ವಿಜಯ್‌ ಹಜಾರೆ ಟೂರ್ನಿ: ನಾಕೌಟ್ಸ್‌ಗೆ ಡೆಲ್ಲಿ ಆತಿಥ್ಯ

By Kannadaprabha NewsFirst Published Feb 27, 2021, 9:16 AM IST
Highlights

ವಿಜಯ್‌ ಹಜಾರೆ ಟ್ರೋಫಿ ಟೂರ್ನಮೆಂಟ್‌ನ ನಾಕೌಟ್‌ ಪಂದ್ಯಗಳಿಗೆ ಡೆಲ್ಲಿ ಆತಿಥ್ಯವನ್ನು ವಹಿಸಿದೆ. ನಾಕೌಟ್‌ ಪಂದ್ಯಗಳು ಮಾರ್ಚ್‌ 7ರಿಂದ ಆರಂಭವಾಗಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಮುಂಬೈ(ಫೆ.27): ಮಾರ್ಚ್ 7ರಿಂದ ನಡೆಯಲಿರುವ ವಿಜಯ್‌ ಹಜಾರೆ ಏಕದಿನ ಟೂರ್ನಿಯ ನಾಕೌಟ್‌ ಹಂತದ ಪಂದ್ಯಗಳಿಗೆ ದೆಹಲಿ ಆತಿಥ್ಯ ನೀಡಲಿದೆ. ಪಂದ್ಯಗಳು ಅರುಣ್‌ ಜೇಟ್ಲಿ ಕ್ರೀಡಾಂಗಣ ಹಾಗೂ ಪಾಲಂ ಮೈದಾನದಲ್ಲಿ ನಡೆಯಲಿವೆ. 

ಈ ಸಂಬಂಧ ಎಲ್ಲಾ ರಾಜ್ಯ ಸಂಸ್ಥೆಗಳಿಗೆ ಬಿಸಿಸಿಐ ಕಾರ್ಯದರ್ಶಿ ಕಚೇರಿಯಿಂದ ಇ-ಮೇಲ್‌ ಮೂಲಕ ಮಾಹಿತಿ ತಲುಪಿಸಲಾಗಿದೆ. ಸದ್ಯ ಲೀಗ್‌ ಹಂತದ ಪಂದ್ಯಗಳು 6 ವಿವಿಧ ನಗರಗಳಲ್ಲಿ ನಡೆಯುತ್ತಿವೆ. ಮಾರ್ಚ್ 7ಕ್ಕೆ ಪ್ರಿ-ಕ್ವಾರ್ಟರ್‌ (ಎಲಿಮಿನೇಟರ್‌) ನಡೆಯಲಿದ್ದು, ಮಾ.8,9ಕ್ಕೆ ಕ್ವಾರ್ಟರ್‌ ಫೈನಲ್‌, ಮಾ.11ಕ್ಕೆ ಸೆಮೀಸ್‌ ಹಾಗೂ ಮಾ.14ಕ್ಕೆ ಫೈನಲ್‌ ನಡೆಯಲಿದೆ.

ರಾಷ್ಟ್ರೀಯ ಮಹಿಳಾ ಏಕದಿನ: ‘ಇ’ ಗುಂಪಿನಲ್ಲಿ ಕರ್ನಾಟಕ

ನವದೆಹಲಿ: ದೇಶದಲ್ಲಿ ಮಹಿಳಾ ಕ್ರಿಕೆಟ್‌ ಪುನರಾರಂಭಿಸಲು ಬಿಸಿಸಿಐ ನಿರ್ಧರಿಸಿದ್ದು, ರಾಷ್ಟ್ರೀಯ ಏಕದಿನ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಳಿಸಿದೆ. ಮಾರ್ಚ್ 11ರಿಂದ ಟೂರ್ನಿ ಆರಂಭಗೊಳ್ಳಲಿದ್ದು, ಕರ್ನಾಟಕ ತಂಡ ಎಲೈಟ್‌ ‘ಇ’ ಗುಂಪಿನಲ್ಲಿ ಸ್ಥಾನ ಪಡೆದಿದೆ. 

ಮತ್ತೆ ಶತಕ ಚಚ್ಚಿದ ಪಡಿಕ್ಕಲ್‌, ಕರ್ನಾಟಕಕ್ಕೆ ಸುಲಭ ಜಯ

ಲೀಗ್‌ ಹಂತದ ಪಂದ್ಯದಲ್ಲಿ ಬೆಂಗಳೂರು, ಚೆನ್ನೈ, ಇಂದೋರ್‌, ಸೂರತ್‌, ರಾಜ್‌ಕೋಟ್‌ ಹಾಗೂ ಜೈಪುರದಲ್ಲಿ ನಡೆಯಲಿವೆ. ‘ಇ’ ಗುಂಪಿನಲ್ಲಿ ಕರ್ನಾಟಕಕ್ಕೆ ದೆಹಲಿ, ಹಿಮಾಚಲ ಪ್ರದೇಶ, ತಮಿಳುನಾಡು, ವಿದರ್ಭ ಹಾಗೂ ಮೇಘಾಲಯ ಎದುರಾಗಲಿವೆ. ಮಾ.29ರಂದು ಕ್ವಾರ್ಟರ್‌ ಫೈನಲ್ಸ್‌ ನಡೆಯಲಿದ್ದು, ಏ.1ಕ್ಕೆ ಸೆಮೀಸ್‌, ಏ.4ಕ್ಕೆ ಫೈನಲ್‌ ನಡೆಯಲಿದೆ. ಕಳೆದ ವರ್ಷ ಕೋವಿಡ್‌ನಿಂದ ಟೂರ್ನಿಯನ್ನು ನಡೆಸಲಾಗಿರಲಿಲ್ಲ.

click me!