
ಮುಂಬೈ(ಫೆ.03) ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಿಕ ಪಂದ್ಯದಿಂದ ವಿರಾಟ್ ಕೊಹ್ಲಿ ಹೊರಗುಳಿಯುತ್ತಿದ್ದಂತೆ ಕೆಲ ಸುದ್ದಿಗಳು ಹರಿದಾಡಿತ್ತು. ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಅನ್ನೋ ಮಾತು ಎಲ್ಲೆಡೆ ಕೇಳಿಬಂದಿತ್ತು. ಆದರೆ ಯಾವುದೇ ಅಧಿಕೃತ ಮಾಹಿತಿ ಇರಲಿಲ್ಲ. ಇದೀಗ ವಿರುಷ್ಕಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಅನ್ನೋ ಮಾಹಿತಿಯನ್ನು ಮಾಜಿ ಕ್ರಿಕೆಟಿಗ, ಕೊಹ್ಲಿ ಆಪ್ತ ಎಬಿ ಡಿವಿಲಿಯರ್ಸ್ ಖಚಿತಪಡಿಸಿದ್ದಾರೆ. ಖುದ್ದು ಎಬಿ ಡಿವಿಲಿಯರ್ಸ್ ವಿಡಿಯೋ ಮೂಲಕ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಆರಂಭಿಕ 2 ಪಂದ್ಯದಿಂದ ವಿರಾಟ್ ಕೊಹ್ಲಿ ಹೊರಗುಳಿದ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಅನುಮಾನಗಳು ಕಾಡತೊಡಗಿತ್ತು. ಈ ಕುರಿತು ಹಲವು ಕ್ರಿಕೆಟ್ ಅಭಿಮಾನಿಗಳು ಕೊಹ್ಲಿ ಅನುಪಸ್ಥಿತಿ ಕುರಿತು ಪ್ರಶ್ನಿಸಿದ್ದರು. ಇತ್ತ ಬಿಸಿಸಿಐ ವೈಯುಕ್ತಿಕ ಕಾರಣದಿಂದ ಕೊಹ್ಲಿ ಆರಂಭಿಕ 2 ಟೆಸ್ಟ್ ಪಂದ್ಯಕ್ಕೆ ಲಭ್ಯರಿಲ್ಲ ಅನ್ನೋ ಮಾಹಿತಿ ನೀಡಿತ್ತು. ಆದರೆ ಈ ಮಾಹಿತಿ ಅಭಿಮಾನಿಗಳಿಗೆ ತೃಪ್ತಿತಂದಿರಲಿಲ್ಲ.
ವಮಿಕಾ ಮೂರನೇ ಬರ್ತ್‌ಡೇ ಸೆಲಿಬ್ರೇಟ್ ಮಾಡಿದ ವಿರುಷ್ಕಾ ದಂಪತಿ: ಇಲ್ಲಿವೆ ಮುದ್ದಾದ ಫೋಟೋಗಳು
ಕ್ರಿಕೆಟ್ ಅಭಿಮಾನಿಗಳು ಹಲವರನ್ನು ಪ್ರಶ್ನಿಸಿದ್ದಾರೆ. ಈ ಪೈಕಿ ಎಬಿ ಡಿವಿಲಿಯರ್ಸ್ ಉತ್ತರ ನೀಡಿದ್ದಾರೆ. ನನಗೆ ಗೊತ್ತಿರುವಂತೆ ವಿರಾಟ್ ಕೊಹ್ಲಿ ಚೆನ್ನಾಗಿದ್ದಾರೆ. ಕೊಹ್ಲಿ ಕುಟುಂಬದ ಜೊತೆ ಕೆಲ ಸಮಯ ಕಳೆಯಲು ಬಯಸಿದ್ದಾರೆ. ಇದರಿಂದ ಕೊಹ್ಲಿ ಆರಂಭಿಕ 2 ಪಂದ್ಯದಿಂದ ಹೊರಗುಳಿದಿದ್ದಾರೆ. ದಂಪತಿ 2 ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಎಬಿಡಿವಿಲಿಯರ್ಸ್ ಹೇಳಿದ್ದಾರೆ.
ಕೊಹ್ಲಿ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬಕ್ಕೆ ಸಮಯ ನೀಡುವುದು ಕೊಹ್ಲಿಗೆ ಅತ್ಯವಶ್ಯಕವಾಗಿದೆ.ಬಹುತೇಕರು ಕುಟುಂಬಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಈ ಕಾರಣಕ್ಕೆ ಕೊಹ್ಲಿಯನ್ನು ಬದ್ಧತೆ, ಕ್ರಿಕೆಟ್ ಕುರಿತು ಪ್ರಶ್ನಿಸುವುದು ಸರಿಯಲ್ಲ. ಮೈದಾನದಲ್ಲಿ ನಾವು ಕೊಹ್ಲಿಯನ್ನು ಮಿಸ್ ಮಾಡುತ್ತಿದ್ದೇವೆ. ಆದರೆ ಕೊಹ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ನಾರ್ಮಲ್ ಡೆಲಿವರಿ ಆಗಬೇಕು ಅಂತ ಬಯಸೋರಿಗೆ ಅನುಷ್ಕಾ ಶರ್ಮಾ ಕೊಟ್ಟಿದ್ದಾರೆ ಟಿಪ್ಸ್!
ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2021ರ ಜನವರಿಯಲ್ಲಿ ವಿರುಷ್ಕಾ ದಂಪತಿ ಕುಟುಂಬಕ್ಕೆ ಮಗಳು ವಮಿಕಾ ಆಗಮನವಾಗಿತ್ತು. 2021ರ ಜನವರಿಯಲ್ಲಿ ವಿದೇಶಿ ಪ್ರವಾಸದಲ್ಲಿದ್ದ ಕೊಹ್ಲಿ ತವರಿಗೆ ಮರಳಿದ್ದರು. ಕುಟುಂಬದ ಜೊತೆ ಕೆಲ ಕಾಲ ಕಳೆದಿದ್ದರು. ಇದೀಗ ಎರಡನೇ ಟೆಸ್ಟ್ ಪಂದ್ಯಕ್ಕೂ ಕೊಹ್ಲಿ ಇದೇ ನಿರ್ಧಾರ ತೆಗೆದುಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.