ಕಳೆದ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಅದ್ಭುತ ಪ್ರದರ್ಶನ ನೀಡಿತ್ತಾದರೂ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ವಿರೋಚಿತ ಸೋಲು ಅನುಭವಿಸಿತ್ತು. ಈ ಕಾರಣಕ್ಕಾಗಿ ಈ ಬಾರಿಯ ಟಿ20 ತಂಡದಲ್ಲಿ ಹಲವು ಯುವ ಹಾಗೂ ಅನುಭವಿ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.
ಕರಾಚಿ: ಮುಂಬರುವ ಮಹತ್ವದ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ತಂಡ ಪ್ರಕಟಿಸಲಾಗಿದೆ. ಶತಾಯಗತಾಯ ಈ ಬಾರಿ ಟಿ20 ವಿಶ್ವಕಪ್ ಗೆಲ್ಲಲು ಮಾಸ್ಟರ್ ಪ್ಲಾನ್ ಹಾಕಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ತಂಡವು ಇದೀಗ ಎಡಗೈ ಮಾರಕ ವೇಗಿಗೆ ತಂಡದಲ್ಲಿ ಮಣೆ ಹಾಕಿದೆ. ಇತ್ತೀಚೆಗಷ್ಟೇ ನಿವೃತ್ತಿ ಹಿಂಪಡೆದು ರಾಷ್ಟ್ರೀಯ ತಂಡಕ್ಕೆ ಮರಳಿದ್ದ ವೇಗಿ ಮೊಹಮದ್ ಅಮೀರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಹೌದು, ಕಳೆದ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಅದ್ಭುತ ಪ್ರದರ್ಶನ ನೀಡಿತ್ತಾದರೂ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ವಿರೋಚಿತ ಸೋಲು ಅನುಭವಿಸಿತ್ತು. ಈ ಕಾರಣಕ್ಕಾಗಿ ಈ ಬಾರಿಯ ಟಿ20 ತಂಡದಲ್ಲಿ ಹಲವು ಯುವ ಹಾಗೂ ಅನುಭವಿ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಈ ಕಾರಣಕ್ಕಾಗಿಯೇ ಎಡಗೈ ವೇಗಿ ಅಮೀರ್‌ಗೆ ಪಾಕ್ ತಂಡದಲ್ಲಿ ಸ್ಥಾನ ನೀಡಲಾಗಿದೆ. ಅವರು ಕೊನೆ ಬಾರಿ 2016ರಲ್ಲಿ ಪಾಕ್ ಪರ ಟಿ20 ಆಡಿದ್ದರು.
undefined
Our fans unveil Pakistan's squad for the ICC Men's 2024 in the West Indies & USA 🇵🇰🤩
Let's go, team! 🙌 | pic.twitter.com/7nsJwPtyn0
ಇನ್ನು, 2021ರ ಬಳಿಕ ಅಂತಾರಾಷ್ಟ್ರೀಯ ಟಿ20 ಆಡದಿರುವ ಇಮಾದ್ ವಾಸಿಂ ಕೂಡಾ ತಂಡಕ್ಕೆ ಆಯ್ಕೆಯಾಗಿದ್ದಾರೆ. 15 ಸದಸ್ಯರ ತಂಡಕ್ಕೆ ಬಾಬರ್ ಆಜಂ ನಾಯಕನಾಗಿ ನೇಮಕಗೊಂಡಿದ್ದಾರೆ. ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಮುಂಬರುವ ಜೂನ್ 01ರಿಂದ ಆರಂಭವಾಗಲಿದ್ದು, ಜಾಗತಿಕ ಚುಟುಕು ಕ್ರಿಕೆಟ್ ಸಂಗ್ರಾಮಕ್ಕೆ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿದೆ.
ಟೀಮ್ ಇಂಡಿಯಾ ಕೋಚ್ ಆಗುವ ತಪ್ಪು ನಿರ್ಧಾರ ಮಾಡ್ಬೇಡಿ, ಲ್ಯಾಂಗರ್‌ಗೆ ಕೆಎಲ್ ರಾಹುಲ್ ಈ ಸಲಹೆ ಕೊಟ್ಟಿದ್ಯಾಕೆ?
ಪಾಕಿಸ್ತಾನ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಾ ಬಂದಿದೆ. ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಿಂದಲೂ ಪಾಕ್ ತಂಡ ತನ್ನ ಹೆಜ್ಜೆಗುರುತು ದಾಖಲಿಸುತ್ತಲೇ ಬಂದಿದೆ. 2009ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯೂನಿಸ್ ಖಾನ್ ನೇತೃತ್ವದ ಪಾಕ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇನ್ನು 2007ರಲ್ಲಿ ಶೋಯೆಬ್ ಮಲಿಕ್ ನಾಯಕತ್ವದಲ್ಲಿ ಹಾಗೂ 2022ರಲ್ಲಿ ಬಾಬರ್ ಅಜಂ ನಾಯಕತ್ವದಲ್ಲಿ ಪಾಕಿಸ್ತಾನ ತಂಡವು ಫೈನಲ್ ಪ್ರವೇಶಿಸಿ ರನ್ನರ್ ಅಪ ಸ್ಥಾನ ಪಡದಿದೆ. ಇನ್ನು 2010, 2012 ಹಾಗೂ 2021ರಲ್ಲಿ ಪಾಕಿಸ್ತಾನ ತಂಡವು ಸೆಮೀಸ್ ಪ್ರವೇಶಿಸಿದ ಸಾಧನೆ ಮಾಡಿದೆ.
ಟಿ20 ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ:
ಬಾಬರ್ ಆಜಂ(ನಾಯಕ), ರಿಜ್ವಾನ್, ಸೈಮ್ ಅಯ್ಯೂಬ್, ಫಖರ್ ಜಮಾನ್, ಉಸ್ಮಾನ್ ಖಾನ್, ಆಜಂ ಖಾನ್, ಇಫ್ತಿಕಾರ್ ಅಹ್ಮದ್, ಇಮಾದ್ ವಾಸಿಂ, ಶದಾಬ್ ಖಾನ್, ಅಮೀರ್, ಶಾಹೀನ್ ಅಫ್ರಿದಿ, ನಸೀಂ ಶಾ, ಅಬ್ಬಾಸ್ ಅಫ್ರಿದಿ, ಹಾರಿಸ್ ರೌಫ್, ಅಬ್ರಾರ್ ಅಹ್ಮದ್.