Vijay Hazare Trophy ಕರ್ನಾಟಕ ಎದುರು ಟಾಸ್ ಗೆದ್ದ ಮಿಜೋರಾಮ್ ಬ್ಯಾಟಿಂಗ್ ಆಯ್ಕೆ

By Naveen KodaseFirst Published Dec 5, 2023, 9:37 AM IST
Highlights

ಸತತ 5 ಗೆಲುವುಗಳನ್ನು ಸಾಧಿಸಿದ್ದ ರಾಜ್ಯ ತಂಡ, ಕಳೆದ ಪಂದ್ಯದಲ್ಲಿ ಹರ್ಯಾಣ ವಿರುದ್ಧ ಸೋಲುಂಡಿತು. ಆದರೂ 20 ಅಂಕಗಳನ್ನು ಹೊಂದಿರುವ ಕರ್ನಾಟಕ ನಾಕೌಟ್‌ ಹಂತಕ್ಕೆ ಪ್ರವೇಶ ಪಡೆಯಿತು. ಕೊನೆಯ ಪಂದ್ಯದಲ್ಲಿ ಹರ್ಯಾಣ, ಜಮ್ಮು-ಕಾಶ್ಮೀರ ವಿರುದ್ಧ ಸೋತು, ಕರ್ನಾಟಕ ಗೆದ್ದರೂ ‘ಸಿ’ ಗುಂಪಿನಿಂದ ಹರ್ಯಾಣ ನೇರವಾಗಿ ಕ್ವಾರ್ಟರ್‌ಗೇರಲಿದೆ.

ಅಹಮದಾಬಾದ್‌(ಡಿ.05): ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ನಾಕೌಟ್‌ ಹಂತಕ್ಕೆ ಪ್ರವೇಶಿಸಿರುವ ಕರ್ನಾಟಕ, ಮಂಗಳವಾರ ಗುಂಪು ಹಂತದ ತನ್ನ ಕೊನೆಯ ಪಂದ್ಯದಲ್ಲಿ ಮಿಜೋರಾಮ್‌ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ದೊಡ್ಡ ಗೆಲುವು ಪಡೆದು ತನ್ನ ನೆಟ್‌ ರನ್‌ರೇಟ್‌ ಉತ್ತಮಗೊಳಿಸಿಕೊಳ್ಳುವ ಮೂಲಕ ನೇರವಾಗಿ ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಪಡೆಯುವ ಗುರಿ ಹೊಂದಿದೆ. ಇದೀಗ ಕರ್ನಾಟಕ ಎದುರು ಟಾಸ್ ಗೆದ್ದ ಮಿಜೋರಾಮ್ ತಂಡವು ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ.

ಸತತ 5 ಗೆಲುವುಗಳನ್ನು ಸಾಧಿಸಿದ್ದ ರಾಜ್ಯ ತಂಡ, ಕಳೆದ ಪಂದ್ಯದಲ್ಲಿ ಹರ್ಯಾಣ ವಿರುದ್ಧ ಸೋಲುಂಡಿತು. ಆದರೂ 20 ಅಂಕಗಳನ್ನು ಹೊಂದಿರುವ ಕರ್ನಾಟಕ ನಾಕೌಟ್‌ ಹಂತಕ್ಕೆ ಪ್ರವೇಶ ಪಡೆಯಿತು. ಕೊನೆಯ ಪಂದ್ಯದಲ್ಲಿ ಹರ್ಯಾಣ, ಜಮ್ಮು-ಕಾಶ್ಮೀರ ವಿರುದ್ಧ ಸೋತು, ಕರ್ನಾಟಕ ಗೆದ್ದರೂ ‘ಸಿ’ ಗುಂಪಿನಿಂದ ಹರ್ಯಾಣ ನೇರವಾಗಿ ಕ್ವಾರ್ಟರ್‌ಗೇರಲಿದೆ. ಕರ್ನಾಟಕ ವಿರುದ್ಧ ಗೆದ್ದ ಕಾರಣ ಹರ್ಯಾಣಕ್ಕೆ ನೇರ ಪ್ರವೇಶ ಸಿಗಲಿದೆ.

'ನೀವೇ ಕ್ಯಾಪ್ಟನ್ ಆಗಿರಿ': BCCI ರೋಹಿತ್​ ಶರ್ಮಾ ಹಿಂದೆ ಬಿದ್ದಿರೋದ್ಯಾಕೆ..?

ನಾಕೌಟ್‌ ಲೆಕ್ಕಾಚಾರ ಹೇಗೆ?

5 ಗುಂಪುಗಳಲ್ಲಿ ಅಗ್ರ-2 ಸ್ಥಾನ ಪಡೆಯುವ ತಲಾ ತಂಡಗಳು ನಾಕೌಟ್‌ ಹಂತಕ್ಕೇರಲಿವೆ. ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ 5 ತಂಡಗಳು ಮೊದಲ 5 ಸ್ಥಾನ ಪಡೆಯಲಿವೆ. ಈ 5 ತಂಡಗಳಿಗೆ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶ ಸಿಗಲಿದೆ. ಗುಂಪಿನಲ್ಲಿ 2ನೇ ಸ್ಥಾನ ಪಡೆದ 5 ತಂಡಗಳು ಅಂಕ, ನೆಟ್‌ ರನ್‌ರೇಟ್‌ ಆಧಾರದಲ್ಲಿ 6ರಿಂದ 10ನೇ ಸ್ಥಾನ ಪಡೆಯಲಿವೆ. 6ನೇ ಸ್ಥಾನ ಪಡೆಯುವ ತಂಡಕ್ಕೂ ನೇರವಾಗಿ ಕ್ವಾರ್ಟರ್‌ಗೆ ಪ್ರವೇಶ ಸಿಗಲಿದೆ. 7, 8, 9 ಹಾಗೂ 10ನೇ ಸ್ಥಾನ ಪಡೆಯುವ ತಂಡಗಳು ಪ್ರಿ ಕ್ವಾರ್ಟರ್‌ ಫೈನಲ್‌ ಆಡಲಿವೆ.

IPL Auction: ಜೋಶ್ ಹೇಜಲ್‌ವುಡ್ ಮೇಲೆ ಹದ್ದಿಗಣ್ಣಿಟ್ಟಿವೆ ಈ ನಾಲ್ಕು IPL ಫ್ರಾಂಚೈಸಿಗಳು..!

ಹೋಪ್‌ ಶತಕ: ಇಂಗ್ಲೆಂಡ್‌ ವಿರುದ್ಧ ವಿಂಡೀಸ್‌ಗೆ ಜಯ

ಆ್ಯಂಟಿಗಾ: ವಿಶ್ವಕಪ್‌ನಲ್ಲಿ ಸಾಧಾರಣ ಪ್ರದರ್ಶನ ತೋರಿ ನಿರಾಸೆ ಅನುಭವಿಸಿದ್ದ ಇಂಗ್ಲೆಂಡ್‌ಗೆ ಮತ್ತೊಂದು ಆಘಾತ ಎದುರಾಗಿದೆ. ವಿಂಡೀಸ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ 325 ರನ್‌ ಕಲೆಹಾಕಿದ ಹೊರತಾಗಿಯೂ ಸೋಲುಂಡಿದೆ. ಶಾಯ್‌ ಹೋಪ್‌(109*)ರ ಅಜೇಯ ಶತಕ, ರೊಮಾರಿಯೋ ಶೆಫರ್ಡ್‌(48)ರ ಹೋರಾಟದ ನೆರವಿನಿಂದ ವಿಂಡೀಸ್‌ 4 ವಿಕೆಟ್‌ ಜಯ ಸಾಧಿಸಿ, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.

ಸ್ಕೋರ್‌:

ಇಂಗ್ಲೆಂಡ್‌ 50 ಓವರಲ್ಲಿ 325/10 (ಬ್ರೂಕ್‌ 71, ಮೋಟಿ 2-49)

ವಿಂಡೀಸ್‌ 48.5 ಓವರಲ್ಲಿ 326/6 (ಹೋಪ್‌ 109*, ಅಥನಾಜ್‌ 66, ಶೆಫರ್ಡ್‌ 48, ರೆಹಾನ್‌ 2-40)
 

click me!