ಕೇವಲ 97 ಎಸೆತಗಳಲ್ಲಿ ದ್ವಿಶತಕ: ಅಂಡರ್-23 ಕ್ರಿಕೆಟ್‌ನಲ್ಲಿ ಸಮೀರ್ ಹೊಸ ದಾಖಲೆ

By Naveen Kodase  |  First Published Dec 22, 2024, 9:54 AM IST

ಉತ್ತರ ಪ್ರದೇಶದ ಸಮೀರ್ ರಿಜ್ಜಿ ಅಂಡರ್ 23 ರಾಜ್ಯ ಎ ಟ್ರೋಫಿ ಟೂರ್ನಿಯಲ್ಲಿ ಅತಿವೇಗದ ದ್ವಿತಶಕ ಬಾರಿಸಿ ದಾಖಲೆ ಬರೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.


ವಡೋದರಾ: ಅಂಡರ್-23 ರಾಜ್ಯ ಎ ಟ್ರೋಫಿ ರಾಷ್ಟ್ರೀಯ ಕ್ರಿಕೆಟ್ ಟೂರ್ನಿಯಲ್ಲಿ ಉತ್ತರ ಪ್ರದೇಶದ ಸಮೀರ್ ರಿಜ್ಜಿ ಹೊಸ ದಾಖಲೆ  ಬರೆದಿದ್ದಾರೆ. ಶನಿವಾರ ತ್ರಿಪುರಾ ವಿರುದ್ಧ ಪಂದ್ಯದಲ್ಲಿ 21 ವರ್ಷದ ರಿಜ್ಜಿ 97 ಎಸೆತಗಳಲ್ಲಿ ದ್ವಿಶತಕ ಬಾರಿಸಿದರು. ಇದು ಟೂರ್ನಿಯ ಇತಿಹಾಸದಲ್ಲೇ ಅತಿ ವೇಗದ ದ್ವಿಶತಕ. ಅವರು 97 ಎಸೆತಗಳಲ್ಲಿ 207.22 ರ ಸರಾಸರಿಯಲ್ಲಿ ಔಟಾಗದೆ 201 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಒಟ್ಟು 13 ಬೌಂಡರಿ, 20 ಸಿಕ್ಸರ್‌ಗಳಿದ್ದವು. 

ಸಮೀರ್ ಸ್ಫೋಟಕ ಆಟದ ನೆರವಿನಿಂದ ಉತ್ತರ ಪ್ರದೇಶ 50 ಓವರಲ್ಲಿ 4 ವಿಕೆಟ್‌ಗೆ 405 ರನ್ ಕಲೆಹಾಕಿತು. ಬೃಹತ್ ಗುರಿ ಬೆನ್ನತ್ತಿದ ತ್ರಿಪುರಾ 9 ವಿಕೆಟ್‌ಗೆ 253 ರನ್ ಗಳಿಸಿ, 152 ರನ್‌ಗಳಿಂದ ಪರಾಭವಗೊಂಡಿತು.

Tap to resize

Latest Videos

undefined

ಅಂ-23 ಏಕದಿನ: ಕರ್ನಾಟಕ ತಂಡಕ್ಕೆ ಎರಡನೇ ಗೆಲುವು

ರಾಯ್ಪುರ: ಅಂಡರ್-23 ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ 2ನೇ ಗೆಲುವು ಸಾಧಿಸಿದೆ. ಶನಿವಾರ ಗೋವಾ ವಿರುದ್ಧ ರಾಜ್ಯ ತಂಡ 3 ವಿಕೆಟ್ ಜಯಗಳಿಸಿತು. ಸದ್ಯ 'ಡಿ' ಗುಂಪಿನಲ್ಲಿ ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿರುವ ಕರ್ನಾಟಕ 8 ಅಂಕದೊಂ ದಿಗೆ 3ನೇ ಸ್ಥಾನದಲ್ಲಿದೆ. ಮೊದಲು ಬ್ಯಾಟ್ ಮಾಡಿದ ಗೋವಾ 45.3 ಓವರ್‌ಗಳಲ್ಲಿ 180ಕ್ಕೆ ಆಲೌಟಾಯಿತು. ಕರ್ನಾಟಕ 38.2 ಓವರ್‌ಗಳಲ್ಲೇ ಗೆಲುವು ಸಾಧಿಸಿತು.

ರವಿಚಂದ್ರನ್ ಅಶ್ವಿನ್‌ಗೆ ಖೇಲ್‌ ರತ್ನ ನೀಡಿ: ಕೇಂದ್ರಕ್ಕೆ ಕಾಂಗ್ರೆಸ್ ಸಂಸದ ಮನವಿ!

35 ಎಸೆತದಲ್ಲಿ ಶತಕ: ಲಿಸ್ ಎ ಲಿಸ್ಟ್ಎ ಕ್ರಿಕೆಟ್‌ನಲ್ಲಿ ಅನೋಲ್ ದಾಖಲೆ

ಅಹಮದಾಬಾದ್: ಲಿಸ್ಟ್ 'ಎ'(50 ಓವರ್ ಪಂದ್ಯ) ಕ್ರಿಕೆಟ್‌ನಲ್ಲಿ ಭಾರತೀಯರ ಪೈಕಿ ಅತಿ ವೇಗದ ಹಾಗೂ ಒಟ್ಟಾರೆ ವಿಶ್ವದಲ್ಲೇ 3ನೇ ಅತಿ ವೇಗದ ಶತಕ ಬಾರಿಸಿದ ದಾಖಲೆಯನ್ನು ಪಂಜಾಬ್ ಬ್ಯಾಟರ್ ಅನ್ನೋಲ್‌ ಪ್ರೀತ್ ಸಿಂಗ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಶನಿವಾರ ವಿಜಯ್ ಹಜಾರೆ ಏಕದಿನ ಟೂರ್ನಿಯ ಅರುಣಾಚಲ ಪ್ರದೇಶ ವಿರುದ್ಧ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು. ಅರುಣಾಚಲ ತಂಡದ 164 ರನ್ ಗುರಿಯನ್ನು ಪಂಜಾಬ್ 12.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ ಬೆನ್ನತ್ತಿ ಜಯಗಳಿಸಿತು. 35 ಎಸೆತಗಳಲ್ಲೇ ಶತಕ ಪೂರ್ಣಗೊಳಿಸಿದ ಅನ್ನೋಲ್ ಪ್ರೀತ್, ಒಟ್ಟಾರೆ 45 ಎಸೆತಗಳಲ್ಲಿ 115 ರನ್ ಬಾರಿಸಿದರು. ಇದರಲ್ಲಿ 12 ಬೌಂಡರಿ, 9 ಸಿಕ್ಸರ್‌ಗಳಿದ್ದವು. 

ಈತನೇ ನನ್ನ ಉತ್ತರಾಧಿಕಾರಿ ಎಂದು ಘೋಷಿಸಿದ ರವಿಚಂದ್ರನ್ ಅಶ್ವಿನ್! ಸೆಲೆಕ್ಟರ್ಸ್ ತಲೆನೋವು ಕಮ್ಮಿ ಮಾಡಿದ ಆಫ್‌ಸ್ಪಿನ್ನರ್

2009-10ರಲ್ಲಿ ಮಹಾರಾಷ್ಟ್ರ ವಿರುದ್ಧ ಬರೋಡಾದ ಯೂಸುಫ್ ಪಠಾಣ್ 40 ಎಸೆತಗಳಲ್ಲಿ ಶತಕ ಬಾರಿಸಿದ್ದು ಈ ವರೆಗೂ ದಾಖಲೆಯಾಗಿತ್ತು.ಕಳೆದ ವರ್ಷ ಇನ್ನು, ತಾಸ್ಮಾನಿಯಾ ವಿರುದ್ಧ ದಕ್ಷಿಣ ಆಸ್ಟ್ರೇಲಿಯಾದ ಜೇಕ್ ಫ್ರೇಸರ್ 29 ಎಸೆತ, ವಿಂಡೀಸ್ ವಿರುದ್ಧ 2015ರಲ್ಲಿ ದ.ಆಫ್ರಿಕಾದ ಎಬಿ ಡಿವಿಲಿಯರ್ಸ್ 31 ಎಸೆತಗಳಲ್ಲಿ ಶತಕ ಬಾರಿಸಿದ್ದು ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ವಿಶ್ವದಲ್ಲೇ ಅಗ್ರ -2 ವೇಗದ ಶತಕಗಳಾಗಿವೆ.
 

click me!