ಕ್ರಿಕೆಟ್ ಪಂದ್ಯಕ್ಕೆ ಎಂಟ್ರಿಕೊಟ್ಟ ಎತ್ತು, ಬೌಲರ್‌ನ ಅಟ್ಟಾಡಿಸಿದ ವಿಡಿಯೋ ವೈರಲ್!

Published : Feb 20, 2024, 06:30 PM IST
ಕ್ರಿಕೆಟ್ ಪಂದ್ಯಕ್ಕೆ ಎಂಟ್ರಿಕೊಟ್ಟ ಎತ್ತು, ಬೌಲರ್‌ನ ಅಟ್ಟಾಡಿಸಿದ ವಿಡಿಯೋ ವೈರಲ್!

ಸಾರಾಂಶ

ಕ್ರಿಕೆಟ್ ಪಂದ್ಯ ನಡೆಯುತ್ತಿದ್ದಂತೆ ಎಟ್ಟು ಮೈದಾನಕ್ಕೆ ಎಂಟ್ರಿಕೊಟ್ಟಿದೆ. ನೇರವಾಗಿ ಪಿಚ್ ಬಳಿಕ ಎತ್ತು ಬ್ಯಾಟ್ಸ್‌ಮನ್‌ನತ್ತ ಧಾವಿಸಿದೆ. ಎತ್ತಿನ ನೋಟದಿಂದ ತಪ್ಪಿಸಿಕೊಂಡ ಬ್ಯಾಟ್ಸ್‌‌ಮನ್ ಕಾಲ್ಕೀಳುತ್ತಿದ್ದಂತೆ, ಬೌಲರ್‌‌ನ ಅಟ್ಟಾಡಿಸಿಕೊಂಡು ಹೋಗಿದೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.  

ಕ್ರಿಕೆಟ್ ಪಂದ್ಯದ ನಡುವೆ ನಡೆಯುವ ಹಲವು ಸ್ವಾರಸ್ಯಕರ ಘಟನೆಗಳು ಬಾರಿ ವೈರಲ್ ಆಗಿದೆ. ಇದೀಗ ಕ್ರಿಕೆಟ್ ಪಂದ್ಯವೊಂದು ನಡೆಯುತ್ತಿದ್ದಾಗ ಎತ್ತು ಎಂಟ್ರಿಕೊಟ್ಟಿದೆ. ಪಿಚ್‌ನತ್ತ ಧಾವಿಸಿದ ಎತ್ತು ಎಲ್ಲರನ್ನೂ ಅಟ್ಟಾಡಿಸಿಕೊಂಡು ಓಡಿಸಿದೆ. ಬ್ಯಾಟ್ಸ್‌ಮನ್ ಬಳಿಕ ಬೌಲರ‌ನ ಅಟ್ಟಾಡಿಸಿಕೊಂಡು ಹೋಗಿದೆ. ಕೂದಲೆಳೆ ಅಂತರದಲ್ಲಿ ಬೌಲರ್ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ರಾಜಸ್ಥಾನ ರಾಯಲ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ.

ಸಣ್ಣ ಗ್ರಾಮದಲ್ಲಿ ನಡೆಯುತ್ತಿರುವ ಕ್ರಿಕೆಟ್ ಟೂರ್ನಮೆಂಟ್. ವೀಕ್ಷಕ ವಿವರಣೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಮತ್ತೊಂದು ವಿಶೇಷ ಅಂದರೆ ಇದು ಗದ್ದೆಯಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯ. ಸಮತಟ್ಟಾದ ಮೈದಾನದವಲ್ಲ. ಎತ್ತರ ಪ್ರದೇಶದಲ್ಲಿ ತಟ್ಟಾಗಿ ಮಾಡಿದ ಗದ್ದೆ. ಈ ಪಂದ್ಯ ವೀಕ್ಷಿಸಲು ಹಲವರು ಆಗಮಿಸಿದ್ದರು. ಊರಿನ ಜನ, ಕ್ರಿಕೆಟ್ ಆಸಕ್ತರು ಸೇರಿದಂತೆ ಹಲವರು ಆಗಮಿಸಿ ಪಂದ್ಯ ವೀಕ್ಷಿಸುತ್ತಿದ್ದರು.

ಮದುವೆಯಾಗಿ ಮಗು ಇರುವವ ವ್ಯಾಲೆಂಟೈನ್ಸ್ ಡೇಗೆ ಪತ್ನಿಗೆ ನೀಡಿದ ಬೆಸ್ಟ್ ಗಿಫ್ಟ್‌ಗೆ ಫಿದಾ ಆದ ಹೆಂಗೆಳೆಯರು?

ಓವರ್ ಮುಗಿದು ಮತ್ತೊರ್ವ ಬೌಲರ್ ಆಗಮಿಸಿದ್ದ. ಬೌಲಿಂಗ್ ಮಾಡಲು ಸಜ್ಜಾಗಿದ್ದ. ಇತ್ತ ಬ್ಯಾಟ್ಸ್‌ಮನ್ ಕ್ರಿಸ್‌ನಲ್ಲಿದ್ದರು. ಫೀಲ್ಡರ್ಸ್ ಕೂಡ ಸೆಟ್ ಆಗಿದ್ದರು. ಈ ವೇಳೆ ಎರಡು ಎತ್ತುಗಳು ಈ ಗದ್ದೆಯಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯದ ನಡುವೆ ಪ್ರವೇಶ ಮಾಡಿದೆ. ಒಂದು ಎತ್ತು ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸಲಿಲ್ಲ. ಹೀಗಾಗಿ ಪಿಚ್ ಬಳಿ ಬರದೆ ಗದ್ದೆಯ ಒಂದು ಬದಿಯಿಂತ ತೆರಳಿತ್ತು.

 

 

ಆದರೆ ಮತ್ತೊಂದು ಎತ್ತು ತನ್ನ ಆಕ್ರೋಶ ಹೊರಹಾಕಿತ್ತು. ನೇರವಾಗಿ ಕ್ರಿಕೆಟ್ ಪಿಚ್‌ಬಳಿ ಬಂದಿತ್ತು. ಬ್ಯಾಟ್ಸ್‌ಮನ್ ಬ್ಯಾಟ್ ಬೀಸಿ ಬೆದರಿಸುವ ಪ್ರಯತ್ನ ಮಾಡಿದ್ದ. ಬಳಿಕ ಹೇಗೋ ಎತ್ತಿನ ನೋಟದಿಂದ ತಪ್ಪಿಸಿಕೊಂಡಿದ್ದ. ಆದರೆ ಎತ್ತಿನ ಆಕ್ರಮಣಕಾರಿ ಆಗಮನದಿಂದ ಬ್ಯಾಟ್ಸ್‌ಮನ್, ಫೀಲ್ಡರ್‌ಗಳು ಓಡಿದ್ದಾರೆ. ಇತ್ತ ಬೌಲರ್ ಕೂಡ ಒಟಕ್ಕೆ ಸಜ್ಜಾಗಿದ್ದಾನೆ. ಆದರೆ ಬೌಲರ್‌ನ ಟಾರ್ಗೆಟ್ ಮಾಡಿದ ಎತ್ತು, ಅಟ್ಟಾಡಿಸಿಕೊಂಡು ಓಡಿಸಿದೆ. 

ಸದನದಲ್ಲೂ ಸದ್ದು ಮಾಡಿದ ಕರಿಮಣಿ ಮಾಲೀಕ ಹಾಡು! ಏನಿಲ್ಲ.. ಏನಿಲ್ಲ.. ಸರ್ಕಾರದ ಬಳಿ ಹಣವಿಲ್ಲ ಎಂದ ಆರ್ ಅಶೋಕ್

ಬೌಲರ್ ವೇಗವಾಗಿ ಓಡಿದರೂ ಎತ್ತು ಮಾತ್ರ ಅಟ್ಟಾಡಿಸಿಕೊಂಡು ಓಡಿಸಿದೆ. ಕೂದಲೆಳೆ ಅಂತರದಲ್ಲಿ ಬೌಲರ್ ಅಪಾಯದಿಂದ ಪಾರಾಗಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋಗೆ ಭಾರಿ ಕಮೆಂಟ್‌ಗಳು ವ್ಯಕ್ತವಾಗಿದೆ. ನೀವೇ ಬೌಲಿಂಗ್, ಬ್ಯಾಟಿಂಗ್ ಮಾಡಿದ್ದರೆ, ಹೇಗೆ ನನಗೂ ಬ್ಯಾಟಿಂಗ್ ಕೊಡಿ ಎಂದು ಎತ್ತು ಬಂದಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಕ್ರಿಕೆಟ್ ಆಡಲು ಇದು ಮೈದಾನವಲ್ಲ, ಇದು ನಾನು ಮೇಯುತ್ತಿದ್ದ ಗದ್ದೆ. ಜಾಗ ಖಾಲಿ ಮಾಡುತ್ತೀರೋ, ನಾನೇ ಬರಲೇ ಎಂದು ಆಕ್ರೋಶಗೊಂಡು ಎತ್ತು ಎಲ್ಲರನ್ನೂ ಅಟ್ಟಾಡಿಸಿಕೊಂಡು ಒಡಿಸಿದೆ ಎಂದು ಕಮೆಂಟ್ ಮಾಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿರಾಟ್ ಕೊಹ್ಲಿ to ಕೆಎಲ್ ರಾಹುಲ್, ಭಾರತೀಯ ಕ್ರಿಕೆಟಿಗರಲ್ಲಿದೆ ಅತೀ ದುಬಾರಿ ಕಾರು
ಬ್ರೇಕ್ ಅಪ್ ಆಗೋರಿಗೆ ಮೂವ್ ಆನ್ ಆಗೋ ಬೆಸ್ಟ್ ಪಾಠ ಹೇಳಿದ ಸ್ಮೃತಿ ಮಂಧನಾ! ಕೊನೆಗೂ ಮೌನ ಮುರಿದ ಕ್ರಿಕೆಟರ್!