ಭಾರತ ಆಸ್ಟ್ರೇಲಿಯಾ ಏಕದಿನ ನಡುವೆ ಆಸ್ಕರ್ ಗೆದ್ದ RRR ನಾಟು ನಾಟು ಹಾಡಿಗೆ ಕೊಹ್ಲಿ ಡ್ಯಾನ್ಸ್!

By Suvarna News  |  First Published Mar 17, 2023, 7:09 PM IST

ದೇಶ ವಿದೇಶದಲ್ಲಿ ಇದೀಗ ಆಸ್ಕರ್ ಗೆದ್ದ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು ಮೊಳಗುತ್ತಿದೆ. ರಾಮ್ ಚರಣ್ ಹಾಗೂ ಜ್ಯೂ.ಎನ್‌ಟಿಆರ್ ಡ್ಯಾನ್ಸ್ ಭಾರಿ ಸದ್ದು ಮಾಡುತ್ತಿದೆ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದ ನಡುವೆ ಮೈದಾನದಲ್ಲಿ ವಿರಾಟ್ ಕೊಹ್ಲಿ ನಾಟು ನಾಟು ಹಾಡಿನ ಸಿಗ್ನೆಚರ್ ಸ್ಟೆಪ್ಸ್ ಹಾಕಿದ್ದಾರೆ.


ಮುಂಬೈ(ಮಾ.17): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಬೌಲರ್‌ಗಳ ಅಬ್ಬರವೇ ಹೆಚ್ಚಾಗಿದೆ. ಆಸ್ಟ್ರೇಲಿಯಾ ಸುಲಭ ಟಾರ್ಗೆಟ್ ನೀಡಿದರೂ, ಇತ್ತ ಟೀಂ ಇಂಡಿಯಾ ಕೂಡ ಪ್ರಮುಖ ಬ್ಯಾಟ್ಸ್‌ಮನ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇದರ ನಡುವೆ ವಿರಾಟ್ ಕೊಹ್ಲಿ ಆಸ್ಕರ್ ಗೆದ್ದ  RRR ಚಿತ್ರದ ನಾಟು ನಾಟು ಸಿಗ್ನೇಚರ್ ಸ್ಟೆಪ್ಸ್ ಹಾಕಿ ಎಲ್ಲರ ಗಮನಸೆಳೆದಿದ್ದಾರೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದ ನಡುವೆ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ,  ನಟ ರಾಮಚರಣ್ ಹಾಗೂ ಜ್ಯೂನಿಯರ್ ಎನ್‌ಟಿಆರ್ ನಾಟು ನಾಟು ಚಿತ್ರದಲ್ಲಿ ಹಾಕಿರುವ ಸಿಗ್ನೇಚರ್ ಸ್ಟೆಪ್ಸ್ ಹಾಕಿ ಗಮನಸೆಳೆದಿದ್ದಾರೆ.

ಫೀಲ್ಡಿಂಗ್‌ನಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ದಿಡೀರ್ ನಾಟು ನಾಟು ಸ್ಟೆಪ್ಸ್ ಹಾಕಿದ್ದಾರೆ. ಈ ವೇಳೆ ಕ್ರೀಡಾಂಗಣದಲ್ಲಿ ನಾಟು ನಾಟು ಹಾಡು ಹಾಕಿಲ್ಲ. ತಾವೇ ನಾಟು ನಾಟು ಹಾಡು ಹೇಳುತ್ತಾ ಕೊಹ್ಲಿ ಹೆಜ್ಜೆ ಹಾಕಿದ್ದಾರೆ. ಇದೀಗ ಕೊಹ್ಲಿ ಡ್ಯಾನ್ಸ್ ಭಾರಿ ವೈರಲ್ ಆಗಿದೆ. ಇಷ್ಟೇ ಅಲ್ಲ ಅಭಿಮಾನಿಗಳು ಕೊಹ್ಲಿ ಡ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.

Tap to resize

Latest Videos

WATCH: ಕ್ವಿಕ್‌ ಸ್ಟೈಲ್‌ ಜೊತೆ ಕೊಹ್ಲಿ ಕ್ವಿಕ್‌ ಡಾನ್ಸ್‌ ನೋಡಿದ್ರಾ?

ವಿರಾಟ್ ಕೊಹ್ಲಿಯ ನಾಟು ನಾಟು ಡ್ಯಾನ್ಸ್ ಸ್ಟೆಪ್ಸ್ ವಿಡಿಯೋವನ್ನು ಆರ್‌ಆರ್‌ಆರ್ ಮೂವಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಲಕ್ಷಕ್ಕೂ ಅಧಿಕ ಮೆಚ್ಚುಗೆ ವ್ಯಕ್ತವಾಗಿದೆ. ಆಸ್ಟ್ರೇಲಿಯಾ ವಿರುದ್ದದ ಸುಲಭ ರನ್ ಚೇಸ್‌ನಲ್ಲಿ ವಿರಾಟ್ ಕೊಹ್ಲಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಿಲ್ಲ. ಕೇವಲ 4 ರನ್ ಸಿಡಿಸಿ ಔಟಾದರು. 9 ಎಸೆತ ಎದುರಿಸಿದ ಕೊಹ್ಲಿ 4 ರನ್ ಸಿಡಿಸಿ ನಿರ್ಗಮಿಸಿದರು. 189 ರನ್ ಟಾರ್ಗೆಟ್ ಪೆಡೆದಿರುವ ಭಾರತ ಪ್ರಮುಖ ಬ್ಯಾಟ್ಸ್‌ಮನ್ ಕಳೆದುಕೊಂಡಿದೆ. ಇದರಲ್ಲಿ ಕೊಹ್ಲಿ ಬ್ಯಾಟಿಂಗ್‌ನಲ್ಲಿ ನಿರಾಸೆ ಮೂಡಿಸಿದ್ದರು. ಆದರೆ ಕೊಹ್ಲಿ ಡ್ಯಾನ್ಸ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

 

Natu natu from King kohli pic.twitter.com/EmxARmt4iL

— ⚡FLASH⚡ (@bhargavreddy58)

 

ಇತ್ತೀಚಗೆ ವಿರಾಟ್ ಕೊಹ್ಲಿ ಹಾಗೂ ಆಲ್ರೌಂಡ್ ರವೀಂದ್ರ ಜಡೇಜಾ ಇದೇ ರೀತಿ ಸ್ಟೆಪ್ಸ್ ಹಾಕಿ ಮಿಂಚಿದ್ದರು. ಶಾರೂಖ್ ಖಾನ್ ಅಭಿಯನದ ಪಠಾಣ್ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ವಿಡಿಯೋ ಬಾರಿ ವೈರಲ್ ಆಗಿತ್ತು. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ವೇಳೆ ಕೊಹ್ಲಿ ಜಡ್ಡು ಡ್ಯಾನ್ಸ್ ಎಲ್ಲರ ಗಮನಸೆಳೆದಿತ್ತು.

ಏಕದಿನ ಪಂದ್ಯದಲ್ಲಿ ಭಾರತ ಬ್ಯಾಟಿಂಗ್‌ನಲ್ಲಿ ಹಿನ್ನಡೆ ಅನುಭವಿಸುವ ಮೂಲಕ ಆತಂಕ ಎದುರಿಸುತ್ತಿದೆ. ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಬಳಿಕ ಉತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಆಸ್ಟ್ರೇಲಿಯಾ ತಂಡವನ್ನು 188 ರನ್‌ಗೆ ಕಟ್ಟಿ ಹಾಕಿತ್ತು. ಮಿಚೆಲ್ ಮಾರ್ಶ್ ದಿಟ್ಟ ಹೋರಾಟ ನಡೆಸಿ ಆಸೀಸ್ ತಂಡವನ್ನು ಅಲ್ಪ ಮೊತ್ತದಿಂದ ಪಾರು ಮಾಡಿದರು. ಮಿಚೆಲ್ ಮಾರ್ಶ್ 81 ರನ್ ಸಿಡಿಸಿ ಔಟಾದರು. 

ವಿರಾಟ್‌ ಕೊಹ್ಲಿ 75ನೇ ಶತಕ, 'ಮಹಾಕಾಲ ಶಿವ' ಯಾರನ್ನೂ ಕೈಬಿಡೋದಿಲ್ಲ ಎಂದ ಫ್ಯಾನ್ಸ್‌!

ಸ್ಟೀವನ್ ಸ್ಮಿತ್ 22 ರನ್ ಹಾಗೂ ಜೋಶ್ ಇಂಗ್ಲಿಸ್ 26 ರನ್ ಕಾಣಿಕೆ ನೀಡಿದರು. ಇನ್ನುಳಿದ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ರನ್ ಹರಿದು ಬರಲಿಲ್ಲ. ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ ತಲಾ 3 ವಿಕೆಟ್ ಕಬಲಿಸಿದರೆ, ರವೀಂದ್ರ ಜಡೇಜಾ 2 ವಿಕೆಟ್ ಕಳಬಳಿಸಿದರು. ಆಸ್ಟ್ರೇಲಿಯಾ 35.4 ಓವರ್‌ಗಳಲ್ಲಿ 188 ರನ್‌ಗೆ ಆಲೌಟ್ ಆಯಿತು.

click me!