
ಬೆಂಗಳೂರು[ಅ.22]: ವಿಜಯ್ ಹಜಾರೆ ಟೂರ್ನಿ ಅಂತಿಮ ಘಟ್ಟ ತಲುಪಿದ್ದು, ಈ ಪಂದ್ಯಾವಳಿ ಮುಕ್ತಾಯಗೊಳ್ಳುತ್ತಿದ್ದಂತೆ 2019-20ರ ಸಾಲಿನ ರಣಜಿ ಟ್ರೋಫಿ ಆರಂಭಗೊಳ್ಳಲಿದೆ. ಸೋಮವಾರ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿತು.
ವಿಜಯ್ ಹಜಾರೆ ಸೆಮೀಸ್: ಕರ್ನಾಟಕ-ಛತ್ತೀಸ್‌ಗಢ ಫೈಟ್
ಕರ್ನಾಟಕ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ತಂಡಕ್ಕೆ ಕಠಿಣ ಸವಾಲು ಎದುರಾಗಲಿದೆ. ಡಿ.9ರಿಂದ ತಮಿಳುನಾಡು ವಿರುದ್ಧ ಕರ್ನಾಟಕ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಲೀಗ್ ಹಂತದಲ್ಲಿ ತವರಿನಲ್ಲಿ 4, ತವರಿನಾಚೆ 4 ಪಂದ್ಯಗಳನ್ನು ಆಡಲಿದೆ. ಕಳೆದ ಋುತುವಿನಲ್ಲಿ ಕರ್ನಾಟಕ, ಸೆಮಿಫೈನಲ್ನಲ್ಲಿ ಸೌರಾಷ್ಟ್ರ ವಿರುದ್ಧ ಸೋಲುಂಡಿತ್ತು.
10 ಕೋಟಿ ಜೇಬಿಗಿಳಿಸಿ ಹಾಯಾಗಿ ನಿದ್ದೆ; ಮತ್ತೆ ಟ್ರೋಲ್ ಆದ ಕೋಚ್ ಶಾಸ್ತ್ರಿ!
ಕರ್ನಾಟಕ ತಂಡವು ತವರಿನಾಚೆ ತಮಿಳುನಾಡು, ಮುಂಬೈ, ರಾಜ್’ಕೋಟ್ ಹಾಗೂ ವಡೋದರದಲ್ಲಿ ನಾಲ್ಕು ಪಂದ್ಯಗಳನ್ನಾಡಿದರೆ, ತವರಿನಲ್ಲಿ ಉತ್ತರಪ್ರದೇಶ, ಹಿಮಾಚಲ ಪ್ರದೇಶ, ರೈಲ್ವೇಸ್ ಹಾಗೂ ಮಧ್ಯ ಪ್ರದೇಶ ವಿರುದ್ಧ ಸೆಣಸಲಿದೆ.
ಕರ್ನಾಟಕದ ರಣಜಿ ವೇಳಾಪಟ್ಟಿ
ದಿನಾಂಕ - ಎದುರಾಳಿ- ಸ್ಥಳ
ಡಿ.9-12- ತಮಿಳುನಾಡು- ಚೆನ್ನೈ
ಡಿ.17-20- ಉತ್ತರ ಪ್ರದೇಶ- ತವರಿನ ಪಂದ್ಯ
ಡಿ.25-28 ಹಿಮಾಚಲ ಪ್ರದೇಶ- ತವರಿನ ಪಂದ್ಯ
ಜ.3-6- ಮುಂಬೈ- ಮುಂಬೈ
ಜ.11-14- ಸೌರಾಷ್ಟ್ರ- ರಾಜ್‌ಕೋಟ್
ಜ.27-30- ರೈಲ್ವೇಸ್- ತವರಿನ ಪಂದ್ಯ
ಫೆ.4-7 ಮಧ್ಯಪ್ರದೇಶ- ತವರಿನ ಪಂದ್ಯ
ಫೆ.12-15 ಬರೋಡಾ- ವಡೋದರ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.