ ಮೊರೆಹೋಗಲಾಯಿತು. ನೆದರ್‌ಲೆಂಡ್ಸ್‌ ವ್ಯಾನ್‌ ಡೀಕ್‌ರ ಸ್ಫೋಟಕ ಆಟ(3 ಬೌಂಡರಿ, 3 ಸಿಕ್ಸರ್‌)ದಿಂದಾಗಿ 30 ರನ್‌ ದೋಚಿದರೆ, ವಿಂಡೀಸ್‌ 8 ರನ್‌ಗೆ ಆಲೌಟಾಯಿತು.

ಜಿಂಬಾಬ್ವೆಗೆ 303 ರನ್‌ ಗೆಲುವು!

ಅಮೆರಿಕ ವಿರುದ್ಧ ಜಿಂಬಾಬ್ವೆ 304 ರನ್‌ ಬೃಹತ್‌ ಗೆಲುವು ಸಾಧಿಸಿದ್ದು, ಪುರುಷರ ಏಕದಿನಲ್ಲಿ 2ನೇ ಗರಿಷ್ಠ ರನ್‌ ಅಂತರದ ಗೆಲುವು ಎನಿಸಿಕೊಂಡಿತು. ಇತ್ತೀಚೆಗಷ್ಟೇ ಭಾರತ, ಶ್ರೀಲಂಕಾ ವಿರುದ್ಧ 317 ರನ್‌ಗಳಿಂದ ಗೆದ್ದಿದ್ದು ದಾಖಲೆಯಾಗಿಯೇ ಉಳಿದಿದೆ. ಸೋಮವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ 6 ವಿಕೆಟ್‌ಗೆ 408 ರನ್‌ ಗಳಿಸಿತು. ಏಕದಿನಲ್ಲಿ ಇದು ಜಿಂಬಾಬ್ವೆಯ ಮೊದಲ 400 ಮೊತ್ತ. ದೊಡ್ಡ ಗುರಿ ಬೆನ್ನತ್ತಿದ ಅಮೆರಿಕ 104 ರನ್‌ಗೆ ಆಲೌಟಾಯಿತು.

click me!