ಗಂಡು ಮಗುವನ್ನು ಬರಮಾಡಿಕೊಂಡ ವಿರುಷ್ಕಾ ದಂಪತಿ, ವಮಿಕಾ ತಮ್ಮನಿಗೆ ಮುದ್ದಾದ ಹೆಸರು!

Published : Feb 20, 2024, 09:16 PM ISTUpdated : Feb 20, 2024, 10:10 PM IST
ಗಂಡು ಮಗುವನ್ನು ಬರಮಾಡಿಕೊಂಡ ವಿರುಷ್ಕಾ ದಂಪತಿ, ವಮಿಕಾ ತಮ್ಮನಿಗೆ ಮುದ್ದಾದ ಹೆಸರು!

ಸಾರಾಂಶ

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಕುಟುಂಬಕ್ಕೆ ಹೊಸ ಅತಿಥಿ ಆಗಮನವಾಗಿದೆ. ಅನುಷ್ಕಾ ಶರ್ಮಾ 2ನೇ ಮಗುವಿಗೆ ಜನ್ಮ ನೀಡಿದ್ದಾರೆ. ವಮಿಮಾ ತಮ್ಮನಿಗೆ ಮುದ್ದಾದ ಹೆಸರನ್ನು ಘೋಷಣೆ ಮಾಡಿದ್ದಾರೆ.  

ಲಂಡನ್(ಫೆ.20) ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ದಂಪತಿ 2ನೇ ಮಗುವಿನ ತಂದೆಯಾಗಿದ್ದಾರೆ. ಈ ಕುರಿತು ವಿರಾಟ್ ಕೊಹ್ಲಿ ಸಂತಸ ಹಂಚಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಫೆಬ್ರವರಿ 15 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಬ್ಬರು ಆರೋಗ್ಯವಾಗಿದ್ದಾರೆ ಎಂಬ ಮಾಹಿತಿಯನ್ನು ಕೊಹ್ಲಿ ಬಹಿರಂಗಪಡಿಸಿದ್ದಾರೆ. ಇದೇ ವೇಳೆ ವಮಿತಾ ತಮ್ಮನಿಗೆ ಮುದ್ದಾದ ಹೆಸರನ್ನು ಘೋಷಿಸಿದ್ದಾರೆ.  

ವಿರಾಟ್ ಕೊಹ್ಲಿ ಅನುಷ್ಕಾ ದಂಪತಿಯ 2ನೇ ಗಂಡು ಮಗುವಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ, ಎಲ್ಲರ ಪ್ರೀತಿ, ಆಶೀರ್ವಾದ ನಮ್ಮ ಮೇಲೆ ಇರಲಿ. ಇದೇ ವೇಳೆ ನಮ್ಮ ಖಾಸಗಿ ಸಮಯವನ್ನು ಗೌರವಿಸಬೇಕಾಗಿ ಎಂದು ವಿರುಷ್ಕಾ ದಂಪತಿ ಮನವಿ ಮಾಡಿದ್ದಾರೆ.

ಹರ್ಷ ಬೋಗ್ಲೆ VS ಕೊಹ್ಲಿ ಫ್ಯಾನ್ಸ್ ವಾರ್..! ರನ್ ಮಷಿನ್‌ಗೆ ಅವಮಾನ ಮಾಡಿದ್ರಾ ಬೋಗ್ಲೆ..?

ವಿರಾಟ್ ಕೊಹ್ಲಿ 2ನೇ ಮಗುವಿನ ನರೀಕ್ಷೆಯಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆದು ಕುಟುಂಬದ ಜೊತೆಗಿದ್ದರು. ಇದೇ ವೇಳೆ ಕೊಹ್ಲಿ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಟೆಸ್ಟ್ ಪಂದ್ಯಕ್ಕೆ ಲಭ್ಯವಿಲ್ಲ ಮಾಹಿತಿಗಳು ಹರಿದಾಡಿತ್ತು. ಲಂಡನ್‌ನಲ್ಲಿ ಅನುಷ್ಕಾ ಶರ್ಮಾ 2ನೇ ಮಗುವಿಗೆ ಜನ್ಮ ನೀಡಲಿದ್ದಾರೆ ಅನ್ನೋ ಮಾಹಿತಿಗಳು ಬಯಲಾಗಿತ್ತು. ಫೆಬ್ರವರಿ 15 ರಂದೇ ವಿರುಷ್ಕಾ ದಂಪತಿ 2ನೇ ಮಗುವಿನ ತಂದೆಯಾಗಿದ್ದಾರೆ. 5 ದಿನದ ಬಳಿಕ ಈ ಮಾಹಿತಿಯನ್ನು ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ. ಇದೇ ವೇಳೆ ಹಸರು ಕೂಡ ಘೋಷಣೆ ಮಾಡಿ ಕುತೂಹಲ ತಣಿಸಿದ್ದಾರೆ.

 

 

ಸಂತೋಷ, ಪ್ರೀತಿಯಿಂದ ಫೆಬ್ರವರಿ 15 ರಂದು ನಾವು ಗಂಡು ಮಗು, ವಮಿಕಾಳ ಚಿಕ್ಕ ಸಹೋದರ ಅಕಾಯ್(Akaay)ನನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ ಎಂದು ಈ ಮೂಲಕ ತಿಳಿಸಲು ನಾವು ಸಂತೋಷಪಡುತ್ತಿದ್ದೇವೆ. ನಮ್ಮ ಜೀವನದ ಈ ಸುಂದರ ಸಮಯದಲ್ಲಿ ನಿಮ್ಮ ಆಶೀರ್ವಾದ, ಶುಭಹಾರೈಕೆ ಹೀಗೆ ಇರಲಿ ಎಂದು ನಾವು ಬಯಸುತ್ತೇವೆ. ಇದೇ ವೇಳೆ ನಮ್ಮ ಖಾಸಗಿ ಸಮಯವನ್ನು ಗೌರವಿಸಬೇಕಾಗಿ ವಿನಂತಿಸುತ್ತೇವೆ. ಪ್ರೀತಿಪೂರ್ವಕವಾಗಿ ವಿರಾಟ್ ಹಾಗೂ ಅನುಷ್ಕಾ ಎಂದು  ಕೊಹ್ಲಿ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದಾರೆ.  

 

ಸೆಂಚುರಿ ಹೊಡೆದ್ರೂ ಔಟಾಗಿಲ್ಲ: ಯಾರ್ಯಾರು ಅತಿಹೆಚ್ಚು ಅಜೇಯ ಶತಕ ಬಾರಿಸಿದ್ದಾರೆ ಗೊತ್ತಾ..?

ಇತ್ತೀಚೆಗೆ ಉದ್ಯಮಿ ಹರ್ಷಾ ಗೊಯೆಂಕಾ ವಿರುಷ್ಕಾ ದಂಪತಿ ಮಗುವನ್ನು ಲಂಡನ್‌ನಲ್ಲಿ ಸ್ವಾಗತಿಸಲಿದ್ದಾರೆ ಅನ್ನೋ ಸುಳಿವು ನೀಡಿದ್ದರು. ಹೆಸರು ಸೂಚಿಸದೆ ಮುಂದಿನ ಕೆಲವೇ ದಿನದಲ್ಲಿ ಮಗು ಜನಿಸಲಿದೆ. ತಂದೆಯಂತೆ ಶ್ರೇಷ್ಠ ಕ್ರಿಕೆಟ್ ಪಟುವಾಗಿ ಭಾರತವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವು ತಾರೆಯಾಗುತ್ತಾರೋ ಅಥವಾ ತಾಯಿಯಂತೆ ಚಲನಚಿತ್ರ ತಾರೆಯಾಗುತ್ತಾರೋ ಎಂದು ಗೋಯೆಂಕಾ ಟ್ವೀಟ್ ಮಾಡಿದ್ದರು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್