ಕಿವೀಸ್ ಸರಣಿ ಗೆದ್ದು ಧೋನಿ ಸೇರಿದಂತೆ ದಿಗ್ಗಜ ನಾಯಕರನ್ನೇ ಹಿಂದಿಕ್ಕಿದ ಕೊಹ್ಲಿ!

Suvarna News   | Asianet News
Published : Feb 02, 2020, 08:38 PM IST
ಕಿವೀಸ್ ಸರಣಿ ಗೆದ್ದು ಧೋನಿ ಸೇರಿದಂತೆ ದಿಗ್ಗಜ ನಾಯಕರನ್ನೇ ಹಿಂದಿಕ್ಕಿದ  ಕೊಹ್ಲಿ!

ಸಾರಾಂಶ

ನ್ಯೂಜಿಲೆಂಡ್ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ ಟಿ20 ಸರಣಿಯನ್ನು 5-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಇಷ್ಟೇ ಅಲ್ಲ ಎಂ.ಎಸ್.ಧೋನಿ ಸೇರಿದಂತೆ ದಿಗ್ಗಜ ನಾಯಕರನ್ನೇ ಹಿಂದಿಕ್ಕಿದ್ದಾರೆ. ನಾಯಕನಾಗಿ ಕೊಹ್ಲಿ ಸಾಧನೆ ವಿವರ ಇಲ್ಲಿದೆ.

ಮೌಂಟ್‌ ಮಾಂಗನ್ಯುಯಿ(ಫೆ.02): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 5 ಟಿ20 ಪಂದ್ಯ ಆತ್ಯಂತ ರೋಚಕವಾಗಿತ್ತು. ಇದರಲ್ಲಿ 3 ಮತ್ತು 4ನೇ ಪಂದ್ಯ ಸೂಪರ್ ಓವರ್‌ನಲ್ಲಿ ಭಾರತ ಗೆಲುವು ಸಾಧಿಸಿತ್ತು. ಅತೀ ರೋಚಕ ಸರಣಿಯನ್ನು ಟೀಂ ಇಂಡಿಯಾಾ 5-0 ಅಂತರದಲ್ಲಿ ಗೆದ್ದುಕೊಂಡಿದೆ. ಈ ಮೂಲಕ ಕೊಹ್ಲಿ ಗರಿಷ್ಠ ದ್ವಿಪಕ್ಷೀಯ ಟಿ20 ಸರಣಿ ಗೆದ್ದ ನಾಯಕ ಅನ್ನೋ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ: ಸರಣಿ ಕ್ಲೀನ್ ಸ್ವೀಪ್ ಮಾಡಿ ಸೇಡು ತೀರಿಸಿಕೊಂಡ ಟೀಂ ಇಂಡಿಯಾ

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ 10 ದ್ವಿಪಕ್ಷೀಯ ಟಿ20 ಸರಣಿ ಗೆದ್ದುಕೊಂಡಿದೆ. ಈ ಮೂಲಕ ಸೌತ್ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್ ದಾಖಲೆಯನ್ನು ಮುರಿದಿದ್ದಾರೆ. 

ಗರಿಷ್ಠ ದ್ವಿಪಕ್ಷೀಯ ಟಿ20 ಸರಣಿ ಗೆದ್ದ ನಾಯಕ
ವಿರಾಟ್ ಕೊಹ್ಲಿ 10
ಫಾಫ್ ಡುಪ್ಲೆಸಿಸ್ 9
ಇಯಾನ್ ಮಾರ್ಗನ್ 7
ಡರೆನ್ ಸ್ಯಾಮಿ 6
ಎಂ.ಎಸ್.ಧೋನಿ 5

ಇದನ್ನೂ ಓದಿ: ಸರಣಿ ಸೋಲಿನ ನೋವನ್ನು ಲಂಕಾ ಜತೆ ಹಂಚಿಕೊಂಡ ಕಿವೀಸ್

ಭಾರತ-ನ್ಯೂಜಿಲೆಂಡ್ ಟಿ20 ಸರಣಿ ಫಲಿತಾಂಶ
1ನೇ ಟಿ20 = ಭಾರತಕ್ಕೆ 6 ವಿಕೆಟ್ ಗೆಲುವು
2ನೇ ಟಿ20 = ಭಾರತಕ್ಕೆ 7 ವಿಕೆಟ್ ಗೆಲುವು
3ನೇ ಟಿ20 =ಪಂದ್ಯ ಟೈ(ಭಾರತಕ್ಕೆ ಸೂಪರ್ ಓವರ್ ಗೆಲುವು)
4ನೇ ಟಿ20 =ಪಂದ್ಯ ಟೈ(ಭಾರತಕ್ಕೆ ಸೂಪರ್ ಓವರ್ ಗೆಲುವು)
5ನೇ ಟಿ20 = ಭಾರತಕ್ಕೆ 7 ರನ್ ಗೆಲುವು

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ