‘ಮೆಸ್ಸಿ, ರೊನಾಲ್ಡೋ, ಬೆಕ್‌ಹ್ಯಾಮ್, ಹ್ಯಾರಿ ಕೇನ್ ಸೇರಿ ಎಲ್ಲರೂ ತಮ್ಮ ನೆಚ್ಚಿನ ತಂಡಗಳನ್ನು ತೊರೆದಿದ್ದಾರೆ. ವಿರಾಟ್ ಆರ್‌ಸಿಬಿಯನ್ನ ಉನ್ನತ ಮಟ್ಟಕ್ಕೇರಿಸಿದ್ದಾರೆ. ಅವರೂ ಅಭೂತಪೂರ್ವ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ನಿವೃತ್ತಿಗೂ ಮುನ್ನ ಒಮ್ಮೆಯಾದರೂ ಕೊಹ್ಲಿ ಕಪ್ ಎತ್ತಿಹಿಡಿಯಲು ಅರ್ಹರು. ಹೀಗಾಗಿ ಕೊಹ್ಲಿ ಆರ್‌ಸಿಬಿ ತೊರೆಯಲಿ’ ಎಂದು ಹೇಳಿದ್ದಾರೆ.
ನವದೆಹಲಿ: ವಿರಾಟ್ ಕೊಹ್ಲಿ ಐಪಿಎಲ್ ಟ್ರೋಫಿ ಗೆಲ್ಲಬೇಕಿದ್ದರೆ ಆರ್‌ಸಿಬಿ ತಂಡ ಬಿಡಬೇಕು ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್‌ಸನ್ ಹೇಳಿದ್ದಾರೆ. ಈ ಬಗ್ಗೆ ಸ್ಟಾರ್ ಸ್ಪೋರ್ಟ್ ಸಂದರ್ಶನದಲ್ಲಿ ಮಾತನಾಡಿರುವ ಅವರು, ದಿಗ್ಗಜ ಫುಟ್ಬಾಲ್ ಆಟಗಾರರನ್ನು ಉಲ್ಲೇಖಿಸಿ ಕೊಹ್ಲಿಗೆ ಸಲಹೆ ನೀಡಿದರು.
‘ಮೆಸ್ಸಿ, ರೊನಾಲ್ಡೋ, ಬೆಕ್‌ಹ್ಯಾಮ್, ಹ್ಯಾರಿ ಕೇನ್ ಸೇರಿ ಎಲ್ಲರೂ ತಮ್ಮ ನೆಚ್ಚಿನ ತಂಡಗಳನ್ನು ತೊರೆದಿದ್ದಾರೆ. ವಿರಾಟ್ ಆರ್‌ಸಿಬಿಯನ್ನ ಉನ್ನತ ಮಟ್ಟಕ್ಕೇರಿಸಿದ್ದಾರೆ. ಅವರೂ ಅಭೂತಪೂರ್ವ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ನಿವೃತ್ತಿಗೂ ಮುನ್ನ ಒಮ್ಮೆಯಾದರೂ ಕೊಹ್ಲಿ ಕಪ್ ಎತ್ತಿಹಿಡಿಯಲು ಅರ್ಹರು. ಹೀಗಾಗಿ ಕೊಹ್ಲಿ ಆರ್‌ಸಿಬಿ ತೊರೆಯಲಿ’ ಎಂದು ಹೇಳಿದ್ದಾರೆ.
undefined
ಕೊಹ್ಲಿ 2008ರ ಚೊಚ್ಚಲ ಆವೃತ್ತಿಯಿಂದಲೂ ಆರ್‌ಸಿಬಿಯನ್ನು ಪ್ರತಿನಿಧಿಸುತ್ತಿದ್ದಾರೆ. ತಂಡ 3 ಬಾರಿ ಫೈನಲ್‌ಗೇರಿದ್ದರೂ ರನ್ನರ್-ಅಪ್ ಸ್ಥಾನಿಯಾಗಿತ್ತು. ವಿರಾಟ್ ಈ ವರೆಗೂ ಆರ್‌ಸಿಬಿ ಪರ 252 ಪಂದ್ಯಗಳನ್ನು ಆಡಿದ್ದಾರೆ. ಅವರು ಐಪಿಎಲ್ ಇತಿಹಾಸದಲ್ಲೇ 8000 ರನ್ ಪೂರ್ಣಗೊಳಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೋಚ್ ಹುದ್ದೆಗೆ ಆಸ್ಟ್ರೇಲಿಯಾದವರನ್ನು ಸಂಪರ್ಕಿಸಿಲ್ಲ: ಜಯ್ ಶಾ ಸ್ಪಷ್ಟನೆ
ಬುಧವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 29 ರನ್ ಗಳಿಸಿದಾಗ ಕೊಹ್ಲಿ ಈ ಮಹತ್ವದ ಮೈಲುಗಲ್ಲು ತಲುಪಿದರು. ಪಂದ್ಯದಲ್ಲಿ 24 ಎಸೆತಗಳಲ್ಲಿ 33 ರನ್ ಸಿಡಿಸಿ ಔಟಾದ ಕೊಹ್ಲಿ, ಈ ಬಾರಿ ಐಪಿಎಲ್‌ನ ರನ್ ಗಳಿಕೆಯನ್ನು 741ಕ್ಕೆ ಹೆಚ್ಚಿಸಿದರು. ಒಟ್ಟಾರೆ ಐಪಿಎಲ್‌ನಲ್ಲಿ ಅವರ ರನ್ ಸದ್ಯ 8004. ವಿರಾಟ್ 38.66ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಅವರ ಸ್ಟ್ರೈಕ್‌ರೇಟ್ 131.97. ಅವರು ಐಪಿಎಲ್‌ನಲ್ಲಿ 8 ಶತಕ, 55 ಅರ್ಧಶತಕ ಸಿಡಿಸಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಕಾಮೆಂಟ್ರಿ ಮಾಡಲಿರುವ ದಿನೇಶ್ ಕಾರ್ತಿಕ್
ದುಬೈ: ಇತ್ತೀಚೆಗೆ ಐಪಿಎಲ್‌ಗೆ ವಿದಾಯ ಘೋಷಿಸಿರುವ ದಿನೇಶ್ ಕಾರ್ತಿಕ್ ಮತ್ತೆ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರು ಟಿ20 ವಿಶ್ವಕಪ್‌ನ ಕಾಮೆಂಟ್ರಿ ಪ್ಯಾನೆಲ್‌ನಲ್ಲಿ ರವಿ ಶಾಸ್ತ್ರಿ, ಸುನಿಲ್ ಗವಾಸ್ಕರ್ ಸೇರಿದಂತೆ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ತಜ್ಞರ ಜೊತೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಕಾರ್ತಿಕ್ 2021ರಲ್ಲಿ ಭಾರತ-ಇಂಗ್ಲೆಂಡ್ ಟಿ20 ಸರಣಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸೇರಿದಂತೆ ಕೆಲ ಪಂದ್ಯಗಳಿಗೆ ಕಾಮೆಂಟ್ರಿ ಮಾಡಿದ್ದರು. ಬಳಿಕ 2022ರ ಟಿ20 ವಿಶ್ವಕಪ್‌ನಲ್ಲಿ ಭಾರತ ಪರ ಆಡಿರುವ ಅವರು, ಕಳೆದೆರಡು ವರ್ಷಗಳಲ್ಲಿ ಐಪಿಎಲ್‌ನ ಆರ್‌ಸಿಬಿ ತಂಡಗಳನ್ನು ಪ್ರತಿನಿಧಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ಹೊರದಬ್ಬಿ ಸನ್‌ರೈಸರ್ಸ್ ಹೈದರಾಬಾದ್ ಫೈನಲ್‌ಗೆ
ಇನ್ನು, ವೀಕ್ಷಕ ವಿವರಣೆ ಪಟ್ಟಿಯಲ್ಲಿ ಹರ್ಷ ಬೋಗ್ಲೆ, ಸ್ಟೀವ್ ಸ್ಮಿತ್, ನಾಸರ್ ಹುಸೈನ್, ರಿಕಿ ಪಾಂಟಿಂಗ್, ಇಯಾನ್ ಸ್ಮಿತ್, ಡೇಲ್ ಸ್ಟೇಯ್ನ್, ಆ್ಯರೊನ್ ಫಿಂಚ್, ಕಾರ್ಲೊಸ್ ಬ್ರಾಥ್‌ವೇಟ್, ಸ್ಯಾಮುಯೆಲ್ ಬದ್ರೀ, ಮ್ಯಾಥ್ಯೂ ಹೇಡನ್, ರಮೀಜ್ ರಾಜಾ, ಇಯಾನ್ ಮೊರ್ಗನ್, ವಾಸಿಂ ಅಕ್ರಂ ಕೂಡಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವಿಶ್ವಕಪ್ ಜೂ.1ರಂದು ಆರಂಭಗೊಳ್ಳಲಿದ್ದು, ವೆಸ್ಟ್‌ಇಂಡೀಸ್ ಹಾಗೂ ಅಮೆರಿಕ ಆತಿಥ್ಯ ವಹಿಸಲಿವೆ.