Vijay Hazare Trophy: ಕ್ವಾರ್ಟರ್ ಫೈನಲ್‌ನಲ್ಲಿ ವಿದರ್ಭ ಎದುರು ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ

By Naveen KodaseFirst Published Dec 11, 2023, 9:32 AM IST
Highlights

ಮಯಾಂಕ್‌ ಅಗರ್‌ವಾಲ್‌ ನಾಯಕತ್ವದ ಕರ್ನಾಟಕ ‘ಸಿ’ ಗುಂಪಿನಲ್ಲಿ ಆಡಿದ 7 ಪಂದ್ಯಗಳಲ್ಲಿ 6ರಲ್ಲಿ ಜಯಿಸಿ 24 ಅಂಕದೊಂದಿಗೆ 2ನೇ ಸ್ಥಾನಿಯಾಗಿ ಕ್ವಾರ್ಟರ್‌ ಪ್ರವೇಶಿಸಿತ್ತು. ಅತ್ತ ‘ಬಿ’ ಗುಂಪಿನಲ್ಲಿದ್ದ ವಿದರ್ಭ ಆಡಿದ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದ್ದು, 20 ಅಂಕದೊಂದಿಗೆ ಅಗ್ರಸ್ಥಾನಿಯಾಗಿ ಕ್ವಾರ್ಟರ್‌ ಪ್ರವೇಶಿಸಿದೆ. ಕಳೆದ ಬಾರಿ ರಾಜ್ಯ ತಂಡ ಸೆಮೀಸ್‌ಗೇರಿತ್ತು.

ರಾಜ್‌ಕೋಟ್(ಡಿ.12): 2019-20ರ ಬಳಿಕ ಮೊದಲ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವ ನಿರೀಕ್ಷೆಯಲ್ಲಿರುವ 4 ಬಾರಿ ಚಾಂಪಿಯನ್‌ ಕರ್ನಾಟಕ ತಂಡ, ಸೋಮವಾರ ವಿಜಯ್‌ ಹಜಾರೆ ಏಕದಿನ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ವಿದರ್ಭ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ರಾಜ್‌ಕೋಟ್ ಆತಿಥ್ಯ ವಹಿಸಿದ್ದು ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ.

ಮಯಾಂಕ್‌ ಅಗರ್‌ವಾಲ್‌ ನಾಯಕತ್ವದ ಕರ್ನಾಟಕ ‘ಸಿ’ ಗುಂಪಿನಲ್ಲಿ ಆಡಿದ 7 ಪಂದ್ಯಗಳಲ್ಲಿ 6ರಲ್ಲಿ ಜಯಿಸಿ 24 ಅಂಕದೊಂದಿಗೆ 2ನೇ ಸ್ಥಾನಿಯಾಗಿ ಕ್ವಾರ್ಟರ್‌ ಪ್ರವೇಶಿಸಿತ್ತು. ಅತ್ತ ‘ಬಿ’ ಗುಂಪಿನಲ್ಲಿದ್ದ ವಿದರ್ಭ ಆಡಿದ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದ್ದು, 20 ಅಂಕದೊಂದಿಗೆ ಅಗ್ರಸ್ಥಾನಿಯಾಗಿ ಕ್ವಾರ್ಟರ್‌ ಪ್ರವೇಶಿಸಿದೆ. ಕಳೆದ ಬಾರಿ ರಾಜ್ಯ ತಂಡ ಸೆಮೀಸ್‌ಗೇರಿತ್ತು.

ಸೋಮವಾರ ಇನ್ನೂ 3 ಕ್ವಾರ್ಟರ್‌ ಫೈನಲ್‌ ಪಂದ್ಯಗಳು ನಡೆಯಲಿದ್ದು, ಹರ್ಯಾಣ-ಬಂಗಾಳ, ರಾಜಸ್ಥಾನ-ಕೇರಳ ಹಾಗೂ ಮುಂಬೈ-ತಮಿಳುನಾಡು ತಂಡಗಳು ಮುಖಾಮುಖಿಯಾಗಲಿವೆ. ಎಲ್ಲಾ ಪಂದ್ಯಗಳೂ ರಾಜ್‌ಕೋಟ್‌ನ ವಿವಿಧ 4 ಕ್ರೀಡಾಂಗಣಗಳಲ್ಲಿ ನಡೆಯಲಿವೆ.

ಇಟಲಿ ಹಾಟ್ ಫುಟ್ಬಾಲ್ ಆಟಗಾರ್ತಿ ವಿರಾಟ್ ಕೊಹ್ಲಿ ಅಪ್ಪಟ ಅಭಿಮಾನಿ..! ಇಲ್ಲಿವೆ ಕಿಕ್ಕೇರಿಸೋ ಫೋಟೋಗಳು

ಪಂದ್ಯ: ಬೆಳಗ್ಗೆ 9 ಗಂಟೆಗೆ

ಬೆಂಗ್ಳೂರಿನ ಹೊಸ ಎನ್‌ಸಿಎ ಆಗಸ್ಟ್‌ನಲ್ಲಿ ಲೋಕಾರ್ಪಣೆ?

ಬೆಂಗಳೂರು: ಬಿಸಿಸಿಐ ಕನಸಿನ ಯೋಜನೆಯಾದ ನೂತನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ) 2024ರ ಆಗಸ್ಟ್‌ನಲ್ಲಿ ಲೋಕಾರ್ಪಣೆಗೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಸ್ವತಃ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ವಿಶ್ವಾಸ ವ್ಯಕ್ತಪಡಿಸಿದ್ದು, ಆಗಸ್ಟ್‌ನಲ್ಲಿ ಎನ್‌ಸಿಎ ಕಾರ್ಯಾರಂಭಿಸುವ ಭರವಸೆ ಒದಗಿಸಿದ್ದಾರೆ. 

T20 ವಿಶ್ವಕಪ್‌ಗೆ ಕೊಹ್ಲಿಗಿಲ್ವಾ ಟೀಂ ಇಂಡಿಯಾದಲ್ಲಿ ಸ್ಥಾನ? ವಿರಾಟ್​ ಟಿ20 ಕೆರಿಯರ್ ಕ್ಲೋಸ್ ಆಯ್ತಾ..?

ಸದ್ಯ ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಎನ್‌ಸಿಇ ಇದ್ದು, ನೂತನ ಕೇಂದ್ರ ದೇವನಹಳ್ಳಿ ಬಳಿ 40 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿದೆ. 2022ರ ಫೆಬ್ರವರಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ನೂತನ ಎನ್‌ಸಿಎದಲ್ಲಿ 16,000 ಚದರ ಅಡಿ ವಿಸ್ತೀರ್ಣದ ಜಿಮ್‌, 40 ಪ್ರಾಕ್ಟೀಸ್‌ ಪಿಚ್‌, 250ರಷ್ಟು ಸುಸಜ್ಜಿತ ಕೋಣೆಗಳು ಇರಲಿವೆ.

2ನೇ ಟೆಸ್ಟ್‌: ಕಿವೀಸ್‌ಗೆ 4 ವಿಕೆಟ್‌ ರೋಚಕ ಗೆಲುವು

ಮೀರ್‌ಪುರ: ಗ್ಲೆನ್‌ ಫಿಲಿಪ್ಸ್‌ ಮತ್ತು ಮಿಚೆಲ್‌ ಸ್ಯಾಂಟ್ನರ್‌ರ ಹೋರಾಟದಿಂದಾಗಿ ಸೋಲಿನ ದವಡೆಯಿಂದ ಪಾರಾದ ನ್ಯೂಜಿಲೆಂಡ್‌, ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್‌ನಲ್ಲಿ 4 ವಿಕೆಟ್‌ ಜಯ ಸಾಧಿಸಿದೆ. ಇದರೊಂದಿಗೆ 2 ಪಂದ್ಯಗಳ ಸರಣಿ 1-1ರಿಂದ ಸಮವಾಗಿದೆ. 3ನೇ ದಿನ 2 ವಿಕೆಟ್‌ಗೆ 38 ರನ್‌ ಗಳಿಸಿದ್ದ ಬಾಂಗ್ಲಾ ಶನಿವಾರ ಏಜಾಜ್‌ ಪಟೇಲ್‌(57ಕ್ಕೆ 6) ದಾಳಿಗೆ ತತ್ತರಿಸಿ 144 ರನ್‌ಗೆ ಸರ್ವಪತನ ಕಂಡಿತು. 2ನೇ ಇನ್ನಿಂಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್‌ 69 ರನ್ 6 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಫಿಲಿಪ್ಸ್‌(40) ಮತ್ತು ಸ್ಯಾಂಟ್ನರ್‌ (35) 70 ರನ್‌ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸ್ಕೋರ್‌: ಬಾಂಗ್ಲಾ 172/10 ಮತ್ತು 144/10, ನ್ಯೂಜಿಲೆಂಡ್‌ 180/10 ಮತ್ತು 139/6
 

click me!