
ಅಹಮದಾಬಾದ್(ಫೆ.26): ಭಾರತ-ಇಂಗ್ಲೆಂಡ್ ನಡುವಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ 10 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯ ಕೇವಲ ಎರಡನೇ ದಿನದಲ್ಲಿ ಮುಕ್ತಾಯವಾದ ಬೆನ್ನಲ್ಲೇ ಪಿಚ್ ಕುರಿತಂತೆ ಇಂಗ್ಲೆಂಡ್ ಕ್ರಿಕೆಟಿಗರು ಪ್ರಶ್ನೆಗಳನ್ನು ಎತ್ತಲಾರಂಭಿಸಿದ್ದರು. ಇದರ ಬೆನ್ನಲ್ಲೇ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ತಮ್ಮದೇ ದೇಶದ ಆಟಗಾರರಿಗೆ ಚಾಟಿ ಬೀಸಿದ್ದಾರೆ.
ಇಂಗ್ಲೆಂಡ್ ಕ್ರಿಕೆಟಿಗರು ಇನ್ನಾದರೂ ಪಿಚ್ ಬಗ್ಗೆ ರಾಗ ಎಳೆಯುವುದನ್ನು ಬಿಟ್ಟು, ಪ್ರಾಮಾಣಿಕವಾಗಿ ಮುಂದಿನ ಟೆಸ್ಟ್ ಪಂದ್ಯಕ್ಕೆ ಈಗಿನಿಂದಲೇ ಅಭ್ಯಾಸ ನಡೆಸುವುದು ಒಳ್ಳೆಯದು. ಯಾಕೆಂದರೆ ಕೊನೆಯ ಟೆಸ್ಟ್ ಪಂದ್ಯ ಕೂಡಾ ಇದೇ ಪಿಚ್‌ನಲ್ಲಿ ನಡೆಯುವುದರಿಂದ ಸರಿಯಾಗಿ ಈಗಿನಿಂದಲೇ ಅಭ್ಯಾಸ ನಡೆಸಿ ಎಂದು ಕಿವಿಮಾತು ಹೇಳಿದ್ದಾರೆ.
ಭಾರತ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಹಸಿರಾದ ವೇಗದ ಪಿಚ್‌ನಲ್ಲಿ ಆಡಲಿದೆ. ಆ ಪಿಚ್ ಕುರಿತಂತೆ ಭಾರತ ತಂಡ ಯಾವತ್ತೋ ದೂರು ಅಥವಾ ಟೀಕೆ ವ್ಯಕ್ತಪಡಿಸುವುದಿಲ್ಲ, ಬದಾಲಾಗಿ ಭಾರತದ ಬ್ಯಾಟ್ಸ್‌ಮನ್‌ಗಳು ತಮ್ಮ ಆಟವನ್ನು ಸುಧಾರಿಸಿಕೊಳ್ಳುವ ಬಗ್ಗೆ ಗಮನ ಹರಿಸುತ್ತಾರೆ. ಒರಟಾದ ಪಿಚ್‌ನಲ್ಲಿ ಜೇಮ್ಸ್ ಆಂಡರ್‌ಸನ್‌ರನ್ನು ಹೇಗೆ ಎದುರಿಸಬೇಕು ಎನ್ನುವುದರ ವಿರಾಟ್ ಕೊಹ್ಲಿ ಗಮನ ಹರಿಸುತ್ತಾರೆ. ಅದೇ ರೀತಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಅಶ್ವಿನ್ ಹಾಗೂ ಮುಖ್ಯವಾಗಿ ಅಕ್ಷರ್ ಪಟೇಲ್ ಅವರನ್ನು ಹೇಗೆ ಎದುರಿಸಬೇಕು ಎಂದು ಆಲೋಚಿಸುವುದು ಒಳಿತು ಎಂದು ಸ್ವಾನ್ ಇಂಗ್ಲೆಂಡ್ ಕ್ರಿಕೆಟಿಗರ ಕಿವಿ ಹಿಂಡಿದ್ದಾರೆ.
ನರೇಂದ್ರ ಮೋದಿ ಪಿಚ್ ಬಗ್ಗೆ ವ್ಯಂಗ್ಯವಾಡಿದ ಜೋ ರೂಟ್..!
ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವು ಮಾರ್ಚ್ 04ರಂದು ಅಹಮದಾಬಾದ್‌ನಲ್ಲಿ ಆರಂಭವಾಗಲಿದೆ. ಸದ್ಯ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.