
ಬೆಂಗಳೂರು: ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ನಾಕೌಟ್ ಪಂದ್ಯಗಳು ಸೋಮವಾರ ಆರಂಭಗೊಂಡಿದ್ದು,. 4 ಕ್ವಾರ್ಟರ್ ಫೈನಲ್ ಪೈಕಿ 2 ಪಂದ್ಯಗಳು ಸೋಮವಾರ ನಡೆಯಲವೆ. ಮೊದಲ ಕ್ವಾರ್ಟರ್‌ನಲ್ಲಿ ಕರ್ನಾಟಕ-ಮುಂಬೈ ತಂಡಗಳು ಮುಖಾಮುಖಿಯಾಗಿದ್ದು ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ
‘ಎ’ ಗುಂಪಿನಲ್ಲಿದ್ದ ರಾಜ್ಯ ತಂಡ ಆಡಿರುವ 7 ಪಂದ್ಯಗಳ ಪೈಕಿ 6ರಲ್ಲಿ ಗೆದ್ದಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ನಾಕೌಟ್‌ಗೇರಿದೆ. ಮಧ್ಯಪ್ರದೇಶ ವಿರುದ್ಧ ಅನಿರೀಕ್ಷಿತ ಸೋಲಿನ ಹೊರತಾಗಿಯೂ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆ. ಅದರಲ್ಲೂ ದೇವದತ್ ಪಡಿಕ್ಕಲ್ ಅಮೋಘ ಆಟವಾಡುತ್ತಿದ್ದು, 7 ಇನ್ನಿಂಗ್ಸ್‌ಗಳಲ್ಲಿ 4 ಶತಕ, 1 ಅರ್ಧಶತಕ ಸೇರಿದಂತೆ 640 ರನ್ ಗಳಿಸಿದ್ದಾರೆ.
ಅತ್ತ ಮುಂಬೈ ತಂಡದಲ್ಲಿ ಸರ್ಫರಾಜ್ ಖಾನ್ ಉತ್ತಮ ಲಯದಲ್ಲಿದ್ದು, 5 ಇನ್ನಿಂಗ್ಸ್‌ಗಳಲ್ಲಿ 303 ರನ್ ಗಳಿಸಿದ್ದಾರೆ. ಮುಂಬೈ ತಂಡ ಗುಂಪು ಹಂತದಲ್ಲಿ 7 ಪಂದ್ಯಗಳ ಪೈಕಿ 5ರಲ್ಲಿ ಗೆದ್ದಿದೆ.
ಮುಂಬೈ: ಅಂಗ್‌ಕೃಷ್ ರಘುವಂಶಿ, ಮುಶೀರ್ ಖಾನ್, ಸಿದ್ದೇಶ್ ಲಾಡ್(ನಾಯಕ), ಹಾರ್ದಿಕ್ ತೋಮೊರೆ(ವಿಕೆಟ್ ಕೀಪರ್), ಶಮ್ಸ್ ಮುಲಾನಿ, ಸಾಯಿರಾಜ್ ಪಾಟೀಲ್, ಸೂರ್ಯಾನ್ಶ್ ಶೆಡ್ಗೆ, ತನುಶ್ ಕೋಟ್ಯಾನ್, ಇಶಾನ್ ಮೂಲ್‌ಚಂದಾನಿ, ಮೋಹಿತ್ ಅವಸ್ಥಿ, ಓಂಕಾರ್ ತುಕರಾಮ್ ತಾರ್ಮಾಲೆ.
ಕರ್ನಾಟಕ: ಮಯಾಂಕ್ ಅಗರ್‌ವಾಲ್(ನಾಯಕ), ದೇವದತ್ ಪಡಿಕ್ಕಲ್, ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಕೃಷ್ಣನ್ ಶ್ರೀಜಿತ್(ವಿಕೆಟ್ ಕೀಪರ್), ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ವಿಜಯ್‌ಕುಮಾರ್ ವೈಶಾಕ್, ವಿದ್ಯಾಧರ್ ಪಾಟೀಲ್, ಅಭಿಲಾಷ್ ಶೆಟ್ಟಿ, ವಿದ್ವತ್ ಕಾವೇರಪ್ಪ.
2ನೇ ಕ್ವಾರ್ಟರ್‌ನಲ್ಲಿ ಉತ್ತರ ಪ್ರದೇಶ-ಸೌರಾಷ್ಟ್ರ ಮುಖಾಮುಖಿಯಾಗಿದ್ದು. ಇನ್ನೆರಡು ಪಂದ್ಯಗಳು ಮಂಗಳವಾರ ನಿಗದಿಯಾಗಿವೆ. ಕ್ವಾರ್ಟರ್ ಜೊತೆ ಸೆಮಿಫೈನಲ್, ಫೈನಲ್ ಪಂದ್ಯಗಳೆಲ್ಲವೂ ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಆಯೋಜನೆಗೊಂಡಿವೆ
ಪಂದ್ಯಗಳು ಆರಂಭ: ಬೆಳಗ್ಗೆ 9 ಗಂಟೆಗೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಹಾಟ್‌ಸ್ಟಾರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.