2024ರ ಮೊದಲ ಟೆಸ್ಟ್ ಫಿಫ್ಟಿ ಮೇಲೆ ಕೊಹ್ಲಿ ಕಣ್ಣು; ಅಪರೂಪದ ರೆಕಾರ್ಡ್ ಹೊಸ್ತಿಲಲ್ಲಿ ವಿರಾಟ್!

By Naveen Kodase  |  First Published Oct 15, 2024, 4:01 PM IST

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಅಪರೂಪದ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಬೆಂಗಳೂರು: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಅಕ್ಟೊಬರ್ 16ರಿಂದ ಭಾರತ ಹಾಗೂ ಕಿವೀಸ್ ತಂಡಗಳು ಮೊದಲ ಟೆಸ್ಟ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಆರ್‌ಸಿಬಿ ಮಾಜಿ ನಾಯಕ ಹಾಗೂ ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ತಮ್ಮ ಅಪರೂಪದ ಹೆಜ್ಜೆಗುರುತುಗಳನ್ನು ದಾಖಲಿಸಲು ಸಜ್ಜಾಗಿದ್ದಾರೆ.

ಇತ್ತೀಚಿಗಿನ ದಿನಗಳಲ್ಲಿ ವಿರಾಟ್ ಕೊಹ್ಲಿ, ಟೆಸ್ಟ್ ಕ್ರಿಕೆಟ್‌ನಲ್ಲಿ ನಿರೀಕ್ಷಿತ ರನ್ ಬಾರಿಸುತ್ತಿಲ್ಲ. ಮುಂಬರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳುವುದು ಭಾರತದ ಪಾಲಿಗೆ ಮಹತ್ವದ್ದೆನಿಸಿದೆ. ರೋಹಿತ್ ಶರ್ಮಾ ಈ ವರ್ಷದಲ್ಲಿ 15 ಟೆಸ್ಟ್ ಇನ್ನಿಂಗ್ಸ್‌ಗಳಿಂದ 2 ಶತಕ ಹಾಗೂ ಒಂದು ಅರ್ಧಶತಕ ಸಹಿತ 497 ರನ್ ಬಾರಿಸಿದ್ದಾರೆ. 

Latest Videos

undefined

ಎಮರ್ಜಿಂಗ್ ಏಷ್ಯಾಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ: ತಿಲಕ್‌ ವರ್ಮಾಗೆ ನಾಯಕ ಪಟ್ಟ

ಇನ್ನು ವಿರಾಟ್ ಕೊಹ್ಲಿ ಈ ವರ್ಷದಲ್ಲಿ ತಮಗೆ ಸಿಕ್ಕ ಉತ್ತಮ ಆರಂಭವನ್ನು ಅರ್ಧಶತಕವನ್ನಾಗಿ ಪರಿವರ್ತಿಸಲು ವಿಫಲವಾಗಿದ್ದಾರೆ. 35 ವರ್ಷದ ವಿರಾಟ್ ಕೊಹ್ಲಿ ಈ ವರ್ಷ ದಕ್ಷಿಣ ಆಫ್ರಿಕಾ ಎದುರು 46 ಹಾಗೂ ಬಾಂಗ್ಲಾದೇಶ ಎದುರು 47 ರನ್ ಬಾರಿಸಿದ್ದೇ ಈ ಬಾರಿಯ ಗರಿಷ್ಠ ಟೆಸ್ಟ್ ಸ್ಕೋರ್ ಎನಿಸಿಕೊಂಡಿದೆ. ಇದೀಗ ತನ್ನ ಎರಡನೇ ತವರು ಎನಿಸಿಕೊಂಡಿರುವ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಈ ವರ್ಷದ ಮೊದಲ ಅರ್ಧಶತಕ/ಶತಕ ಪೂರೈಸಲು ಎದುರು ನೋಡುತ್ತಿದ್ದಾರೆ.

ಈ ವರ್ಷ ವಿರಾಟ್ ಕೊಹ್ಲಿ ಆಡಿದ 6 ಟೆಸ್ಟ್‌ ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ 50+ ರನ್ ಬಾರಿಸಲು ಸಾಧ್ಯವಾಗಿಲ್ಲ. ಇನ್ನು ಇದೇ ವೇಳೆ ವಿರಾಟ್ ಕೊಹ್ಲಿ ಕೇವಲ 53 ರನ್ ಬಾರಿಸಿದರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ 9,000 ರನ್ ಕ್ಲಬ್‌ಗೆ ಸೇರ್ಪಡೆಗೊಳ್ಳಲಿದ್ದಾರೆ. 

ಕಿವೀಸ್ ಎದುರು ಒಂದೆರಡಲ್ಲ 8 ಕ್ಯಾಚ್ ಬಿಟ್ಟು ಭಾರತಕ್ಕೆ ಮುಳ್ಳಾದ ಪಾಕ್ ಮಹಿಳಾ ಕ್ರಿಕೆಟ್ ತಂಡ!

ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:

ರೋಹಿತ್ ಶರ್ಮಾ(ನಾಯಕ), ಜಸ್ಪ್ರೀತ್ ಬುಮ್ರಾ(ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್(ವಿಕೆಟ್ ಕೀಪರ್), ದೃವ್ ಜುರೆಲ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

ಭಾರತ ಎದುರಿನ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡ: 

ಟಾಮ್‌ ಲೇಥಮ್‌ (ನಾಯಕ), ಟಾಮ್‌ ಬ್ಲಂಡೆಲ್‌, ಮೈಕಲ್‌ ಬ್ರೇಸ್‌ವೆಲ್‌ (ಮೊದಲ ಟೆಸ್ಟ್‌ಗೆ ಮಾತ್ರ), ಮಾರ್ಕ್‌ ಚಾಪ್ಮನ್‌, ಡೆವೊನ್‌ ಕಾನ್‌ವೇ, ಮ್ಯಾಟ್‌ ಹೆನ್ರಿ, ಡ್ಯಾರೆಲ್‌ ಮಿಚೆಲ್‌, ವಿಲ್‌ ಓ’ ರೌರ್ಕೆ, ಅಜಾಜ್‌ ಪಟೇಲ್‌, ಗ್ಲೆನ್‌ ಫಿಲಿಪ್ಸ್‌, ರಚಿನ್‌ ರವೀಂದ್ರ, ಮಿಚೆಲ್‌ ಸ್ಯಾಂಟ್ನರ್‌, ಬೆನ್‌ ಸೀರ್ಸ್‌, ಇಶ್‌ ಸೋಧಿ (2, 3ನೇ ಟೆಸ್ಟ್‌ಗೆ), ಟಿಮ್‌ ಸೌಥಿ, ಕೇನ್‌ ವಿಲಿಯಮ್ಸನ್‌, ವಿಲ್‌ ಯಂಗ್‌.

click me!