ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡವು ಮುಂಬೈ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. 383 ರನ್‌ಗಳ ಬೃಹತ್ ಗುರಿಯನ್ನು ಕರ್ನಾಟಕ 46.2 ಓವರ್‌ಗಳಲ್ಲಿ ಬೆನ್ನಟ್ಟಿತು. ಕೆ.ಎಲ್. ಶ್ರೀಜಿತ್ ಅವರ ಅಜೇಯ 150 ರನ್‌ಗಳು ಮತ್ತು ಪ್ರವೀಣ್ ದುಬೆ ಅವರ ಅಜೇಯ 65 ರನ್‌ಗಳು ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವು.
ಅಹಮದಾಬಾದ್: ಈ ಬಾರಿ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಭರ್ಜರಿ ಶುಭಾರಂಭ ಮಾಡಿದೆ. ಬೌಲರ್‌ಗಳು ವೈಫಲ್ಯ ಅನುಭವಿಸಿದರೂ, ಕೆ.ಎಲ್.ಶ್ರೀಜಿತ್ ಸೇರಿದಂತೆ ಬ್ಯಾಟರ್‌ಗಳ ಅಭೂತಪೂರ್ವ ಆಟದ ನೆರವಿನಿಂದ ಬಲಿಷ್ಠ ಮುಂಬೈ ವಿರುದ್ದ ರಾಜ್ಯ ತಂಡ 7 ವಿಕೆಟ್ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದೆ. 383 ರನ್‌ಗಳ ಬೃಹತ್ ಗುರಿಯನ್ನು ಕೇವಲ 46.2 ಓವರ್ ಗಳಲ್ಲೆ ಬೆನ್ನತ್ತಿ ಗೆದ್ದು ದಾಖಲೆ ಬರೆದಿದೆ.
ಸ್ಫೋಟಕ ಆಟವಾಡಿದ ಮುಂಬೈ 50 ಓವರಲ್ಲಿ 4 ವಿಕೆಟ್ ಕಳೆದುಕೊಂಡು ಬರೋಬ್ಬರಿ 382 ರನ್ ಕಲೆ ಹಾಕಿತು. ಆಯುಶ್ ಮಾಥೆ 78, ಹಾರ್ದಿಕ್ ತಮೋರೆ 84 ರನ್ ಸಿಡಿಸಿದರು. 4ನೇ ಕ್ರಮಾಂಕದಲ್ಲಿ ಕ್ರೀಸ್ ಗಿಳಿದ ನಾಯಕ ಶ್ರೇಯಸ್ ಅಯ್ಯರ್ 50 ಎಸೆತಗಳಲ್ಲೇ ಶತಕ ಬಾರಿಸಿ ಕರ್ನಾಟಕವನ್ನು ಮತ್ತಷ್ಟು ಕಾಡಿದರು. ಅವರು 55 ಎಸೆತಗಳಲ್ಲಿ 5 ಬೌಂಡರಿ, 10 ಸಿಕ್ಸರ್‌ಗಳೊಂದಿಗೆ ಔಟಾಗದೆ 114 ರನ್ ಸಿಡಿಸಿದರು. ಕೊನೆಯಲ್ಲಿ ಅಬ್ಬರಿಸಿದ ಶಿವಂ ದುಬೆ 36 ಎಸೆತಗಳಲ್ಲಿ ಔಟಾಗದೆ 63 ರನ್ ಚಚ್ಚಿದರು. ಈ ಜೋಡಿ ಮುರಿಯದ 4ನೇ ವಿಕೆಟ್‌ಗೆ 65 ಎಸೆತಗಳಲ್ಲಿ 148 ರನ್ ಜೊತೆಯಾಟವಾಡಿತು.ರಾಜ್ಯದ ತಂಡದ ಯುವ ಬೌಲರ್ ವಿದ್ಯಾಧರ್ ಪಾಟೀಲ್ 10 ಓವರ್‌ಗಳಲ್ಲಿ ಬರೋಬ್ಬರಿ 103 ರನ್ ಬಿಟ್ಟುಕೊಟ್ಟು ಅತಿ ದುಬಾರಿ ಎನಿಸಿಕೊಂಡರು. ಪ್ರವೀಣ್ ದುಬೆ 2 ವಿಕೆಟ್ ಕಿತ್ತರು.
undefined
ಯುವ ತಾರೆಗಳ ಮ್ಯಾಜಿಕ್: ಕರ್ನಾಟಕಕ್ಕೆ ಬೃಹತ್ ಗುರಿ ನೀಡಿದ ಮುಂಬೈ, ಗೆಲುವು ತನ್ನದೇ ಎಂಬ ವಿಶ್ವಾಸದಲ್ಲಿತ್ತು.ಕರ್ನಾಟಕದ ಇತ್ತೀಚಿಗಿನ ಬ್ಯಾಟಿಂಗ್ ಗಮನಿಸಿದರೆ ಮುಂಬೈ ತಂಡವೇ ಗೆಲ್ಲಲಿದೆ ಎಂದೇ ಅಭಿಮಾನಿಗಳು ಭಾವಿಸಿದ್ದರು. ಆದರೆ ಎಲ್ಲಾ ಲೆಕ್ಕಾಚಾರವನ್ನು ರಾಜ್ಯದ ಯುವ ತಾರೆಗಳು ಉಲ್ಟಾ ಮಾಡಿದರು. ನಿಕಿನ್ ಜೋಸ್ 21, ಮಯಾಂಕ್ 47ಕ್ಕೆ ವಿಕೆಟ್ ಒಪ್ಪಿಸಿದ ಬಳಿಕ, ಅನೀಶ್ ಕೆ.ವಿ. ಹಾಗೂ ಕೆ.ಎಲ್. ಶ್ರೀಜಿತ್ ಅಬ್ಬರಿಸಿದರು. ಮನೀಶ್ ಪಾಂಡೆ ಬದಲಿಗನಾಗಿ ಆಡಿದ ಅನೀಶ್ 66 ಎಸೆತಗಳಲ್ಲಿ 82 ರನ್ ಸಿಡಿಸಿ ಆಯ್ಕೆಯನ್ನು ಸಮರ್ಥಿಸಿಕೊಂಡರು. ಬಳಿಕ ಪ್ರವೀಣ್ ದುಬೆ ಜೊತೆಗೂಡಿದ ಶ್ರೀಜಿತ್, ಮುರಿಯದ 4ನೇ ವಿಕೆಟ್‌ಗೆ 119 ಎಸೆತಗಳಲ್ಲಿ 183 ರನ್ ಸೇರಿಸಿ ತಂಡವನ್ನು ಗೆಲ್ಲಿಸಿದರು. ಶ್ರೀಜಿತ್ 101 ಎಸೆತಗಳಲ್ಲಿ 20 ಬೌಂಡರಿ, 4 ಸಿಕ್ಸ್‌ರ್‌ಗಳೊಂದಿಗೆ ಔಟಾಗದೆ 150 ರನ್ ಚಚ್ಚಿದರೆ, ಪ್ರವೀಣ್ 50 ಎಸೆತಕ್ಕೆ ಔಟಾಗದೆ 65 ರನ್ ಬಾರಿಸಿದರು.
KARNATAKA CHASE DOWN 383 RUNS AGAINST MUMBAI FROM JUST 46.2 OVERS IN VIJAY HAZARE TROPHY 🤯⚡
- Wicket keeper KL Shrijith is the hero with 150* runs from 101 balls including 20 fours & 4 sixes, he is part of Mumbai Indians in IPL 2025. pic.twitter.com/6oIxLJdIZt
ಸ್ಕೋರ್:
ಮುಂಬೈ 50 ಓವರಲ್ಲಿ 382/4 (ಶ್ರೇಯಸ್ 114*, ತಮೋರೆ 84, ಆಯುಶ್ 78, ದುಬೆ 63*, ಪ್ರವೀಣ್ 2-89),
ಕರ್ನಾಟಕ 46.2 ಓವರಲ್ಲಿ 383/3 (ಶ್ರೀಜಿತ್ 150*, ಅನೀಶ್ 82, ಪ್ರವೀಣ್ 65, ಮಯಾಂಕ್ 47, ಜುನೇದ್ 2-70)
ಪಂದ್ಯಶ್ರೇಷ್ಠ: ಕೆ.ಎಲ್.ಶ್ರೀಜಿತ್
ಕೇವಲ 97 ಎಸೆತಗಳಲ್ಲಿ ದ್ವಿಶತಕ: ಅಂಡರ್-23 ಕ್ರಿಕೆಟ್‌ನಲ್ಲಿ ಸಮೀರ್ ಹೊಸ ದಾಖಲೆ
ಪಂಜಾಬ್ ಶುಭಾರಂಭ
ಟೂರ್ನಿಯಲ್ಲಿ ಬೆಂಗಾಲ್, ಬರೋಡಾ, ಪಂಜಾಬ್, ಗೋವಾ, ಆಂಧ್ರ, ಗುಜರಾತ್, ಸರ್ವಿಸಸ್, ಹೈದರಾಬಾದ್, ಪುದುಚೇರಿ, ಮಹಾರಾಷ್ಟ್ರ, ಜಾರ್ಖಂಡ್, ಮಧ್ಯಪ್ರದೇಶ ಶುಭಾರಂಭ ಮಾಡಿದವು. ಮುಂಬೈ, ರೈಲ್ವೇಸ್, ಡೆಲ್ಲಿ, ರಾಜಸ್ಥಾನ, ಸೌರಾಷ್ಟ್ರ ಸೇರಿದಂತೆ ಪ್ರಮುಖ ತಂಡಗಳು ಸೋಲನುಭವಿಸಿದವು.