ಒಂದು ವೇಳೆ ನೀವು ಸೆಲೆಕ್ಟರ್ ಆದ್ರೆ ಗಿಲ್ & ಧವನ್ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡ್ತೀರಾ?

Published : Mar 26, 2023, 02:15 PM IST
ಒಂದು ವೇಳೆ ನೀವು ಸೆಲೆಕ್ಟರ್ ಆದ್ರೆ ಗಿಲ್ & ಧವನ್ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡ್ತೀರಾ?

ಸಾರಾಂಶ

* ಟೀಂ ಇಂಡಿಯಾ ಆರಂಭಿಕನಾಗಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿರುವ ಶುಭ್‌ಮನ್ ಗಿಲ್‌ * ಶಿಖರ್ ಧವನ್‌ ತಮ್ಮ ಸ್ಥಾನದ ಬಗ್ಗೆ ಅಚ್ಚರಿ ಮಾತು * ಟೀಂ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿರುವ ಧವನ್

ನವದೆಹಲಿ(ಮಾ.28): ಭಾರತ ಕ್ರಿಕೆಟ್‌ ತಂಡ ಕಂಡ ಅದ್ಭುತ ಎಡಗೈ ಆರಂಭಿಕ ಬ್ಯಾಟರ್ ಎನಿಸಿಕೊಂಡಿರು ಶಿಖರ್ ಧವನ್, ಇದೀಗ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿದ್ದಾರೆ. ವಯಸ್ಸು ಹಾಗೂ ಫಾರ್ಮ್‌ ಸಮಸ್ಯೆಯಿಂದಾಗಿ ಸದ್ಯ ಭಾರತ ಕ್ರಿಕೆಟ್‌ ತಂಡದಿಂದ ಹೊರಗುಳಿದಿರುವ ಅನುಭವಿ ಬ್ಯಾಟರ್ ಶಿಖರ್ ಧವನ್, ಇದೀಗ ತಾವು ಆಯ್ಕೆ ಸಮಿತಿಯಲ್ಲಿದ್ದಿದ್ದರೇ, ಗಿಲ್ ಹಾಗೂ ತಮ್ಮ ನಡುವೆ ಸ್ಪರ್ಧೆ ಏರ್ಪಟ್ಟಿದ್ದರೇ ಯಾರನ್ನು ಆಯ್ಕೆ ಮಾಡುತ್ತಿದ್ದೆ ಎನ್ನುವ ಪ್ರಶ್ನೆಗೆ ಅಚ್ಚರಿಯ ಉತ್ತರ ನೀಡಿ ಗಮನ ಸೆಳೆದಿದ್ದಾರೆ.

Sports Tak ವಾಹಿನಿ ಜತೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಶಿಖರ್ ಧವನ್‌ಗೆ ಒಂದು ವೇಳೆ ನೀವೇ ತಂಡದ ಸೆಲೆಕ್ಟರ್ ಅಥವಾ ಕ್ಯಾಪ್ಟನ್‌ ಆಗಿದ್ದರೇ, ಯಾರನ್ನು ಆರಂಭಿಕರನ್ನಾಗಿ ಆಯ್ಕೆ ಮಾಡುತ್ತಿದ್ರಿ ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಧವನ್. " ಶುಭ್‌ಮನ್ ಗಿಲ್ ಅವರು ಈಗಾಗಲೇ ಎರಡು ಮಾದರಿಯ ಕ್ರಿಕೆಟ್‌ನಲ್ಲಿ ಚೆನ್ನಾಗಿಯೇ ಆಡುತ್ತಿದ್ದಾರೆ. ಗಿಲ್ ಭಾರತ ಟೆಸ್ಟ್ ಹಾಗೂ ಟಿ20 ತಂಡದಲ್ಲಿ ಆರಂಭಿಕನಾಗಿ ಇನಿಂಗ್ಸ್‌ ಓಪನ್ ಮಾಡುತ್ತಿದ್ದಾರೆ. ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಪಂದ್ಯಗಳನ್ನಾಡಿದ ಅನುಭವವಿರುವವನಾಗಿ ಹೇಳುತ್ತೇನೆ, ಒಂದು ವೇಳೆ ನಾನೇ ಸೆಲೆಕ್ಟರ್ ಆಗಿದ್ದರೆ, ಶುಭ್‌ಮನ್ ಗಿಲ್‌ಗೆ ಹೆಚ್ಚಿನ ಅವಕಾಶ ನೀಡುತ್ತೇನೆ" ಎಂದು ಅವರು ಹೇಳಿದ್ದಾರೆ.

ಇನ್ನು ಭಾರತ ಕ್ರಿಕೆಟ್‌ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ನಿಟ್ಟಿನಲ್ಲಿ ತಾವು ಸದಾ ಪ್ರಯತ್ನ ಪಡುತ್ತಿರುತ್ತೇನೆ. ಒಂದುವೇಳೆ ಅಂತಹ ಮ್ಯಾಜಿಕ್ ಏನಾದರೂ ಸಂಭವಿಸಿದರೆ, ಭಾರತ ತಂಡ ಕೂಡಿಕೊಳ್ಳಲು ರೆಡಿ ಇರಲಿದ್ದೇನೆ ಎಂದು ತಿಳಿಸಿದ್ದಾರೆ. ಒಂದು ವೇಳೆ ಅಂತಹ ಅವಕಾಶ ಬರದಿದ್ದರೂ ನಾನೇನು ಬೇಸರ ಪಡುವುದಿಲ್ಲ. ನನ್ನ ಕೈಯಿಂದ ಏನೆಲ್ಲಾ ಮಾಡಲು ಸಾಧ್ಯವೋ ಅದನ್ನು ಮಾಡುತ್ತೇನೆ ಎಂದು ಶಿಖರ್ ಧವನ್ ಹೇಳಿದ್ದಾರೆ.

ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್‌ ಭೇಟಿಮಾಡಿದ ಭಜ್ಜಿ, ರೈನಾ, ಶ್ರೀಶಾಂತ್..!

ಇನ್ನೊಂದೆಡೆ ಪಂಜಾಬ್ ಮೂಲದ ಶುಭ್‌ಮನ್‌ ಗಿಲ್‌, ಸದ್ಯ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅದ್ಭುತ ಲಯವನ್ನು ಹೊಂದಿದ್ದಾರೆ. 2023ರಲ್ಲಿ ಶುಭ್‌ಮನ್ ಗಿಲ್‌ ಕೇವಲ 9 ಏಕದಿನ ಪಂದ್ಯಗಳನ್ನಾಡಿ 78ರ ಬ್ಯಾಟಿಂಗ್ ಸರಾಸರಿಯಲ್ಲಿ 3 ಶತಕ ಹಾಗೂ ಒಂದು ಅರ್ಧಶತಕ ಸಹಿತ 624 ರನ್ ಸಿಡಿಸಿ ಮಿಂಚಿದ್ದಾರೆ.

ಮುಂಬರುವ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ಭಾರತದಲ್ಲಿಯೇ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಜರುಗಲಿದ್ದು, ಟೀಂ ಇಂಡಿಯಾ, ಶತಾಯಗತಾಯ ಒಂದು ದಶಕದ ಬಳಿಕ ಐಸಿಸಿ ಟ್ರೋಫಿ ಜಯಿಸಲು ಎದುರು ನೋಡುತ್ತಿದೆ. ಭಾರತ ಕ್ರಿಕೆಟ್ ತಂಡವು 2013ರಲ್ಲಿ ಕೊನೆಯ ಬಾರಿಸಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು.ಇದಾದ ಬಳಿಕ ಹಲವು ಐಸಿಸಿ ಟೂರ್ನಿಗಳಲ್ಲಿ ನಾಕೌಟ್ ಹಂತದಲ್ಲಿ ಸೋತು ಮುಖಭಂಗ ಅನುಭವಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್