ವಿರಾಟ್ ಕೊಹ್ಲಿ ಮೇಲೂ ಪೊಲೀಸ್ ಠಾಣೆಗೆ ದೂರು?: 'ಚಿನ್ನಸ್ವಾಮಿ ಕಾಲ್ತುಳಿತ ದುರಂತಕ್ಕೆ ಕೊಹ್ಲಿ ಹೊಣೆ' ಆರೋಪ

Published : Jun 06, 2025, 07:26 PM IST
virat kohli with ipl trophy

ಸಾರಾಂಶ

ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತ ದುರಂತಕ್ಕೆ ವಿರಾಟ್ ಕೊಹ್ಲಿ ಕಾರಣ ಎಂದು ಹಿರಿಯ ಹೋರಾಟಗಾರ ಹೆಚ್.ಎಂ. ವೆಂಕಟೇಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಭಿಮಾನಿಗಳನ್ನು ಪ್ರಚೋದಿಸಿ, ಸಭೆ ಆಯೋಜಿಸಿ, ಅವರ ಸಾವಿಗೆ ಕಾರಣರಾದ ಕೊಹ್ಲಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಶಿವಮೊಗ್ಗ/ಬೆಂಗಳೂರು (ಜೂ.6): ಆರ್‌ಸಿಬಿ ತಂಡದ ವಿಜಯೋತ್ಸವ ಸಂದರ್ಭದಲ್ಲಿ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಕಾರಣಕರ್ತರಾಗಿದ್ದಾರೆ ಎಂಬ ಆರೋಪದಡಿ, ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್.ಎಂ. ವೆಂಕಟೇಶ್ ಅವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಾರೋಗೂಳಿಗೆ ಗ್ರಾಮಕ್ಕೆ ಸೇರಿದ ವೆಂಕಟೇಶ್ ಅವರು ದಾಖಲಿಸಿದ ದೂರಿನ ಪ್ರಕಾರ, ಜೂನ್ 4ರಂದು ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ, ಅತಿಯಾದ ಜನಸಂದಣಿಯಿಂದಾಗಿ 11 ಮಂದಿ ಯುವ ಅಭಿಮಾನಿಗಳು ದುರ್ಮರಣ ಹೊಂದಿದ್ದು, ಈ ಅವ್ಯವಸ್ಥೆಗೆ ವಿರಾಟ್ ಕೊಹ್ಲಿ ನೇರವಾಗಿ ಹೊಣೆಗಾರರು ಎಂದು ಆರೋಪಿಸಲಾಗಿದೆ.

ವಿಜಯದ ಮರುದಿನವೇ ಸಮಾರಂಭ ಯಾಕೆ?

ಈ ದೂರಿನಲ್ಲಿ, ಐಪಿಎಲ್ ಎಂಬುದೊಂದು ಕ್ರೀಡೆಯ ತರಗತಿಯಲ್ಲ, ಅದು ಹಣವನ್ನೇ ಗುರಿಯಾಗಿಟ್ಟುಕೊಂಡಿರುವ ಖಾಸಗಿ ಜೂಜಾಟದ ಮಾದರಿ ಎಂದು ಆರೋಪಿಸಿದ್ದು, ಆ ಸಂದರ್ಭದಲ್ಲಿ ಸಾರ್ವಜನಿಕ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡದ ವಿರಾಟ್ ಕೊಹ್ಲಿ ಅವರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. 'ಅಹಮದಾಬಾದ್‌ನಲ್ಲಿ ಪಂದ್ಯದ ನಂತರದ very next day ವಿದೇಶ ಪ್ರಯಾಣಕ್ಕಾಗಿ ತಕ್ಷಣ ಸಮಾರಂಭ ಆಯೋಜಿಸಲು ಒತ್ತಡ ಹೇರಿದವರಲ್ಲಿ ಕೊಹ್ಲಿಯ ಪಾತ್ರವೂ ಪ್ರಮುಖ' ಎಂಬುದನ್ನು ದೂರಿನಲ್ಲಿ ವೆಂಕಟೇಶ್ ಉಲ್ಲೇಖಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಪ್ರಚೋದನೆಗೂ ಆರೋಪ

ಕೊಹ್ಲಿ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಮಾನಿಗಳನ್ನು ಸಮಾರಂಭಕ್ಕೆ ಬರುವಂತೆ ಪ್ರಚೋದನೆ ನೀಡಿದ್ದು, ಈ ಮೂಲಕ ಅವ್ಯವಸ್ಥೆ ಉಂಟಾಗಲು ಕಾರಣವಾದರೆಂದು ಹೇಳಿದ್ದಾರೆ. ಜನಸಂದಣಿ ನಿಯಂತ್ರಣ (Crowd Management) ವ್ಯವಸ್ಥೆ ಇಲ್ಲದದ್ದರಿಂದಲೇ ಈ ದುರಂತ ಸಂಭವಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರ್‌ಸಿಬಿ ವಿಜಯೋತ್ಸವದಿಂದ ಸಾರ್ವಜನಿಕ ಆರೋಗ್ಯದ ಮೇಲಾದ ಪರಿಣಾಮವನ್ನೂ ದೂರಿನಲ್ಲಿ ಪ್ರಸ್ತಾಪಿಸಲಾಗಿದೆ. "ಕೊರೋನಾ ಸೋಂಕು ಮತ್ತೆ ತಲೆದೂರುತ್ತಿರುವ ಸಂದರ್ಭದಲ್ಲಿಯೇ ಇಂತಹ ಸಮಾರಂಭವು ಸಾರ್ವಜನಿಕ ಆರೋಗ್ಯ ಕ್ರಮಗಳನ್ನೇ ವಿರೋಧಿಸುತ್ತದೆ" ಎಂದು ದೂರಿನಲ್ಲಿ ಹೇಳಲಾಗಿದೆ. IPC 336, 337, 304A, 268, 283, Karnataka Public Safety Measures Enforcement Act 2017, Endemic Diseases Act 1897 ಮುಂತಾದ ವಿವಿಧ ಕಾನೂನು ಸೆಕ್ಷನ್‌ಗಳ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ.

'ONE8' ರೆಸ್ಟೋರೆಂಟ್ ಮೇಲೆ ಕ್ರಮ ಕೈಗೊಳ್ಳಿ:

ವಿರಾಟ್ ಕೊಹ್ಲಿ ಸಹಮಾಲೀಕತ್ವದ ಬೆಂಗಳೂರು ಶಾಂತಿನಗರದಲ್ಲಿರುವ ‘ONE8’ ರೆಸ್ಟೋರೆಂಟ್ ಕೂಡ ಹಲವಾರು ನಿಯಮ ಉಲ್ಲಂಘನೆ ಮಾಡಿಕೊಂಡಿರುವ ಬಗ್ಗೆ ದೂರು ನೀಡಿದ್ದು, ಅಗ್ನಿಶಾಮಕ ಮುಂಜಾಗ್ರತಾ ಕ್ರಮಗಳಿಲ್ಲದ ರೆಸ್ಟೋರೆಂಟ್‌ನ್ನು ತಕ್ಷಣ ಮುಚ್ಚಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.

'ಅಭಿಮಾನಿಗಳ ಸಾವಿಗೆ ಕೊಹ್ಲಿಯ ನೈತಿಕ, ಕಾನೂನು ಹೊಣೆ'

ಅಭಿಮಾನಿಗಳನ್ನು ಪ್ರಚೋದಿಸಿ, ಸಭೆ ಆಯೋಜನೆ ಮಾಡಿ, ಬಳಿಕ ಅವರ ಸಾವಿಗೆ ಸ್ಪಷ್ಟವಾಗಿ ನೈತಿಕ ಹಾಗೂ ಕಾನೂನುಬದ್ಧ ಹೊಣೆಗಾರರಾಗಿರುವ ವಿರಾಟ್ ಕೊಹ್ಲಿಯ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕು' ಎಂಬುದೇ ವೆಂಕಟೇಶ್ ಅವರ ಮನವಿ. ಈ ಕುರಿತು ಪೊಲೀಸರು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಪರಿಶಿಷ್ಟ ಮಾಹಿತಿ:

  • ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
  • ದಿನಾಂಕ: 04/06/2025
  • ದುರ್ಘಟನೆಯ ಸ್ವರೂಪ: ಕಾಲ್ತುಳಿತ – 11 ಜನ ಮೃತರು
  • ಆರೋಪಿತರು: ವಿರಾಟ್ ಕೊಹ್ಲಿ, ಆರ್‌ಸಿಬಿ ಮಂಡಳಿ, ಇವೆಂಟ್ ಮ್ಯಾನೇಜ್‌ಮೆಂಟ್
  • ದೂರುದಾರ: ಹೆಚ್.ಎಂ. ವೆಂಕಟೇಶ್, ಹಾರೋಗೂಳಿಗೆ, ತೀರ್ಥಹಳ್ಳಿ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ